KEA issues dress code: ನಿಗಮ, ಮಂಡಳಿ ನೇಮಕಾತಿ ಪರೀಕ್ಷೆ : ಹಿಜಾಬ್ ಕಿವಿಯೋಲೆ ನಿಷೇಧ, ಅಭ್ಯರ್ಥಿಗಳಿಗೆ ಹೊಸ ಡ್ರೆಸ್ ಕೋಡ್, ಕೆಇಎ ಆದೇಶ ಕೇಳಿ ಬೆಚ್ಚಿ ಬಿದ್ದ ವಿದ್ಯಾರ್ಥಿನಿಯರು !

Education news KEA issues dress code for Karnataka run board and corporation recruitment exams

KEA issues dress code: ರಾಜ್ಯದಲ್ಲಿ ಇದೇ ತಿಂಗಳು, ನವೆಂಬರ್ 18 ಮತ್ತು 19 ರಂದು ನಡೆಯಲಿರುವ ವಿವಿಧ ನಿಗಮ ಮತ್ತು ಮಂಡಳಿಗಳ ನೇಮಕಾತಿ ಪರೀಕ್ಷೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ಮತ್ತು ಅತ್ಯಂತ ಕಟ್ಟು ನಿಟ್ಟಿನ ಆದೇಶ(KEA issues dress code) ಹೊರಡಿಸಿದೆ. ಪರೀಕ್ಷಾ ಸಂದರ್ಭ ಇದೀಗ ಹೊರಡಿಸಿರುವ ಡ್ರೆಸ್ ಕೋಡ್ ಆದೇಶ ಗಮನ ಸೆಳೆದಿದೆ.

ಪರೀಕ್ಷಾ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್‌ಗಳು, ಇಯರ್‌ ಫೋನ್‌ಗಳು, ಮೈಕ್ರೊಫೋನ್‌ಗಳು, ಬ್ಲೂಟೂತ್ ಸಾಧನಗಳು, ಪೆನ್ ಡ್ರೈವ್‌ಗಳು, ಮತ್ತು ಕೈಗಡಿಯಾರಗಳನ್ನು ಒಳಗೊಂಡಿರುವ ಹಲವು ನಿಷೇಧಿತ ವಸ್ತುಗಳ ಪಟ್ಟಿಯನ್ನು ಕೆಇಎ ಇದೀಗ ಬಿಡುಗಡೆ ಮಾಡಿದೆ. ಅಲ್ಲದೆ ಪೇಪರ್, ಪೆನ್ಸಿಲ್, ಎರೇಸರ್, ಜ್ಯಾಮಿಟ್ರಿ ಬಾಕ್ಸ್‌ಗಳು ಮತ್ತು ಲಾಗ್ ಟೇಬಲ್‌ಗಳನ್ನು ಸಹ ನಿರ್ಬಂಧಿಸಲಾಗಿದೆ.

ಏನೆಲ್ಲಾ ಡ್ರೆಸ್ ಕೋಡ್ ಕಡ್ಡಾಯ ?
ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂವುಗಳು ಅಥವಾ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್ ಸಾಧನಗಳ ಬಳಕೆಯನ್ನು ತಡೆಯಲು ಹಿಜಾಬ್ ಧರಿಸಲು ಅಥವಾ ಇನ್ನಾವುದೇ ಬಟ್ಟೆಯನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಾಸ್ಕ್ ಗಳನ್ನೂ ಸಹ ನಿಷೇಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಇನ್ಯಾವುದೇ ಲೋಹದ ಆಭರಣ ಧರಿಸುವುದು, ಅಥವಾ ಕಿವಿಯೋಲೆ, ಉಂಗುರ, ಡಾಬು, ಕೈ ಕಡಗ ಧರಿಸುವುದನ್ನು ಶುದ್ಧವಾಗಿ ನಿರ್ಬಂಧಿಸಲಾಗಿದೆ.

ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್, ಎತ್ತರದ ಹಿಮ್ಮಡಿಯ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ಸಹ ನಿರ್ಬಂಧಿಸಲಾಗಿದೆ. ಹಾಗೆಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ ಮತ್ತು ಸಾಧನ ಧರಿಸಲು ಅನುಮತಿ ನಿರಾಕರಿಸಲಾಗಿದೆ. ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸದ ಕಾರಣ ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಲು ತಿಳಿಸಲಾಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಧರಿಸುವ ಬಟ್ಟೆಗಳು ಹಗುರವಾಗಿದ್ದು, ಅದರಲ್ಲಿ ದೊಡ್ಡ ಎಂಬ್ರಾಯಿಡರಿಗಳು, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಶೂ ಹಾಕಿಕೊಂಡು ಕೂಡಾ ಪರೀಕ್ಷೆಗೆ ಹಾಜರಾಗುವಂತಿಲ್ಲ.

ಇದನ್ನೂ ಓದಿ: ಬೀದಿ ನಾಯಿಗೆ ಹೆದರಿದ ವಿಮಾನ : ಗೋವಾದಲ್ಲಿ ಇಳಿಯದೆ ಬೆಂಗಳೂರಿಗೆ ವಾಪಸ್ಸಾದ ವಿಸ್ತಾರಾ ವಿಮಾನ !

Leave A Reply

Your email address will not be published.