Drone pratap: ನಾನು ಅಪ್ಪನನ್ನು ನೋಡಬೇಕು ಎಂದು ಜೋರಾಗಿ ಅತ್ತ ಡ್ರೋನ್ ಪ್ರತಾಪ್, ದೊಡ್ಮನೆಯಲ್ಲಿ ಅಷ್ಟಕ್ಕೂ ಆಗಿದ್ದೇನು?

Entertainment bigg boss kannada season 10 drone Pratap crying because he wants to see his father

Drone pratap : Bigg boss 10 ನಲ್ಲಿ ದಿನೇ ದಿನೇ ಆಟಗಳ ಕಾವು, ಮೋಜು ಹೆಚ್ಚಾಗುತ್ತಲೇ ಇದೆ. ಹಿಂದಿನ ವಾರ ವರ್ತೂರ್ ಸಂತೋಷ್ ಅವರ ಹಟದಿಂದ ಯಾರು ಕೂಡ ಎಲಿಮಿನೇಟ್ ಆಗಿಲ್ಲ. ಹಾಗೆಯೇ ನಿನ್ನೆ ಸ್ಪರ್ಧಿಗಳ ಮನೆಯಿಂದ ಬಂದ ಊಟವನ್ನು ತಿಂದು ಎಲ್ಲರಿಗೂ ಖುಷಿ ಆಗಿದೆ. ಮತ್ತು ವರ್ತೂರ್ ಅವರ ಅಮ್ಮ ಕೂಡ ಬಂದು ಅವರ ಮನಸ್ಸು ಸರಿ ಆಗಿದೆ.

ಇಂದಿನ ಎಪಿಸೋಡ್ ನಲ್ಲಿ ಕೂಡ ಮನೆ ಮಂದಿಯ ಪೋಷಕರು ಬರೆದಿರುವ ಪತ್ರವನ್ನು ಓದಲು ಅವಕಾಶವನ್ನು ಬಿಗ್ ಬಾಸ್ ಮಾಡಿಕೊಟ್ಟಿದ್ದಾರೆ. ಆದರೆ ಕಂಡಿಷನ್ ಏನು ಎಂದರೆ, ಅಷ್ಟು ಜನರಲ್ಲಿ ಯಾರಾದರೂ ಮೂವರಿಗೆ ಮಾತ್ರ ತಮ್ಮ ಪೋಷಕರು ಬರೆದಿರುವ ಪತ್ರ ಓದಲು ಅವಕಾಶ. ಇದಕ್ಕಾಗಿ ಮನೆ ಮಂದಿಗೆ ಯಾರಿಗೆ ಪೋಷಕರನ್ನ ನೋಡುವ ಅವಕಾಶ ಕಲ್ಪಿಸಬೇಕೆಂದು ಆಯ್ಕೆ ಕೊಡುತ್ತಾರೆ.

ತನೀಷಾ ಅವರು ನಮ್ಮ ಮನೆಯಿಂದ ಮಾಡಿದ ಸ್ವೀಟ್ಸ್ ನನಗೆ ಸಿಕ್ಕಿಲ್ಲ ರೆಡಿಮೇಡ್ ಸ್ವೀಟ್ಸ್ ಅನ್ನ ಕಳಿಸಿದ್ದಾರೆ ಹಾಗಾಗಿ ನನ್ನ ಅಮ್ಮ ನನ್ನ ನೋಡಬೇಕೆಂದು ಅಳುತ್ತಾರೆ. ನಮ್ರತ ಗೌಡ ಅವರು ಪ್ರತಾಪ್ ಅವರಪ್ಪನಲ್ಲಿ ಮಾತನಾಡಿ ತುಂಬಾ ವರ್ಷಗಳೇ ಆಗಿದೆ ಹಾಗಾಗಿ ಅವರ ಪೇರೆಂಟ್ಸ್ ಬರೆದಿರುವ ಪತ್ರವನ್ನು ಓದಲಿ ಎಂದು ಕೋರಿಕೊಳ್ಳುತ್ತಾರೆ. ಕಾರ್ತಿಕ್ ಮಾತ್ರ ನಾನು ನನ್ನ ಅಮ್ಮ ನನ್ನ ನೋಡಬೇಕೆಂದು ಹೇಳುತ್ತಾರೆ.

ಹಾಗೆ ಡ್ರೋನ್ ಪ್ರತಾಪ್ (Drone pratap ) ಕೂಡ ನಾನು ನನ್ನ ಅಪ್ಪನಲ್ಲಿ ಮಾತಾಡಿ ತುಂಬಾ ವರ್ಷಗಳೇ ಆಗಿದೆ ಅವರಿಗೆ ನನ್ನ ಮೇಲೆ ಕೋಪ ಇದೆಯೋ ಇಲ್ಲವೋ ಎಂದು ನೋಡಬೇಕಿದೆ ಹಾಗಾಗಿ ನನಗೆ ಪತ್ರವನ್ನು ಓದಲು ಅವಕಾಶ ಮಾಡಿಕೊಡಿ ಎಂದು ಮಾತನಾಡುತ್ತಾರೆ.

ಎಲ್ಲದರ ಬಳಿಕ ಪ್ರತಾಪ್ ಅವರು ಬೆಡ್ರೂಮ್ ಗೆ ಹೋಗಿ ನಾನು ನನ್ನ ಅಪ್ಪನನ್ನು ನೋಡಬೇಕೆಂದು ಜೋರಾಗಿ ಅಳುತ್ತಾರೆ. ಸಂಗೀತ ಅವರು ಪ್ರತಾಪ್ ನನ್ನು ಸಮಾಧಾನ ಮಾಡುತ್ತಾರೆ. ಪೇರೆಂಟ್ಸ್ ಗಳು ಬರೆದಿರುವ ಪತ್ರಗಳನ್ನು ಓದುವ ಅವಕಾಶ ನೀಡುತ್ತಾರ ಎಂದು ಕಾದು ನೋಡಬೇಕಾಗಿದೆ. ಈ ಟಾಸ್ಕ್ ನಲ್ಲಿ ಯಾರಿಗೆಲ್ಲ ಈ ಸುಂದರ ಅವಕಾಶ ದೊರೆಯುತ್ತದೆ ಎಂದು ಬಿಗ್ ಬಾಸ್ ನಲ್ಲಿ ನೋಡಬೇಕು.

ಇದನ್ನೂ ಓದಿ: ಇಂದು ಬಾಗಿಲು ಮುಚ್ಚಲಿರುವ ಹಾಸನಾಂಬೆ: 10 ಲಕ್ಷಕ್ಕೂ ಹೆಚ್ಚು ಮಂದಿಯ ದರ್ಶನ, ಹಚ್ಚಿಟ್ಟ ನಂದಾದೀಪ ಬರುವ ವರ್ಷದ ತನಕ ಉರಿಯುವ ನಂಬಿಕೆಯಲ್ಲಿ… !

Leave A Reply

Your email address will not be published.