Bengaluru-Dharwad Vande Bharat Express: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ಬೆಳಗಾವಿ ತನಕ ವಿಸ್ತರಣೆ, ರಾತ್ರೋ ರಾತ್ರಿ ರೈಲ್ವೆ ಸಚಿವಾಲಯ ಆದೇಶ !

Karnataka news Bengaluru Dharwad vande Bharat express train extended till Belagavi latest news

Bengaluru-Dharwad Vande Bharat Express:  ಬೆಳಗಾವಿ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು (Vande Bharat Express) ಬೆಳಗಾವಿಯವರೆಗೆ (Belagavi) ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ. ಬೆಂಗಳೂರು- ಧಾರವಾಡದಿಂದ ರೈಲು( Bengaluru-Dharwad Vande Bharat Express)ಇನ್ನು ಮುಂದೆ ಬೆಳಗಾವಿಯವರೆಗೂ ಚಲಿಸಲಿದೆ.

ಬೆಂಗಳೂರಿನಿಂದ ಹೊರಡುವ ವಂದೇ ಮಾತರಂ ರೈಲು ಸಂಖ್ಯೆ 20661 ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು, ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ರೈಲು ಸಂಖ್ಯೆ 20662 ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಇದು ಮುಂಬರುವ ಬೆಂಗಳೂರು ಬೆಳಗಾವಿ ಬೆಂಗಳೂರು ವಂದೇ ಮಾತರಂ ಟ್ರೈನ್ ಷೆಡ್ಯೂಲ್.

ಆದರೆ ಇನ್ನೂ ಈ ಟ್ರೈನ್ ಓಡಾಟ ಶುರುವಾಗಿಲ್ಲ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ದಿನಾಂಕ ಇನ್ನೂ ನಿಗದಿಯಾಗಬೇಕಿದೆ. ವಂದೇ ಭಾರತ್ ಬೆಳಗಾವಿಯವರೆಗೂ ವಿಸ್ತರಿಸುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವರಿಗೆ ಪತ್ರ ಬರೆದಿದ್ದರು. ಅದರಂತೆ ಇದೀಗ ಬೆಳವಾವಿಗೆ ವಂದೆ ಮಾತರಂ ಸಾಗುವುದು ನಿಚ್ಚಳವಾಗಿದೆ. ಟ್ರೈನ್ ಸಂಚಾರ ಶುರುವಾಗಲು ದಿನಾಂಕ ಪ್ರಕಟಣೆಗೆ ಬಾಕಿ ಉಳಿದಿದೆ.

ಇದನ್ನೂ ಓದಿ: ಮನೆಯ ಟ್ಯಾಂಕ್ ಸ್ವಚ್ಛಗೊಳಿಸುವಾಗ ಎಚ್ಚರ: ಉಸಿರುಗಟ್ಟಿ ನಾಲ್ವರು ಸಾವು !

Leave A Reply

Your email address will not be published.