Latest News: ಈ ಮಹಿಳೆಗೆ ಗಂಡಸರ ಹತ್ತಿರ ಹೇಗೆ ಮಾತಾಡ್ಬೇಕು ಎಂಬುದೇ ಗೊತ್ತಿಲ್ವಂತೆ ! ನೀವು ಟ್ರೈನಿಂಗ್ ಕೊಡ್ತೀರಾ ?

latest-news-its-like-this-woman-doesnt-know-how-to-talk-to-men

ಇತ್ತೀಚಿನ ದಿನಗಳಲ್ಲಿ ಯುವ ಜನತೆ ನಿಜವಾದ ಪ್ರೀತಿಯನ್ನು ಪಡೆಯುವುದೇ ವಿರಳ. ಪ್ರೀತಿಯನ್ನು ಹುಡುಕುವ ಪ್ರಯತ್ನದಲ್ಲಿ ಮೋಸ ಹೋಗುವವರೇ ಹೆಚ್ಚು. ಪ್ರೀತಿಯ ನಿಜವಾದ ಅರ್ಥ ಮತ್ತು ಭಾವನೆಗಳ ಬಗ್ಗೆ ಗಮನ‌ಹರಿಸದ ಯುವ ಸಮಾಜ ಆಧುನಿಕತೆ‌ ಎಂಬ ರಥವನ್ನೇರಿ ಟೈಮ್ ಪಾಸ್ ಪ್ರೀತಿ ಎಂಬ ಪ್ರಪಾತಕ್ಕೆ ಬೀಳುತ್ತಿವೆ.

ಸಂಬಂಧಗಳಲ್ಲಿ ನಂಬಿಕೆಯ ಬಂಧವನ್ನು ಮುರಿದುಕೊಂಡು, ಪ್ರೀತಿ ಎಂಬ ಹೆಸರಿನಲ್ಲಿ ಮೋಸ ಮಾಡುತ್ತ ಜೀವನವನ್ನೇ ಹಾಳು ಮಾಡಿಕೊಳ್ಳುವ ಯುವ ಜನತೆಯ ಕುರಿತಾದ ನಿದರ್ಶನಗಳನ್ನು ‘ಬೇಬಿ”ಯಂತಹ ಸಿನಿಮಾಗಳಲ್ಲಿ ನೋಡಿಯೇ ಇರುತ್ತೀರಿ. ಆದರೆ ಇಲ್ಲಿ ಮಹಿಳೆಯೋರ್ವರು ನಿಜವಾದ ಪ್ರೀತಿಯನ್ನು ಪಡೆಯುವ ಉದ್ದೇಶದಿಂದ ಮದುವೆಯಗದೇ ಉಳಿದಿದ್ದು ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾರೆ.

ಆಕೆಗೆ ಬಂದಿರುವ ಮದುವೆ ಪ್ರಸ್ತಾವನೆಗಳು ಒಂದಲ್ಲ! ಎರಡಲ್ಲ! 400 ಕ್ಕಿಂತಲೂ ಹೆಚ್ಚು! ಎಲ್ಲರ ಪ್ರಪೋಸ್ ಗಳನ್ನು ನಿರಾಕರಿಸಿದ ಆಕೆ ಇದೀಗ ತಮ್ಮ ಬದುಕಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. 55ರ ಹರೆಯದಲ್ಲೂ ನೂರಾರು ಯುವಕರ ಮನಸ್ಸನ್ನು ಕದ್ದಿರುವ ಆ ಮಹಿಳೆಯ ಹೆಸರು ಫ್ರಾನ್ ಸಾಯರ್ (Fran Sawer). ತನಗೆ ಇಷ್ಟು ವಯಸ್ಸಾದರೂ ಯಾಕೆ ಈ ಒಂಟಿ ಬಾಳು‌‌, ತಾನು ಕಳೆದ ಏಳು ವರ್ಷಗಳಿಂದಲೂ ಏಕೆ ಬ್ರಹ್ಮಚಾರಿ ಮತ್ತು ಅವಿವಾಹಿತೆಯಾಗಿದ್ದೇನೆ ಎಂಬುದನ್ನು ಫ್ರಾನ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಫ್ರಾನ್ ಸಾಯರ್ ಅವರು ವಿಚ್ಚೇದಿತೆ ಹಾಗೂ ಒಂಟಿ ತಾಯಿಯಾಗಿದ್ದು, ಇಲ್ಲಿಯವರೆಗೆ ಆಕೆಗೆ ಪ್ರಪೋಸ್ ಮಾಡಿದ 400ಕ್ಕೂ ಹೆಚ್ಚು ಪುರುಷರ ಸಾಲಿನಲ್ಲಿ 18 ರ ಹರೆಯದ ಹುಡುಗರಿಂದ ಹಿಡಿದು ವಯೋವೃದ್ಧರ ವರೆಗೂ ಸೇರಿದ್ದಾರೆ. ಕುತೂಹಲದ ಸಂಗತಿಯೇನೆಂದರೆ ಆಕೆ ಇಲ್ಲಿಯವರೆಗೂ ಯಾರ ಪ್ರಸ್ತಾವನೆಯನ್ನು ಕೂಡ ಒಪ್ಪಿಕೊಂಡಿಲ್ಲ.

ಎಲ್ಲವೂ ಟೈಮ್ ಪಾಸ್ :
18 ರಿಂದ 21 ವಯಸ್ಸಿನ ಹುಡುಗರು ತನ್ನೊಂದಿಗೆ ಸಂಬಂಧವನ್ನು ಹೊಂದಲು ಆಸಕ್ತಿ ತೋರುತ್ತಾರೆಯೇ ಹೊರತು, ತನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ ಎಂದು ಹೇಳಿಕೊಂಡಿರುವ ಫ್ರಾನ್ “ನನಗೆ ಒಳ್ಳೆಯ ಗಂಡನನ್ನು ಹಲವಾರು ಡೇಟಿಂಗ್ ಅಪ್ಲಿಕೇಶನ್ಸ್ ಮೂಲಕ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೊದಲಿಗೆ ಚೆನ್ನಾಗಿ ಮಾತನಾಡುವ ಪುರುಷರ ವ್ಯಕ್ತಿತ್ವಗಳು ಬದಲಾಗುತ್ತದೆ. ಅವರ ಮಾತುಕತೆಯಲ್ಲಿ ನನಗೆ ಸಂಬಂಧ ಮುದುವರೆಸುವ ಮಾನಸಿಕ ಚೌಕಟ್ಟು ಇರಲಿಲ್ಲ. ಟೈಮ್ ಪಾಸ್ ಗಾಗಿ ಮಾತಾನಾಡುವ ಇಂತಹ ಸಂದರ್ಭಗಳಲ್ಲಿ ಸಂಬಂಧಗಳಿಂದ ಹಿಂದೆ ಸರಿಯಬೇಕಾಗುತ್ತದೆ.” ಎಂದು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಗಂಡಸರಿಗೆ ಹೇಗೆ ಮಾತನಾಡಿಸಬೇಕೆಂದೇ ತಿಳಿದಿಲ್ಲ:
ಕೆಲವು ಮಿಡಿಯಾಗಳ ಕಥೆಗಳ ಪ್ರಕಾರವಾಗಿ ಹಲವು ಪುರುಷರಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳೊಂದಿಗೆ ಹೇಗೆ ಮಾತನಾಡಬೇಕು , ತಮ್ಮ ವರ್ತನೆ ಹೇಗಿರಬೇಕು ಎಂಬುದೇ ತಿಳಿದಿಲ್ಲ. ತಮ್ಮ ಸಂಗಾತಿ ಜತೆಗಿನ ಭಾವನೆಗಳಿಗೆ ಗೌರವ ನೀಡದ ಸೋಷಿಯಲ್ ಮೀಡಿಯಾಗಳು ನಿಜವಾದ ಪ್ರೀತಿಗೆ ಮಾರಕವಾಗಿದೆ ಎಂದು ಫ್ರಾನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.