Health Tips: ಈ ರೀತಿಯ ಉಪ್ಪನ್ನು ಊಟಕ್ಕೆ ಬಳಸ್ಬೇಡಿ – ಇದ್ರಲ್ಲಿದೆ ಅಪಾಯ !

ಉಪ್ಪು ಊಟಕ್ಕೆ ವಿಶೇಷವಾದ ರುಚಿಯನ್ನು ನೀಡುತ್ತದೆ. ಆದ್ದರಿಂದಲೇ “ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ” ಎಂಬ ಮಾತಿದೆ. ಆದರೆ ನಾವು ನಮ್ಮ ಆರೋಗ್ಯವನ್ನು ಮಾಡಿಕೊಳ್ಳಲು ಉಪ್ಪನ್ನು ಮಿತವಾಗಿ ಸೇವಿಸಬೇಕಾಗುತ್ತದೆ. ಉಪ್ಪು ನಮ್ಮ ದೇಹದ ಜೀವಕೋಶಗಳಿಗೆ ಪೋಷಕಾಂಶವನ್ನು ಒದಗಿಸುವ ಎಲೆಕ್ಟ್ರೋಲೈಟ್ ಗಳು ಹಾಗೂ ದ್ರವಗಳನ್ನು ಸಮತೋಲನಗೊಳಿಸುವಲ್ಲಿ ಸಹಕಾರಿಯಾಗಿದೆ.

ಉಪ್ಪು ಪ್ರಮುಖವಾಗಿ ಆಸಿಡ್- ಬೇಸ್ ಸಮತೋಲನವನ್ನು ಕಂಟ್ರೋಲ್ ಮಾಡುವಲ್ಲಿ ಪಾತ್ರವನ್ನು ವಹಿಸುತ್ತದೆ. ಸೋಡಿಯಂ ಅಂಶ ಅತಿಯಾಗಿರುವುದರಿಂದ ಅದರ ಸೇವನೆಯು ವಿಪರೀತವಾಗಿದ್ದರೆ, ಸೋಡಿಯಂ ಅಂಶ ನಮ್ಮ ದೇಹದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಆದರೆ, ಉಪ್ಪು ಅನೇಕ ವಿಧಗಳಲ್ಲಿ ಲಭ್ಯವಿದ್ದು ಖನಿಜಾಂಶ ಮತ್ತು ಶುದ್ಧೀಕರಣದ ವಿಧಾನವನ್ನು ಅವಲಂಬಿಸಿದೆ. ಅವುಗಳಲ್ಲಿ ಯಾವ ಉಪ್ಪು ಅಡಿಗೆಗೆ ಒಳ್ಳೆಯದು ಎಂಬ ಬಗ್ಗೆ ತಿಳಿಯೋಣ ಬನ್ನಿ.

ಹಿಮಾಲಯನ್ ಪಿಂಕ್ ಉಪ್ಪು:

ಈ ಉಪ್ಪು ಗುಲಾಬಿ ಬಣ್ಣದಲ್ಲಿದ್ದು, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂನಂತಹ ಖನಿಜಗಳನ್ನು ಒಳಗೊಂಡಿರುತ್ತದೆ. ಆರೋಗ್ಯ ಕಾಪಾಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವ ಈ ಉಪ್ಪು ನಮ್ಮ ದೇಹದ ಎಲ್ಲಾ ಭಾಗಗಳಿಗೆ ಪೋಷಕಾಂಶಗಳನ್ನು ಹೀರಿಕೊಳ್ಳಲು ಹೆಲ್ಪ್ ಮಾಡುತ್ತದೆ. ಆದರೆ ಈ ಖನಿಜಗಳು ತುಂಬಾ ಕಡಿಮೆ ಪ್ರಮಾಣದಲ್ಲಿ ಲಭ್ಯವಿರುತ್ತದೆ.

ಟೇಬಲ್ ಸಾಲ್ಟ್ :

ನಾವು ಅಡುಗೆಯಲ್ಲಿ ಬಳಸುವ ಸಾಮಾನ್ಯವಾಗಿ ಬಳಸುವ ಉಪ್ಪು ಇದಾಗಿದ್ದು, ಸುಲಭವಾಗಿ ಕರಗುವ ಗುಣವನ್ನು ಹೊಂದಿರುತ್ತದೆ. ಉಪ್ಪಿನ ಇತರ ಪ್ರಭೇದಗಳಿಗೆ ಹೋಲಿಸಿದಾಗ ಈ ಖನಿಜ ದೊರೆಯುವುದು ತುಂಬಾನೇ ಕಡಿಮೆ. ದೇಹಕ್ಕೆ ಉಪಯುಕ್ತವಾದ ಅಯೋಡಿನ್ ಅಂಶವಿರುವ ಈ ಉಪ್ಪು ಅಯೋಡಿಕರಿಸಿದ ಉಪ್ಪಾಗಿಯೂ ಲಭ್ಯವಿದೆ. ಇದನ್ನು ಸಮುದ್ರದ ನೀರು ಅಥವಾ ಉಪ್ಪು ಸರೋವರದ ನೀರಿನಿಂದ, ಸೂರ್ಯನ ಶಾಖದಿಂದ ಆವಿಯಾಗುವ ವಿಧಾನವನ್ನು ಬಳಸಿ ಪಡೆಯಲಾಗುತ್ತದೆ.

ಸಮುದ್ರದ ಉಪ್ಪು:

ಸಮುದ್ರದ ನೀರನ್ನು ಆವಿಯಾಗಿಸಿ ಉತ್ಪಾದಿಸಲ್ಪಟ್ಟ ಈ ಉಪ್ಪು ಸಮುದ್ರದ ಖನಿಜಾಂಶಗಳನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ಆದ್ದರಿಂದ ಇದರ ರುಚಿ ಬೇರೆ ಉಪ್ಪಿಗಿಂತ ವಿಭಿನ್ನವಾಗಿರುತ್ತದೆ. ಇದು ಸಮುದ್ರದ ಉಪ್ಪಿನಲ್ಲಿರುವ ಖನಿಜಾಂಶ ಆಗಿರುವ ಕಾರಣ ಇದನ್ನು ಆಹಾರದಲ್ಲಿ ಬಳಸುವುದರಿಂದ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಹಾಗೂ ಆರೋಗ್ಯದ ಮೇಲೆ ಇದರ ಪ್ರಭಾವ ಕೊಂಚವೂ ಇರುವುದಿಲ್ಲ.
ಪೊಟ್ಯಾಶಿಯಂ ಸಾಲ್ಟ್:

ಈ ಉಪ್ಪು ಟೇಬಲ್ ಸಾಲ್ಟ್ ನ 30% ನಷ್ಟು ಮಾತ್ರವೇ ಸೋಡಿಯಂನ್ನು ಹೊಂದಿದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಏಕೆಂದರೆ ಇದರಲ್ಲಿನ ಪೊಟ್ಯಾಶಿಯಂ ಸೋಡಿಯಂನ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯವರ್ಧಕವಾಗಿದೆ. ರಕ್ತದೊತ್ತಡ (BP) ಇದ್ದವರು ಬೇರೆ ಉಪ್ಪಿನ ಬದಲಾಗಿ ಈ ಪೊಟ್ಯಾಶಿಯನ್ ಉಪ್ಪನ್ನು ಬಳಸುವುದು ಸೂಕ್ತ.

ಕಪ್ಪು ಉಪ್ಪು :

ಈ ಕಪ್ಪು ಉಪ್ಪನ್ನು ಹಿಮಾಲಯದ ಜ್ವಾಲಾಮುಖಿಯ ಅವಶೇಷಗಳಿಂದ ಪಡೆಯಲಾಗುತ್ತದೆ. ಇದು ಇದು ಕಬ್ಬಿಣಾಂಶ, ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಹೊಂದಿದ್ದು ಸಮೃದ್ಧವಾಗಿದೆ. ಆದರೆ ಇದು ಸ್ವಲ್ಪ ಕಟು ವಾಸನೆಯನ್ನು ಹೊಂದಿರುವುದರಿಂದ ಇದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು.

Leave A Reply

Your email address will not be published.