Dating App: ಡೇಟಿಂಗ್ ಆ್ಯಪ್‌ಗಳಿಗೆ ಬೆಲೆಯೇ ಇಲ್ಲ – ಲವ್ ಮಾಡೋಕೆ ಮೂಡ್ ಇಲ್ವಾ?

Here is complete information about Dating App

ಈ ಕಂಪ್ಯೂಟರ್ ಯುಗದಲ್ಲಿ, ನಾವೆಲ್ಲೇ ಇದ್ದರೂ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸುವುದು ಅತಿ ಸುಲಭ. ಇತ್ತೀಚಿನ ದಿನಗಳಲ್ಲಿ ತನ್ನ ಒಂಟಿತನವನ್ನು ಹೋಗಲಾಡಿಸಲು ಅಥವಾ ತನಗೆ ಇಷ್ಟವಾಗುವ ಸಂಗತಿಯನ್ನು ಹುಡುಕಲು ಯುವಜನತೆ ಡೇಟಿಂಗ್ APP ನ ಮೊರೆಹೋಗುತ್ತಾರೆ. ಹೊಸದಾದ ಸಂಬಂಧಗಳನ್ನು ಹುಡುಕುತ್ತಾ, ತಮಗೆ ಇಷ್ಟವಾದ ಸಂಗತಿಯನ್ನು ಆಯ್ಕೆ ಮಾಡಲು ಸಹಕಾರಿಯಾಗುವ ಈ ಆಯಪ್ ಅನ್ನು ಜನರು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ತಮಗೆ ಆಸಕ್ತಿ ಎನಿಸುವ ವ್ಯಕ್ತಿಗಳನ್ನು ಸಂಪರ್ಕಿಸಿ ಅವರನ್ನು ಮೀಟ್ ಆಗುವ ಜನರ ವ್ಯಕ್ತಿಗತ ಅಭಿಲಾಷೆಯನ್ನು ಈ ಅಪ್ಲಿಕೇಶನ್ ಗಳು ಪೂರ್ತಿಗೊಳಿಸುತ್ತದೆ. ಇಂತಹ ವಿಶೇಷತೆಯುಳ್ಳ ಅಪ್ಲಿಕೇಶನ್ ಗಳೇ ಯಾಕೆ ತನ್ನ ಆದ್ಯತೆಯನ್ನು ಕಳೆದುಕೊಳ್ಳುತ್ತಿವೆ ಎಂಬುದೇ ಇಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ.

ವರದಿಗಳ ಪ್ರಕಾರ, ಪ್ರಸ್ತುತ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಷನ್ಗಳಿಗೆ ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಒಮ್ಮೊಮ್ಮೆ ಈ ಅಪ್ಲಿಕೇಶನ್ ಗಳಲ್ಲಿ ಚಂದಾದಾರರಾಗಿರುವ ವ್ಯಕ್ತಿಗಳು ಸುಳ್ಳು ಮಾಹಿತಿಗಳನ್ನು ನೀಡಿರುತ್ತಾರೆ. ಹೀಗೆ ನಕಲಿ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳಿಂದಾಗಿ ಜನರು ಮೋಸ ಹೋಗಿರುವ ಘಟನೆಗಳಿಗೆ ಎಷ್ಟೋ ಉದಾಹರಣೆಗಳಿವೆ. ಈ ಕಾರಣದಿಂದಾಗಿ ದಿನೇ ದಿನೇ ಇದು ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿದೆ.

ಷೇರು ಮಾರುಕಟ್ಟೆಯಲ್ಲೂ ಬೆಲೆ ಕುಸಿತ :

ಷೇರು ಮಾರುಕಟ್ಟೆಯಲ್ಲಿ ಗರಿಷ್ಟ ಸ್ಥಾನದಲ್ಲಿದ್ದ ಡೇಟಿಂಗ್ ಆ್ಯಪ್‌ ಕಂಪನಿಯೊಂದು ಅತಿದೊಡ್ಡ ಮಟ್ಟದಲ್ಲಿ ಕುಸಿತವನ್ನು ಕಂಡಿದೆ. ಹೆಸರುವಾಸಿಯಾಗಿದ್ದ ಬಂಬಲ್ (Bumble) ಡೇಟಿಂಗ್ ಆ್ಯಪ್‌ ನ ಕಂಪನಿಯು 2021ರಲ್ಲಿ ಆರಂಭಗೊಂಡ ಸಂದರ್ಭದಲ್ಲಿ ಇದರ ಷೇರಿನ ಬೆಲೆ $70 ರಲ್ಲಿತ್ತು. ಆದರೆ ಪ್ರಸ್ತುತ ಇದರ ಮೌಲ್ಯ ಕನಿಷ್ಠ ಮಟ್ಟಕ್ಕೆ ಬಂದಿದ್ದು, ಷೇರು ಬೆಲೆ $14 ಕ್ಕೆ ಕುಸಿದಿದೆ. ಈ ನಡುವೆಯೇ ಡೇಟಿಂಗ್ ಆ್ಯಪ್‌ ಹೊಸ CEO ಅನ್ನು ನೇಮಿಸುವ ನಿರ್ಧಾರ ಮಾಡಿದೆ.

ಡೇಟಿಂಗ್ ಆ್ಯಪ್‌ಗಳ ಮೇಲೆ ಯಾರಿಗೂ ಆಸಕ್ತಿ ಇಲ್ಲವೇ?

ಹೌದು, ಡೇಟಿಂಗ್ ಆ್ಯಪ್‌ಗಳು ಹಲವಾರು ಗೊಂದಲಗಳನ್ನು ಸೃಷ್ಟಿಸುವುದರಿಂದ ಜನರು ಇದರ ಮೇಲೆ ಆಸಕ್ತಿ ತೋರುವುದಿಲ್ಲ. ಇದು ಷೇರುಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಬೀರುವ ಮೂಲಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ, ಎಂದು ಹಲವಾರು ಸಮೀಕ್ಷೆಗಳು ತೋರಿಸಿಕೊಟ್ಟಿವೆ. ಇಂತಹ ಆ್ಯಪ್‌ಗಳಿಂದಾಗಿ, ಸಂಬಂಧಗಳನ್ನು ಹುಡುಕುವ ಬಳಕೆದಾರರು ಬೇರೆಬೇರೆ ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ಹಲವರು ದೂರನ್ನು ನೀಡಿದ್ದಾರೆ. ನಂಬಿಕೆಯುಳ್ಳ ಸಂಬಂಧವನ್ನು ಬಯಸುವ ನಮಗೆ ಇಂತಹ ಆ್ಯಪ್‌ಗಳಿಂದ ಅಪಾಯಕಾರಿ ಪರಿಸ್ಥಿತಿಗಳು ಎದುರಾಗಿದೆ ಎಂಬುದು ಡೇಟಿಂಗ್ ಆ್ಯಪ್‌ ಯೂಸರ್ ಗಳ ಅಪವಾದವಾಗಿದೆ.

ಯಾವುದೇ ಸಂಬಂಧಕ್ಕೂ ಗ್ಯಾರಂಟಿಯಿಲ್ಲ:

ಕೋವಿಡ್ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದ ಈ ಆ್ಯಪ್‌ಗಳು ಈಗ ದುರ್ಬಳಕೆಯಾಗುತ್ತಿವೆ. ಸ್ನೇಹಕ್ಕಿಂತ ಹೆಚ್ಚಾಗಿ ತಮ್ಮ ಕಾಮನೆಗಳನ್ನು ಪೂರೈಸಿಕೊಳ್ಳಲು ಕೆಲವರು ಡೇಟಿಂಗ್ ಆ್ಯಪ್‌ ನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಕೆಟ್ಟದಾದ ಸಂಭಾಷಣೆಗಳಿಂದಲೇ ಅವರ ಉದ್ದೇಶ ಸರಿ ಎಲ್ಲ ಎಂಬುದು ತಿಳಿಯುತ್ತದೆ ಎಂದು ಈ ಆ್ಯಪ್‌ ನ ಬಳಕೆದಾರರಾಗಿರುವ ನತಾಶಾ ಅವರು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡೇಟಿಂಗ್ ಆ್ಯಪ್‌ಗಳಲ್ಲಿ ವ್ಯಾಪಾರದ ದೃಷ್ಟಿ :

ಸಮೀಕ್ಷೆಯೊಂದರಲ್ಲಿ, ಬೋಸ್ಟನ್ ಯುನಿವೆರ್ಸಿಟಿಯ ಮಿಡೀಯಾ ಸೈನ್ಸ್ ನ ಪ್ರಾಧ್ಯಾಪಕರಾಗಿರುವ ಕ್ಯಾಥರಿನ್ ಕೊಡುಟೋ ಅವರನ್ನು ಕೇಳಿದಾಗ, ಜನರು ಅತಿಯಾಗಿ Dating Appಗಳಲ್ಲಿ ಚಂದಾದಾರರಾಗಿದ್ದರೆ. ವ್ಯಾಪಾರದ ಉದ್ದೇಶದಿಂದ ಈ ಆ್ಯಪ್‌ಗಳು ಜನರನ್ನು ಸಂಪರ್ಕಿಸುತ್ತಿವೆ. ಆದರೆ ಜನರು ಈ ವಿಷಯವನ್ನು ಅರಿತುಕೊಂಡು, ಅವರಿಗೆ ಸೂಕ್ತವಾದ ಆಯ್ಕೆಯನ್ನು ಆಯ್ದುಕೊಳ್ಳಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

Leave A Reply

Your email address will not be published.