Foods for weight loss: ಈ ಒಂದು ಆಹಾರ ತಿಂದ್ರೆ ಸಾಕು, ಒಂದೇ ವಾರದಲ್ಲಿ ದೇಹದ ತೂಕ ಕಡಿಮೆ ಆಗುತ್ತೆ !

Lifestyle health news Foods for weight loss eat these foods to loss weight

Foods for weight loss: ಒಂದು ವೇಳೆ ದೇಹದ ತೂಕ ಹೆಚ್ಚಾದ್ರೆ ಏನ್ಮಾಡೋದು ಎಂಬ ಯೋಚನೆಯಿಂದಾಗಿ ಎಷ್ಟೋ ಜನ ಸರಿಯಾಗಿ ಊಟ ಮಾಡುವುದಕ್ಕೂ ಭಯಪಡುತ್ತಾರೆ. ತಮ್ಮ ದೇಹದ ತೂಕ ಜಾಸ್ತಿ ಇರೋರು ಡಯೆಟ್ ಮಾಡುತ್ತ ಅರ್ಧ ಹೊಟ್ಟೆಯಲ್ಲೇ ಕಾಲಕಳೆಯುತ್ತಾರೆ. ಆದ್ರೇ, ಹೊಟ್ಟೆ ತುಂಬಾ ಊಟ ಮಾಡಿಕೊಂಡು ನಿಮ್ಮ ತೂಕವನ್ನು ಇಳಿಸಬಹುದು(Foods for weight loss). ಹೇಗೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.

ತೂಕ ಇಳಿಸಿಕೊಳ್ಳಲು ವ್ಯಾಯಾಮದಷ್ಟೇ ಪ್ರಾಮುಖ್ಯತೆ ನೀಡಬೇಕಾಗಿರೋದು ನಾವು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ. ಆದಷ್ಟು ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡೋದು ಅತಿಮುಖ್ಯ. ನಮ್ಮ ದೇಹದ ಸಮತೋಲನವನ್ನು ಕಾಪಾಡುವಲ್ಲಿ ಪ್ರೊಟೀನ್, ಜೀವಸತ್ವ ಮತ್ತು ಖನಿಜಾಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ನಮ್ಮ ದೇಹಕ್ಕೆ ಆರೋಗ್ಯಯುತ ಸತ್ವವನ್ನು ನೀಡುತ್ತಾ, ದೇಹದ ಸಮತೋಲನವನ್ನು ಕಾಪಾಡುತ್ತಾ, ನಮ್ಮ ತೂಕವನ್ನು ಕಡಿಮೆ ಮಾಡುವ ಖಾದ್ಯಗಳಲ್ಲಿ ‘ಸಲಾಡ್’ ಕೂಡ ಒಂದು.

ನಾವು ಸಲಾಡ್ ನ್ನು ನಮಗೆ ಇಷ್ಟ ಬಂದ ಹೊತ್ತಿನಲ್ಲೊ ಅಥವಾ ಊಟದ ಜೊತೆಗೋ ಸೇವಿಸುತ್ತೇವೆ. ಆದರೆ ತಜ್ಞರ ಪ್ರಕಾರ, ಸಲಾಡ್ ನ್ನು ಈ ರೀತಿ ಸೇವಿಸೋದು ಸೂಕ್ತವಲ್ಲ. ಅದನ್ನು ನಿರ್ದಿಷ್ಟವಾಗಿ ಇಂತದ್ದೇ ಸಮಯದಲ್ಲಿ ಸೇವಿಸಿದರೆ ಮಾತ್ರ ಈ ಖಾದ್ಯದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಸಲಾಡ್ ನ್ನು ಯಾವ ಸಮಯದಲ್ಲಿ ಸೇವಿಸುವುದು ಉತ್ತಮ? ನೋಡೋಣ ಬನ್ನಿ.

ಸಲಾಡ್ ನ್ನು ಯಾವುದೇ ಊಟದ ಜೊತೆಗೆ ತಿನ್ನದೇ, ಇದನ್ನು ಉಪಹಾರದ ಮತ್ತು ಊಟದ ನಡುವಿನ ಹೊತ್ತಲ್ಲಿ ತಿನ್ನುವುದು ಉತ್ತಮ. ಮದ್ಯಾಹ್ನ ಅಥವಾ ರಾತ್ರಿ ಊಟದ ಅರ್ಧ ಗಂಟೆಗಿಂತಲೂ ಮೊದಲು ಸಲಾಡ್ ನ್ನು ಸೇವಿಸುವುದು ಒಳ್ಳೆಯದೆಂದು ತಜ್ಞರು ಹೇಳುತ್ತಾರೆ. ಹಾಗೆಯೇ, ಮನೆಯಲ್ಲೇ ರೆಡಿ ಮಾಡಿದ ಸಲಾಡ್ ಊಟಕ್ಕಿಂತ ಮುಂಚೆ ಬ್ರೆಡ್ನೊಂದಿಗೆ ತಿನ್ನಲು ರುಚಿಕರ. ಹಾಗೂ ಇದರಿಂದ ಹೊಟ್ಟೆ ತುಂಬುವುದರ ಜೊತೆಗೆ ನಿಮ್ಮ ದೇಹದ ತೂಕವು ಕೂಡ ಕಡಿಮೆ ಆಗುತ್ತದೆ.

ಇದನ್ನೂ ಓದಿ: ನಾಯಿ ಕಚ್ಚಿದ್ರೆ ಹೈಕೋರ್ಟ್ ಪರಿಹಾರ ನೀಡುತ್ತಾ? ಪ್ರತಿ ಹಲ್ಲಿಗೂ ಭಾರೀ ಮೊತ್ತ ಕೊಡಬೇಕಂತೆ!

Leave A Reply

Your email address will not be published.