Chili: ಮೆಣಸಿನ ಕಾಯಿಯನ್ನು ತಿಂದ್ರೆ ಯಾವ ರೋಗಗಳು ಬರಲ್ಲ! ನಿಜ, ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​

No diseases can be caused by eating chili

ಊಟದಲ್ಲಿ ಮೆಣಸಿನಕಾಯಿ ಸಿಕ್ಕರೆ ಅದನ್ನು ಬದಿಗಿರಿಸಿ, ನಂತರ ಬಿಸಾಡುತ್ತೇವೆ. ಆದರೆ ನಮ್ಮ ದೇಹಕ್ಕೆ ಹಸಿರು ಮೆಣಸಿನಕಾಯಿ ನೀಡುವಷ್ಟು ಪೋಷಕಾಂಶಗಳು ಬೇರೆ ಯಾವ ತರಕಾರಿಯಿಂದಲೂ ಸಿಗುವುದಿಲ್ಲ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಹಸಿಮೆಣಸಿನಕಾಯಿ ದೇಹಕ್ಕೆ ಏನೇನು ಉಪಯೋಗಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅನ್ನ ಸಾಂಬಾರ್ ಸೇರಿದಂತೆ ಇತರ ಭಕ್ಷಗಳ ಜೊತೆ ಬಳಸುವಂತಹ ಹಸಿರು ಮೆಣಸಿನಕಾಯಿ ಊಟದಲ್ಲಿ ಉಪ್ಪಿನಷ್ಟೇ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ವಿಟಮಿನ್ ಎ,ಬಿ,ಸಿ ಮತ್ತು ತಾಮ್ರದ ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಹೆಚ್ಚಾಗಿರುತ್ತದೆ.

ಹಾಗೆಯೇ ಊಟದ ಪರಿಮಳವನ್ನು ಹೆಚ್ಚಿಸುವಂತಹ ಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಫೈಬರ್ ಮಟ್ಟ ಹೆಚ್ಚಾಗಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಿಂದ ಎಸಿಡಿಟಿಯಂತಹ ತೊಂದರೆಗಳು ದೂರವಾಗುತ್ತದೆ‌. ರೋಗನಿರೋಧಕ ಶಕ್ತಿಯ ಉನ್ನತ ಮೂಲಗಳಾಗಿದ್ದು ಮತ್ತು ದೇಹದಲ್ಲಿರುವ ಸಮಸ್ಯೆಗಳನ್ನು ಬೇಗ ಗುಣಪಡಿಸುವ ಮೂಲಕ ತುಂಬಾ ಪರಿಣಾಮಕಾರಿಯಾಗಿದೆ‌.

ಹಸಿರು ಮೆಣಸಿನಕಾಯಿಯಲ್ಲಿರುವ ವಿಟಮಿನ್ ಎ ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗೂ ಇದು ಅನೇಕ ಸಂಶೋಧಕರ ಪ್ರಕಾರ, ಇದು ನಮ್ಮ ದೇಹ ವಿರೋಧಿ ಬ್ಯಾಕ್ಟೀರಿಯಾ ಗಳನ್ನು ತೆಗೆದುಹಾಕುತ್ತದೆ. ಹಾಗೂ ಇದರಲ್ಲಿರುವ ಖಾರವು ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ನಲ್ಲಿ ಇರಿಸುತ್ತದೆ.

ಗ್ರೀನ್ ಚಿಲ್ಲಿಯಲ್ಲಿ ಇರುವ ವಿಟಮಿನ್ ಸಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಡಿಮೆ ಮಾಡುವುದರ ಮೂಲಕ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕವಾಗಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶವಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಹಾಗಾಗಿ ಹಸಿರು ಮೆಣಸಿನಕಾಯಿ ನಮ್ಮ ದೇಹದ ಆರೋಗ್ಯಕ್ಕೆ ಬಹುಮುಖ್ಯ ಕೊಡುಗೆಯನ್ನು ನೀಡುತ್ತದೆ.

Leave A Reply

Your email address will not be published.