Intrsting News: ದೀಪಾವಳಿಗೂ ಸ್ಮಶಾನಕ್ಕೂ ಏನು ಸಂಬಂಧ? ಇಲ್ಲಿದೆ ನೋಡಿ ವಿಚಿತ್ರ ಸತ್ಯ!

Intresting news What is the relationship between Diwali and graveyard

ಸಾಮಾನ್ಯವಾಗಿ ಸ್ಮಶಾನಕ್ಕೆ ಹೋಗಲು ಎಲ್ಲರೂ ಹೆದರುತ್ತಾರೆ. ಆದರೆ ಸ್ಮಶಾನಕ್ಕೆ ಹೋಗುವಾಗ ಖುಷಿ ಖುಷಿಯಿಂದ, ಹೊಸ ಬಟ್ಟೆಗಳನ್ನು ಹಾಕಿಕೊಂಡು ಹೋಗುವುದನ್ನು ನೋಡಿದ್ದೀರಾ ? ನೋಡಿರಲಿಕ್ಕಿಲ್ಲ ಏಕೆಂದರೆ ಅಲ್ಲಿನ ಜನತೆಗೂ ಇಲ್ಲಿನ ಜನರಿಗೂ ತುಂಬಾ ವಿಭಿನ್ನತೆಗಳಿವೆ. ನಾವೆಲ್ಲರೂ ದೀಪಾವಳಿಗೆ ಮನೆಯಲ್ಲಿ ದೀಪ ಹಚ್ಚುತ್ತೇವೆ. ಆದರೆ ಅಲ್ಲಿಯ ಜನ ದೀಪಾವಳಿಯಂದು ದೀಪ ಹಚ್ಚೋದು ಸ್ಮಶಾನದಲ್ಲಿ!

ಹೌದು, ಕರೀಂ ನಗರ ಜಿಲ್ಲೆಯಲ್ಲಿನ ಒಂದು ಸಾಮಾಜಿಕ ಕುಟುಂಬ ಆರು ದಶಕಗಳಿಂದಲೂ ಈ ವಿಚಿತ್ರ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಇಲ್ಲಿ ಸ್ಮಶಾನದ ಪೂಜೆ ಮಾಡುವುದೇ ಒಂದು ಸಂಪ್ರದಾಯ. ತಮ್ಮ ಪೂರ್ವಜರನ್ನು ಸ್ಮರಿಸುತ್ತಾ, ಅವರಿಗಾಗಿ ದೀಪಗಳನ್ನು ಇಡುತ್ತಾ , ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಅವರಿಗೆ ಅದೊಂದು ಹಬ್ಬ.

ಕರೀಂ ನಗರದ ಕಾರ್ಖಾನ ಗಡ್ಡಾದಲ್ಲಿರುವ ದಲಿತವರ್ಗಕ್ಕೆ ಸೇರಿರುವಂತಹ ಕುಟುಂಬಗಳು ಹಿಂದೂ ಸಮಾಧಿಯಲ್ಲಿ ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ಹಬ್ಬಕ್ಕಿಂತ ಒಂದು ವಾರ ಮೊದಲೇ ಸ್ಮಶಾನವನ್ನು ಸ್ವಚ್ಛಗೊಳಿಸಿ, ಗೋರಿಗಳಿಗೆ ಬಣ್ಣ ಹಚ್ಚಿದ ನಂತರ ಹಬ್ಬದ ದಿನಗಳಲ್ಲಿ ಹೂವಿನ ಅಲಂಕಾರ ಮಾಡುತ್ತಾರೆ. ತನ್ನ ಕುಟುಂಬದವರೊಂದಿಗೆ ಒಗ್ಗೂಡಿ ಸ್ಮಶಾನದಲ್ಲಿ ತಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯುವುದು ಅಲ್ಲಿನ ಸಂಸ್ಕೃತಿ.

ತಮ್ಮ ಪೂರ್ವಜರಿಗೆ ಇಷ್ಟವಾಗುವಂತಹ ಭಕ್ಷ ಭೋಜನಗಳನ್ನು ತಯಾರಿಸಿ ಸ್ಮಶಾನದಲ್ಲಿ ಬಡಿಸುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿದ್ದವರು ಕೂಡ ಆ ದಿನ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮೊದಲು ಪಿತೃದೇವತೆಗಳಿಗೆ ಆಹಾರವನ್ನು ಸಮರ್ಪಿಸಿದ ನಂತರ ಆಯಾ ಕುಟುಂಬಗಳು ತಮ್ಮ ಪೂಜೆಯಲ್ಲಿ ನಿರತವಾಗುತ್ತದೆ.

ಪೂರ್ವಜರನ್ನು ನೆನೆಯುವುದೇ ನಿಜವಾದ ದೀಪಾವಳಿ. ಪೂರ್ವಜರಿಲ್ಲದೆ ನಾವೇ ಇಲ್ಲ. ಈ ಪೂಜೆಯು ಪೂರ್ವಜರ ಜೊತೆಗಿರುವಂತೆ ಭಾವನೆಯನ್ನು ಮೂಡಿಸುತ್ತದೆ ಮತ್ತು ಮನಸ್ಸಿಗೆ ಆರೋಗ್ಯಕರ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳುತ್ತಾರೆ ಅಲ್ಲಿನ ಸ್ಥಳೀಯರು‌.

Leave A Reply

Your email address will not be published.