New Scam: ಆಧಾರ್, ಪಾನ್ ಕೇಳಿದ್ರೆ ಕೊಡಲೇಬೇಡಿ – ನಿಮಗೆ ಗೊತ್ತಿಲ್ಲದೆಯೇ ನಡೀತಿದೆ ಈ ದಂಧೆ !

ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಕೇಳ್ತಾರೆ ಅಂತ, ಯಾರೆ ಕೇಳಿದರು ಕೊಡುತ್ತಿದ್ದೀರಾ? ಈ ಕಾರ್ಡ್ ಗಳನ್ನು ಕೊಟ್ಟರೆ ಅಷ್ಟೊಂದು ತೊಂದರೆ ಏನು ಇಲ್ಲ ಅಂತ ನಿರ್ಲಕ್ಷ ತೋರುತ್ತಿದ್ದೀರಾ? ಹಾಗಾದ್ರೆ ಅಪಾಯ ತಪ್ಪಿದ್ದಲ್ಲ ! ಯಾಕೆ ಅಂತೀರಾ? ಇಲ್ಲಿದೆ ನೋಡಿ ನಿಮ್ಮನ್ನು ಬೆಚ್ಚಿಬೀಳಿಸುವ ಶಾಕಿಂಗ್ ಸತ್ಯ!!

ಹೌದು, ಎಲ್ಲ ಕಡೆಯಲ್ಲೂ ಕೇಳುತ್ತಾರೆಂದು ನೀವು ಹಿಂದೆ ಮುಂದೆ ಯೋಚಿಸದೆ ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ಕೊಡುತ್ತಿದ್ದರೆ, ಹೀಗೆ ಮಾಡುವುದನ್ನು ಇಂದೇ ನಿಲ್ಲಿಸಿ. ಯಾಕೆಂದರೆ, ಹೀಗೆ ಕಾರ್ಡ್ ಗಳನ್ನು ತೆಗೆದುಕೊಂಡು ದುರ್ಬಳಕೆ ಮಾಡುವ ಜಾಲವೊಂದು ಪತ್ತೆಯಾಗಿದ್ದು, ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಬೇರೆಯವರು ನಿಮ್ಮ ಹೆಸರಿನ ಬ್ಯಾಂಕ್ ಖಾತೆಗಳನ್ನು ತೆರೆದು, ನಿಮಗೆ ಗೊತ್ತಿಲ್ಲದಂತೆಯೇ ಬೇನಾಮಿಯಾಗಿ ಉಪಯೋಗಿಸಿಕೊಳ್ಳುತ್ತಿರುವ ಬೃಹತ್ ಜಾಲವೊಂದು ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ಹೌದು, ಈ ಸಂಬಂಧ ಮತ್ತಿಕೆರೆಯಲ್ಲಿ ಕೇರಳ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದು, ನಕಲಿ ಖಾತೆ ಪ್ರಕರಣವು ಬೆಳಕಿಗೆ ಬಂದಿದೆ.

ಈ ಜಾಲವನ್ನು ಹೇಗೆ ಸೃಷ್ಟಿಸಿದ್ದಾರೆ ?

ಯಾರ ಬಳಿಯೂ ಎರಡೆರಡು ಆಧಾರ್ ಕಾರ್ಡ್ ಅಥವಾ ಇರುವುದಿಲ್ಲ. ಹಾಗಾಗಿ ಬೇರೆಯವರ ಆಧಾರ್ ಕಾರ್ಡ್ ಉಪಯೋಗಿಸುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಮೊದಲು ಇವರು ಸ್ವಂತ ಬ್ಯಾಂಕ್ ಅಕೌಂಟ್ ಹೊಂದಿರದವರು ಅಥವಾ ಆಧಾರ್ ಕಾರ್ಡ್ ಅನ್ನು ಹೆಚ್ಚಾಗಿ ಉಪಯೋಗಿಸಿದವರನ್ನು ಹುಡುಕುತ್ತಾರೆ. ದುಡ್ಡಿನ ಅವಶ್ಯಕತೆ ಇರುವವರು ಅಥವಾ ಬಡವರನ್ನೇ ಗುರಿಯಾಗಿಸಿಕೊಂಡ ಇವರು, ಅವರಿಂದ ಆಧಾರ್ ಕಾರ್ಡ್ ,ಪಾನ್ ಕಾರ್ಡ್ ಹಾಗೂ ಅವರ ಸಹಿಯನ್ನು ಹಾಕಿ 10 ಸಾವಿರ ರೂಪಾಯಿಗಳನ್ನು ನೀಡುತ್ತಾರೆ. ನಂತರ ಇವರು ಹೊಸ ಬ್ಯಾಂಕ್ ಖಾತೆಗಳನ್ನು ರಚಿಸುವುದಕ್ಕೋಸ್ಕರ ಇವರ ಹೆಸರಿನಲ್ಲಿ ಹೊಸ ಸಿಮ್ ಪರ್ಚೇಸ್ ಮಾಡುತ್ತಾರೆ. ಇದರ ಮೂಲಕ ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಇದರಿಂದ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಕೆವೈಸಿ ಪಡೆದುಕೊಳ್ಳುತ್ತಾರೆ.

ಇದರಿಂದ ಇವರಿಗೆ ಲಾಭವೇನು?

ಬೇಕಾಬಿಟ್ಟಿ ಕಪ್ಪು ಹಣವನ್ನು ಈ ಬೇನಾಮಿ ಖಾತೆಗಳನ್ನು ಕೂಡಿಡುವ ಇವರು ಹೀಗೆ ಕೋಟಿಗಟ್ಟಲೆ ಹಣವನ್ನು ಕೂಡಿಡುವುದರಿಂದ ಟ್ಯಾಕ್ಸ್ ಕಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಮೋಸಮಾಡುವ ಇವರಿಗೆ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಆದರೆ ಇವರಿಂದ ಕಾರ್ಡ್ ಮತ್ತು ಸಹಿಯನ್ನು ಕೊಟ್ಟು ದುಡ್ಡನ್ನು ತೆಗೆದುಕೊಂಡ ಬಡವರು ಕೋಟಿಗಟ್ಟಲೆ ದುಡ್ಡಿನ ತೆರಿಗೆಯ ಭಾರವನ್ನು ಮುಂದೊಂದು ದಿನ ಹೊರಬೇಕಾಗುತ್ತದೆ. ಹಾಗಾಗಿ ಇಂತಹ ದಂಧೆಗಳ ಬಗ್ಗೆ ಆದಷ್ಟು ಎಚ್ಚರದಿಂದಿರುವುದು ಒಳ್ಳೆಯದು.
ವಿದೇಶದಿಂದಲೇ ಮಾಹಿತಿ ಪಡೆದು ನಕಲಿ ಖಾತೆ ದಂದೆ ನಡೆಸುತ್ತಿದ್ದ ಆರೋಪಿ :
ದುಬೈನಲ್ಲಿ ಕುಳಿತುಕೊಂಡು ಸೂಚನೆ ಕೊಡುತ್ತಿದ್ದ ಕಿಂಗ್ ಪಿನ್ ಎಂಬವನ ಸೂಚನೆಯಂತೆ ಕೇರಳ ಮೂಲದ ಐವರು ಬೆಂಗಳೂರಿನಲ್ಲಿ ಬಡವರನ್ನು ದುಡ್ಡಿನ ಆಮಿಷ ಒಡ್ಡಿ ಕರೆತಂದು , ಹತ್ತು ಸಾವಿರ ಕೊಟ್ಟು ಕಾರ್ಡುಗಳನ್ನು ಪರ್ಚೆಸ್ ಮಾಡುತ್ತಾರೆ. ನಂತರ ಬ್ಯಾಂಕ್ ದುಬೈನ ಕಿಂಗ್ ಪಿನ್ ಗೆ ಮಾಹಿತಿಗಳನ್ನು ರವಾನೆ ಮಾಡುತ್ತಾರೆ. ನಂತರ ಅವನು ತನ್ನ ಕೋಟ್ಯಂತರ ರೂಪಾಯಿ ವ್ಯವಹಾರಗಳನ್ನು ಈ ಬ್ಯಾಂಕ್ ಖಾತೆಗಳ ಮೂಲಕ ನಿರ್ವಹಿಸುತ್ತಾನೆ. ಬ್ಯಾಂಕ್ ಖಾತೆಯಲ್ಲಿರುವ ಹೆಸರಿನ ವ್ಯಕ್ತಿಗೆ ಈ ಅರಿವೇ ಇರುವುದಿಲ್ಲ. ಒಂದು ವೇಳೆ ಗೊತ್ತಾದರೂ ಆ ಬ್ಯಾಂಕ್ ಖಾತೆಯನ್ನು‌ ಉಪಯೋಗಿಸಲು ಆಗುವುದಿಲ್ಲ.

ಕಿಡಿಗೇಡಿಗಳು ಸಿಕ್ಕಿಬಿದ್ದಿದ್ದು ಹೇಗೆ ?

ಬೇನಾಮಿ ಖಾತೆಗಳ ದಂಧೆ ನಡೆಸುತ್ತಿದ್ದ ವ್ಯಕ್ತಿಗಳು ಬೆಂಗಳೂರಿನ ಮತ್ತಿಕೆರೆಯಲ್ಲಿ ಮನೆಯಲ್ಲಿ ಆಫೀಸ್ ಮಾಡಿಕೊಂಡಿದ್ದರು . ಇತ್ತೀಚೆಗೆ ಮಂಜೇಶ್ ಎಂಬಾತ ತನ್ನ ಸ್ನೇಹಿತನೊಂದಿಗೆ ಮತ್ತಿಕೆರೆಗೆ ಹೋಗಿದ್ದ. ಈ ವೇಳೆ ಮಂಜೇಶ್‌ ಸ್ನೇಹಿತ ಪಾನ್ & ಆಧಾರ್ ಕಾರ್ಡನ್ನು ಕೇಳಿದ್ದು, 10,000 ರೂ. ಕೊಡ್ತಾರೆ ಅಂತ ಹೇಳಿದ. ಆದ್ರೆ ಆ ಜಾಗದಲ್ಲಿದ್ದ ಬಾಂಕ್ ಪುಸ್ತಕ ಮತ್ತು ದಾಖಲೆಗಳ ರಾಶಿಯನ್ನು ನೋಡಿ, ಅನುಮಾನ ಗೊಂಡ ಮಂಜೇಶ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿಯನ್ನು ನೀಡಿದ. ಆ ಪ್ರಕಾರವಾಗಿ ತನಿಖೆ ಕೈಗೊಂಡ ಪೊಲೀಸರಿಗೆ 150ಕ್ಕೂ ಹೆಚ್ಚು ಬೇನಾಮಿ ಬ್ಯಾಂಕ್ ಖಾತೆಗಳು ದೊರಕಿದೆ. ಎಲ್ಲಾ ಬ್ಯಾಂಕ್ ಖಾತೆಗಳನ್ನು ಫೀಸ್ ಮಾಡಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Leave A Reply

Your email address will not be published.