Bengaluru: ಶಾಪ್ ಕ್ಲೀನ್ ಮಾಡು ಅಂದ್ರೆ ಹೀಗೆ ಮಾಡೋದಾ? ಕೆಲಸಗಾರನ ಕಾರ್ಯದಿಂದ ಮಾಲಿಕ ಶಾಕ್!

Bengaluru crime news jewellery shop worker theft gold in nagarathpet latest news

Bengaluru: ಪರಿಚಿತರೇ ಮೋಸ ಮಾಡುವ ಈ ಕಾಲದಲ್ಲಿ ಅಂಗಡಿ ಮಾಲೀಕನೋರ್ವ ಕೆಲವೇ ದಿನಗಳ ಪರಿಚಯವಿರುವ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟ ಕಾರಣ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಹೌದು ಅಪರಿಚಿತರನ್ನು ನಂಬಿ ಕೆಲಸ ಕೊಡುವ ಮೊದಲು ನೂರು ಬಾರಿ ಯೋಚಿಸ್ಬೇಕು ಎಂಬುದಕ್ಕೆ ಬೆಂಗಳೂರಿನಲ್ಲಿ (Bengaluru) ನಡೆದ ಘಟನೆಯೊಂದು ನಿದರ್ಶನವಾಗಿದೆ.

ಬೆಂಗಳೂರಿನ ನಗರತ್‌ಪೇಟೆಯಲ್ಲಿರುವ ಕಾಂಚನ ಜ್ಯೂವೆಲರ್ಸ್‌ನ ಮಾಲೀಕರಾಗಿರುವಂತಹ ಅರವಿಂದ್ ತನ್ನ ಮನೆಗೆ ಕೆಲಸ ಕೇಳಿಕೊಂಡು ಬಂದಿದ್ದ ಖೇತರಾಮ್ ಎಂಬ ವ್ಯಕ್ತಿಗೆ ತನ್ನ ಮನೆಯಲ್ಲಿಯೇ ಕೆಲಸ ಕೊಟ್ಟಿದ್ದರು. ಕೆಲಸಕ್ಕೆ ಸೇರಿದ ಕೆಲಸಕ್ಕೆ ಸೇರಿದ ಎರಡೇ ತಿಂಗಳಲ್ಲಿ ಆತ ತನ್ನ ಮಾಲೀಕನ ನಂಬಿಕಸ್ತ ವ್ಯಕ್ತಿಯಾಗಿದ್ದ. ಅನಿವಾರ್ಯವಾಗಿ ಮುಂಬೈಗೆ ಹೋಗಿ ಬರಬೇಕಾಗಿದ್ದ ಕಾರಣ ಮನೆಯ ಅರವಿಂದ್ ತಾನು ಬರುವವರೆಗೆ ಅಂಗಡಿಯನ್ನು ಕ್ಲೀನ್ ಮಾಡುವಂತೆ ಖೇತಾರಾಮ್ ಗೆ ಹೇಳಿ ತನ್ನ ಜುವೆಲ್ಲರ್ ಶಾಪ್ ನ ಕೀಲಿ ಕೈಯನ್ನು ಕೊಟ್ಟು ಹೋಗಿದ್ದಾರೆ. ಆದರೆ ಆನಂತರ ನಡೆದಿದ್ದೇ ಬೇರೆ.

ಯಜಮಾನ ನಂಬಿಕಸ್ತನಾಗಿದ್ದ ಈ ಖೇತರಾಮ್ ತನ್ನ ಅಸಲು ಬಣ್ಣವನ್ನು ತೋರಿಸಿದ್ದಾನೆ. ಎಷ್ಟು ದಿನದಿಂದ ಕಾದಿದ್ದನೋ ಏನೊ? ತನ್ನ ಕೈಗೆ ಜ್ಯುವೆಲ್ಲರಿ ಶಾಪ್ನ ಕಿ ಬಂದಿದ್ದೆ ತಡ , ತನ್ನ ಸ್ನೇಹಿತ ರಾಕೇಶ್ ನನ್ನು ಕರೆದುಕೊಂಡು ಜ್ಯುವೆಲ್ಲರಿ ಅಂಗಡಿಗೆ ಬಂದಿದ್ದಾನೆ. ನಂತರ ಇಬ್ಬರು ಒಟ್ಟಿಗೆ ಸೇರಿ ಸಿಸಿಟಿವಿ ಕನೆಕ್ಷನ್ ಗಳನ್ನು ಕಟ್ ಮಾಡಿದ್ದಾರೆ. ಬಳಿಕ ಬರೋಬ್ಬರಿ 4 ಕೆಜಿಗೂ ಹೆಚ್ಚು ಚಿನ್ನಾಭರಣ, 34 ಕೆಜಿ ಬೆಳ್ಳಿ ಆಭರಣ ಹಾಗೂ ಹಳೇ ಕಾಲದ ನಾಣ್ಯಗಳನ್ನು ಒಟ್ಟು 4 ಬ್ಯಾಗ್‌‌ಗಳಲ್ಲಿ ತುಂಬಿಕೊಂಡು ಹೊತ್ತೊಯ್ದಿದ್ದಾರೆ.

ಕೆಲವು ದಿನಗಳ ನಂತರ ಹಿಂತಿರುಗಿ ಬಂದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್! ತಾನು ನಂಬಿದ್ದ ಕೆಲಸಗಾರ ಉಂಡ ಮನೆಗೆ ದ್ರೋಹ ಬಗೆದ ವಿಷಯ ತಿಳಿದಿದಂತಹ ಮಾಲಿಕ ತಕ್ಷಣ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಅರವಿಂದ್ ರಿಂದ ದೂರನ್ನು ಪಡೆದುಕೊಂಡು ತನಿಖೆ ನಡೆಸಿದ ಹಲಸೂರು ಗೇಟ್ ಪೊಲೀಸರು ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆಯ ವೇಳೆ ಆ ಚಿನ್ನವನ್ನು ಕರಗಿಸಿ ಬಿಸ್ಕೆಟ್ ಮಾಡಿ, ನಂತರ ರಾಜಸ್ಥಾನದಲ್ಲಿ ಚಿನ್ನ, ಬೆಳ್ಳಿ, ನಾಣ್ಯಗಳನ್ನು ಮಾರಿದ್ದಾಗಿ ಬಾಯ್ಬಿಟ್ಟಿದ್ದಾರೆ. ಆನಂತರ ಅವರ ಬಳಿ ಉಳಿದಿದ್ದ 1 ಕೆಜಿ 624 ಗ್ರಾಂ ಚಿನ್ನ, 6 ಕೆಜಿಗೂ ಹೆಚ್ಚು ಬೆಳ್ಳಿಯನ್ನ ವಶಕ್ಕೆ ಪಡೆಯಲಾಗಿದೆ‌.‌ ಹಾಗಾಗಿ ಬೆಂಗಳೂರಲ್ಲಿ ಯಾರನ್ನೇ ಆದರೂ ಸುಲಭವಾಗಿ ನಂಬುವ ಮೊದಲು ಒಮ್ಮೆ ಯೋಚಿಸೋದೇ ಒಳ್ಳೆಯದು.

ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ‘ಶ್ಯಾಡೋ ಸಿಎಂ’ ! ಏನಿದು ವಿಷ್ಯ ?

Leave A Reply

Your email address will not be published.