Big Boss Ishani: ದರ್ಶನ್ ಜೊತೆಗೆ ಇಶಾನಿ ಫೋಟೋ ವೈರಲ್‌ ! ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ್ರಾ ಇಶಾನಿ ?

Big Boss 10 Ishani's photo with Darshan has gone viral

ಪ್ರಸ್ತುತ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇರುವ ಸ್ಪರ್ಧಿಗಳೆಲ್ಲರೂ ತಮ್ಮದೇ ರೀತಿಯ ಆಟವನ್ನು ಉತ್ತಮವಾಗಿ ಆಡುತ್ತಿದ್ದಾರೆ. ಹಾಗೆಯೇ ಚೆನ್ನಾಗಿ ಆಟ ಆಡ್ತಿದ್ದ ಮೈಕಲ್ ಜೊತೆಗಿದ್ದ ರಾಪರ್ ಇಶಾನಿಯವರು ಈಗೀಗ ಅಷ್ಟೊಂದು ಕಾಣಿಸಿಕೊಳ್ಳುತ್ತಾನೆ ಇರ್ಲಿಲ್ಲ.

ಈ ವಾರದ ನಾಮಿನೇಷನ್ ಲಿಸ್ಟ್ ನಲ್ಲಿರುವ ಇವರು ಈಗೀಗ ದೊಡ್ಡ್ಮನೆಯಲ್ಲಿ ತನ್ನ ಆಟವನ್ನೇ ಬಿಟ್ಟುಕೊಟ್ಟಂತಿದೆ. ಆದರೆ ಈ ವೀಕೆಂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಇಶಾನಿ ಫೋಟೋಗಳು ಭರ್ಜರಿಯಾಗಿ ವೈರಲ್ ಆಗ್ತಾ‌ ಇದೆ. ಹಾಗಾದ್ರೆ ಈ ಸಲ ಈಶಾನಿ ಬಿಗ್ ಬಾಸ್ ಮನೆಯಿಂದ ಹೊರಬಂದ್ರಾ? ದಚ್ಚು ಜೊತೆಗಿನ ಫೋಟೋ ಯಾಕೆ ಇಷ್ಟು ವೈರಲ್ ಆಗ್ತಾ ಇದೆ? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಇವರು ತಮ್ಮದೇ ಸಾಂಗ್ ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ವಿದೇಶದಲ್ಲಿದ್ದರೂ ಅಲ್ಲಿಂದಲೇ ಕೆಲವು ಹಾಡುಗಳನ್ನು ಸಂಯೋಜನೆ ಮಾಡ್ತಿದ್ದ ಇವರು, ಬಿಗ್ ಬಾಸ್ ಗೆ ಆಯ್ಕೆಯಾಗಿದ್ದರು. ಆದರೆ ದೊಡ್ಮನೆಗೆ ಹೋದ ನಂತರ ಇವರ ಸದ್ದು ಅಷ್ಟೇನೂ ಇರಲಿಲ್ಲ. ಮೊದಮೊದಲು ದೊಡ್ಮನೆಯಲ್ಲಿ ಒಂದಷ್ಟು ಹಾಡುಗಳನ್ನು ಹಾಡುತಿದ್ರು. ಆದರೆ ಈಗ ಈಶಾನಿ ಯಾಕೋ ತುಂಬಾನೇ ಸೈಲೆಂಟ್ ಮೂಡ್ ಗೆ‌ ಹೋಗ್ತಾ ಇದ್ರು. ಈಗೀಗ ಮೈಕಲ್ ಜೊತೆ ಜಗಳವಾಡೋದು, ಅಳೋದು, ಇಲ್ಲವೇ ಸುಮ್ಮನೆ ಅವಾಜ್ ಹಾಕುವುದು, ಇಂತಹ ಕೆಲಸಗಳಲ್ಲೇ ಇಶಾನಿ ಬಿಜಿಯಾಗಿದ್ದರು.

ಇದನ್ನೆಲ್ಲಾ ವೀಕ್ಷಿಸಿದ ನಂತರ ವೀಕ್ಷಕರಿಗೆ ಇಶಾನಿ ಅಷ್ಟೊಂದು ಇಷ್ಟವಾಗುವುದಿಲ್ಲ. ಆದರೂ ಇಶಾನಿ ಇನ್ನೂ ದೊಡ್ಮನೆಯಲ್ಲೇ ಉಳಿದಿದ್ದಾರೆ. ಹಾಗಂತ ಇನ್ನೂ ತುಂಬಾ ದಿನ ಅಲ್ಲೇ ಇರೋ ಸಂಭವ ಕಾಣಿಸ್ತಾ ಇಲ್ಲ. ಆದರೆ ಇವರು ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡದೆ ಇದ್ರೂನು, ಹೊರಗಡೆ ಇವರ ಫೋಟೋಗಳು ಭಾರಿ ಸದ್ದು ಮಾಡ್ತಾ ಇದೆ. ಹಾಗೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕೆಲ ಒಂದಷ್ಟು ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇಶಾನಿಗೆ ದರ್ಶನ್ ಅವರು ಕೇಕ್ ತಿನ್ನಿಸುತ್ತಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದ್ದು, ಇಶಾನಿ ಬರ್ತಡೆ ದಿನ ದರ್ಶನ್ ಜೊತೆಗೆ ತೆಗೆದ ಫೋಟೋಗಳಿವು ಎನ್ನಲಾಗಿದೆ. ದರ್ಶನ್ ರವರ ಮನೆಗೆ ಯಾರೇ ಅತಿಥಿಗಳು ಬಂದರೂ, ಅಭಿಮಾನಿಗಳೇ ಆದ್ರೂ, ಇದೇ ರೀತಿ ಪ್ರೀತಿಯಿಂದಲೇ ವೆಲ್ಕಮ್ ಮಾಡುತ್ತಾರೆ. ಹಾಗೆಯೇ ಬರ್ತಡೇ ದಿನ ಕೇಕ್ ಕಟ್ ಮಾಡಿಸಿ ಶುಭ ಹಾರೈಸಿದ್ದ ಫೋಟೋ ಇದೆನ್ನಬಹುದು.

Leave A Reply

Your email address will not be published.