Accident: ನಿದ್ದೆಯಿಂದ ಸೀದಾ ಚಿರನಿದ್ರೆಗೆ ! ಹೇಗಾಯ್ತು ಈ ಭೀಕರ ಅಪಘಾತ ?

Latest news Five people died in a car accident in Tamil Nadu

ಗುರುವಾರ ತಮಿಳುನಾಡಿನ ಕಾರು ಅಪಘಾತದಲ್ಲಿ ಐವರು ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಇನ್ನೊಂದು ಭೀಕರ ಅಪಘಾತ ನಡೆದಿದ್ದು, ವಾಯುವೇಗದಲ್ಲಿ ಬಂದ ಎಸ್‌ಯುವಿ ವಾಹನವು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹಲವು ಸಾವು ನೋವು ಉಂಟಾಗಿರುವ ಘಟನೆಯು ಶನಿವಾರದಂದು ನಡೆದಿದೆ.

ಈ ಅಪಘಾತ ವು ಜಾರ್ಕಂಡ್ ನಲ್ಲಿ ನಡೆದಿದ್ದು, ಶನಿವಾರದಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ವೇಗವಾಗಿ ಚಲಿಸುತ್ತಿದ್ದ SUV ವಾಹನವು ರಸ್ತೆ ಬದಿಯಲ್ಲಿ ಇದ್ದ ಮರವೊಂದಕ್ಕೆ ಡಿಕ್ಕಿ ಆಗಿದೆ. ಕಾರಿನಲ್ಲಿದ್ದವರು ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಥೋರಿಯಾ ಎಂಬ ಗ್ರಾಮದಿಂದ ಸುಮಾರು 40 ಕಿಲೋ ಮೀಟರ್ ದೂರದಲ್ಲಿನ ಟಿಕೋಡಿಹ್ ಬಳಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಅಲ್ಲಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಮದುವೆ ಸಮಾರಂಭದ ನಂತರ ರಾತ್ರಿಯೇ ಪ್ರಯಾಣ ಮುಂದುವರಿಸಿದ ಈ 10 ಮಂದಿ, ಶನಿವಾರ ಬೆಳಗಿನ ಜಾವ ಸುಮಾರು 3:00 ಹೊತ್ತಿಗೆ ಜಾರ್ಖಂಡ್ನ ಗಿರಿಧರ್ ಜಿಲ್ಲೆಯ ಬಾಗ್ಮಾರದ ಮೂಲಕ ಸಾಗುತ್ತಿರುವ ವೇಳೆಗೆ ನಿದ್ದೆ ಮಂಪರಿನಲ್ಲಿದ್ದ ಚಾಲಕ ತನ್ನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ದಾರನ ಅಪಘಾತದಲ್ಲಿ ಇವರು ಮಂದಿ ಆಗಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಇಬ್ಬರು ಮಕ್ಕಳು ಸೇರಿ ಉಳಿದ ಐವರು ಗಂಭೀರ ಗಾಯಗೊಂಡಿದ್ದಾರೆ.

ಈ ಘಟನೆಯು ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗ್ಮಾರಾದಲ್ಲಿ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಗಿರಿದಿಹ್ ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ಸಿಂಗ್ ಅವರು “ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಈ ಅಪಘಾತ ಜರುಗಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ ಉಳಿದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.

Leave A Reply

Your email address will not be published.