Bigg boss: ಆರ್ಯವರ್ಧನ್​ಗೆ ಟಾಂಟ್​ ಕೊಟ್ಟ ಕಿಚ್ಚ! ಸ್ಟೇಜ್​ ಮೇಲೆ ಕೂಲ್​ ಆಗಿ ಮಾತಾಡಿದ್ರು ಸುದೀಪ್​​

Entertainment news bigg boss kannada Aryavardhan was taunted by Kichcha Sudeep

Bigg boss 10 ನಲ್ಲಿ ಶನಿವಾರ ನಡೆಯುವ ವಾರದ ಪಂಚಾಯ್ತಿ ಕಿಚ್ಚನ ಜೊತೆಯಲ್ಲಿ ಎಪಿಸೋಡ್​ ಬರೋದೇ ಎಲ್ಲರೂ ಕಾಯ್ತ ಇರ್ತಾರೆ. ಹಾಗೆಯೇ ಈ ಟೈಮ್​ನಲ್ಲಿ ಒಳ್ಳೆಯ TRP ರೇಟಿಂಗ್​ ಕೂಡ ಹೈ ಬಂದಿರುತ್ತದೆ. ಮತ್ತು ಈ ವಾರದ ಟ್ವಿಸ್ಟ್​ ಏನಪ್ಪಾ ಅಂದ್ರೆ ಡಬಲ್​ ಎಲಿಮಿನೇಷನ್​. ಯೆಸ್​, ನಿನ್ನೆ ಅಂದರೆ ಶನಿವಾರ ಇಶಾನಿ ಮನೆಯಿಂದ ಹೊರಗೆ ಹೋಗಿದ್ದಾರೆ. ಇಂದು ಭಾನುವಾರ ಭಾಗ್ಯಶ್ರೀ ಎಲಿಮಿನೇಟ್​ ಆಗ್ತಾರೆ ಎಂಬ ಮಾತುಗಳು ಕೇಳ್ತಾ ಇದೆ.

ಇವುಗಳ ನಡುವೆ ಒಂದು ಹೈಲೆಟ್ ಆಗಿದೆ. ಬಿಗ್​ ಬಾಸ್​ 9(Bigg boss 9) ಲ್ಲಿ ಇದ್ದ ಆರ್ಯವರ್ಧನ್​ ಗುರೂಜಿಗೆ ಸುದೀಪ್​ ಟಾಂಟ್​ ಇಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಯಾರಿಗೆ ಬೇಕ್ರಿ, ಅದ್ರ ಬದಲು ದುಡ್ಡು ಕೊಡಿ ಅಂತೆಲ್ಲಾ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದರು.

ಈಗ ನಿನ್ನೆ ನಡೆದ ಸುದೀಪ್ ಎಪಿಸೋಡ್​ನಲ್ಲಿ ಇದಕ್ಕೆ ಸರಿಯಾಗಿ ಸುದೀಪ್​ ಮಾತಾಡಿದ್ದಾರೆ. ‘ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗ ಎಲ್ಲರೂ ಚೆನ್ನಾಗೇ ಇರ್ತಾರೆ, ಹೊರೆಗೆ ಹೋದ್ಮೇಲೆ ನಮಗೇ ಉಲ್ಟ ಹೊಡಿತ್ತಾರೆ. ಆದರೆ ಅದೃಷ್ಟ ಏನಪ್ಪಾ ಅಂದರೆ ಆ ಭಗವಂತ ನಮ್ಮ ತಲೆಯಲ್ಲಿ ಕೂದಲು ಕೊಟ್ಟಿದ್ದಾನೆ, ಇನ್ನೊಬ್ಬರ ತಲೆಯಲ್ಲಿ ಅದೂ ಇಲ್ಲ ಅಷ್ಟೆ’ ಎಂದು ಹೇಳಿದ್ದಾರೆ.

ಅಂದ್ರೆ ಈ ಮಾತು ಡೈರಕ್ಟ್​ ಆಗಿ ಆರ್ಯವರ್ಧನ್​ಗೇ ಹೇಳಿದ್ದಾಗಿದೆ. ಈ ವಾದ ವಿವಾದಗಳು ನಡುವೆ ಇಶಾನಿಯನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಹಾಗಾದ್ರೆ ಇಂದಿನ ಎಪಿಸೋಡ್​ನಲ್ಲಿ ಭಾಗ್ಯಶ್ರೀ ಹೊರಗೆ ಬರ್ತಾರ ಎಂಬುದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಮೊದಲು ಎಲಿಮಿನೇಷನ್ ಆಮೇಲೆ ಕಿಚ್ಚನ ಪಂಚಾಯ್ತಿ!ಶನಿವಾರನೇ ಮನೆಯಿಂದ ಹೊರಗೆ ಹೋಗೋದು ಯಾರು?

Leave A Reply

Your email address will not be published.