Gujarat cops arrested: ಇಲ್ಲಿ ಪೊಲೀಸರೇ ಕಳ್ಳರಾದ್ರು ! ಇನ್ನು ಸಾಮಾನ್ಯ ಜನ್ರ ಗತಿಯೇನು?

Gujarat shocking news Cops arrested for stealing fans and seized costly liquor

Gujarat cops arrested : ಬೇಲಿಯೇ ತಾನು ಎದ್ದು ಹೊಲವನ್ನು ಮೇಯಿತು ಎಂಬ ಗಾದೆಯಂತೆ, ಪೊಲೀಸರೇ ಕಳ್ಳತನ ಮಾಡಿದ ಘಟನೆಯೊಂದು ಮೇಲಾಧಿಕಾರಿಗಳಿಗೆ ಶಾಕ್ ನೀಡುವಂತೆ ಮಾಡಿದೆ. ಕಳ್ಳತನ ಮಾಡಿದ 1.97 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರಿಂದಲೇ ವಶಪಡಿಸಿಕೊಳ್ಳಲಾಗಿದ್ದು, ಜನರನ್ನು ಕಾಯಬೇಕಾದ ಪೊಲೀಸರೇ ಜೈಲಿನಲ್ಲಿ ಕಂಬಿ ಎಣಿಸಿದಂತಹ (Gujarat cops arrested ) ಘಟನೆಯ ವಿವರ ಮುಂದಿದೆ ನೋಡಿ.

ಹಿಂದೊಮ್ಮೆ ವ್ಯಕ್ತಿಯು ಇರುವ ಫ್ಯಾನ್ ಡಬ್ಬಗಳ ಹಿಂದೆ ಭಾರತೀಯ ನಿರ್ಮಿತ ಫಾರಿನ್ ಮಧ್ಯದ ಬಾಗಿಲುಗಳನ್ನು ಬಚ್ಚಿಟ್ಟು ಗುಜರಾತ್ ಗೆ ಕಳ್ಳ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ, ಗುಜರಾತ್’ನ ಮಹಿಸಾಗರ್ ಜಿಲ್ಲೆಯ ಬಾಕೋರ್ ಠಾಣೆಯ ಪೊಲೀಸರು ದಾಳಿ ಮಾಡಿ ಎಲ್ಲಾ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿದ್ದ 75 ಟೇಬಲ್ ಫ್ಯಾನ್ ಗಳನ್ನು ಹಾಗೂ 482 ಮಧ್ಯದ ಬಾಟಲ್ ಗಳನ್ನು ಪೊಲೀಸ್ ಸ್ಟೇಷನ್ ಗೆ ತರಲಾಯಿತು. ಈ ಸಂದರ್ಭ ಅಂತಹ ವಸ್ತುಗಳನ್ನೇ ಇಡಲು ಮೀಸಲಿಟ್ಟಿದ್ದ ಕೊಠಡಿಯುವ ಸಂಪೂರ್ಣವಾಗಿ ತುಂಬಿದ್ದ ಕಾರಣದಿಂದಾಗಿ ಅವುಗಳನ್ನು ಮಹಿಳಾ ಲಾಕಪ್ ಒಂದರಲ್ಲಿ ಇಡಲಾಗಿತ್ತು.

ಆದರೆ ಕೆಲವು ದಿನಗಳ ಹಿಂದೆ ಲಾಕಪ್ ಕ್ಲೀನ್ ಮಾಡುವಾಗ ಸಿಬ್ಬಂದಿಗಳಿಗೆ ಸರ್ಪ್ರೈಸ್ ಕಾದಿತ್ತು. ಐ ಎಂ ಎಫ್ ಎಲ್ ಬಾಟಲಿಗಳು ಮತ್ತು ಫ್ಯಾನ್ ಗಳ ಬಾಕ್ಸ್’ಗಳೇನೋ ಇದ್ದವು ಆದರೆ ಅಲ್ಲಿ ಕೆಲವೊಂದು ಬಾಕ್ಸ್ ಗಳಲ್ಲಿ ಮಧ್ಯದ ಬಾಟಲಿ ಮತ್ತು ಫ್ಯಾನ್’ಗಳು ಇರಲೇ ಇಲ್ಲ. ಆ ಬಾಕ್ಸ್ ಗಳು ಖಾಲಿಯಾಗಿದ್ದವು ಮತ್ತು ಒಡೆದು ಹೋಗಿದ್ದವು. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮೇಲಾಧಿಕಾರಿಗಳು ವಿದೇಶಿ ಮದ್ಯ ಹಾಗೂ ಸಂಗಳ ಕಳ್ಳತನದ ಬಗ್ಗೆ ನಡೆಸಿದ್ದು, ಈ ವೇಳೆ ಅಧಿಕಾರಿಗಳಿಗೆ ಕಾದಿತ್ತು ಬಿಗ್‌ಶಾಕ್!

ಹೌದು, ಮೇಲಾಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದ ವಿಷಯವೇನೆಂದರೆ, ಈ ಕಳ್ಳತನದಲ್ಲಿ ಭಾಗಿಯಾಗಿರುವುದು ತಮ್ಮ ಡಿಪಾರ್ಟ್ಮೆಂಟಿನ ಅಧಿಕಾರಿಗಳೇ ಎಂದು. ತನಿಖೆ ನಂತರ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ ASI ಅರವಿಂದ್ ಖಾಂತ್, ಹೆಡ್ ಕಾನ್ ಸ್ಟೇಬಲ್ ಲಲಿತ್ ಪರ್ಮಾರ್ ಮಧು ಇತರ ಮೂರು ಪೋಲಿಸರನ್ನು, ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380ರ ಅಡಿಯಲ್ಲಿ ಕಳ್ಳತನ ಆರೋಪದಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕದ್ದಿದ್ದ 1.97 ಲಕ್ಷ ಮೌಲ್ಯದ ಮಧ್ಯ ಬಾಟಲಿಗಳು ಮತ್ತು ಫ್ಯಾನ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ಪ್ರಕರಣದಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಸ್ಥಳೀಯ ವ್ಯಕ್ತಿ (ಇನ್ನೊಬ್ಬ ಆರೋಪಿ) ತಲೆಮರೆಸಿಕೊಂಡಿದ್ದಾನೆ ಎಂದು ಉಪ ಅಧೀಕ್ಷಕ ವಾಲ್ವಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಂಬರ್ ಪಾತ್ರೆಯೊಳಗೆ ಶಾಲಾ ವಿದ್ಯಾರ್ಥಿನಿ! ಈ ಸಾವಿಗೆ ಕಾರಣ ಯಾರು?

Leave A Reply

Your email address will not be published.