Srirangapatna: ಕೆಆರ್​ಎಸ್ ಹಿನ್ನೀರಿನಲ್ಲಿ ದುರ್ಘಟನೆ ! ಒಬ್ರನ್ನು ಕಾಪಾಡೋ ಭರದಲ್ಲಿ ಮೂರು ಬಲಿ!

Tourists drowned in the KRS backwaters of the reservoir

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೆ ಆರ್ ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜಿ ಮಸ್ತಿ ಮಾಡಲು ನಿಷೇಧಿತ ಪ್ರದೇಶವಾಗಿದ್ದರೂ ಕೂಡ , ವೀಕೆಂಡ್ ಬಂತಂದ್ರೆ ಸಾಕು ಅಲ್ಲಿ ಮೋಜು ಮಸ್ತಿ ಮಾಡೋಕೆ ಪ್ರವಾಸಿಗರು ಬರ್ತಾರೆ. ಹಾಗೆಯೇ ಭಾನುವಾರ ಮಜಾ ಮಾಡಲು ಬಂದಂತಹ ಈ ಪ್ರವಾಸಿಗರು ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ಮಾಹಿತಿಗಳ ಪ್ರಕಾರ, ಮೈಸೂರಿನ ಕಾರುಣ್ಯ ಟ್ರಸ್ಟ್ ನ 25 ಜನ ಸಿಬ್ಬಂದಿಗಳು ಭಾನುವಾರದ ರಜೆಯಲ್ಲಿ ಮಜಾ ಮಾಡಲೆಂದು ಕೆಆರ್ಎಸ್ ಹಿನ್ನೀರಿನಲ್ಲಿ ಈಜಾಡಲು ಬಂದಿದ್ದು, ಇವರ ಮಧ್ಯೆ ಇದ್ದಂತಹ ಮೂವರು ಸಿಬ್ಬಂದಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಹರೀಶ್, ನಂಜುಂಡ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದೆ.

ಘಟನೆಯ ವಿವರ :

ಕೆಆರ್‌ಎಸ್‌ ಜಲಾಶಯಕ್ಕೆ ಪ್ರವಾಸಕ್ಕೆಂದು ಬಂದಿದ್ದ, ಮೈಸೂರಿನ ಕಾರುಣ್ಯ ಟ್ರಸ್ಟ್ ನ 25 ಜನ ಸಿಬ್ಬಂದಿಗಳು ನೀರಿಗೆ ಇಳಿದಿದ್ದಾರೆ. ಇವರೊಂದಿಗೆ ಬಂದಿದ್ದ ಸಿಬ್ಬಂದಿ ಜ್ಯೋತಿ ಎಂಬುವರು ನೀರಿನಲ್ಲಿ ಈಜಾಡುವಂತಹ ಸಂದರ್ಭದಲ್ಲಿ, ಹಳ್ಳವನ್ನು ಗುರುತಿಸದ ಕಾರಣ ಮುಳುಗಿದ್ದಾರೆ. ಇದನ್ನು ಗಮನಿಸಿದ, ಇವರ ಜೊತೆ ಇದ್ದಂತಹ ಹರೀಶ್ ಮತ್ತು ನಂಜುಂಡ ಎಂಬವರು ಆಕೆಯನ್ನು ಕಾಪಾಡಲೆಂದು ಹಳ್ಳಕ್ಕೆ ಇಳಿದಿದ್ದಾರೆ. ಆದರೆ ಆಕೆಯನ್ನು ಕಾಪಾಡಲಾಗದೆ ತಾವು ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಾರೆ. ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳ ಹಿನ್ನೀರಿನಲ್ಲಿ ಶೋಧ ನಡೆಸಿ ಮೂವರ ಪೈಕಿ ಇಬ್ಬರ ಮೃತ್ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಇನ್ನು ಒಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದೆ.

ಮೃತ ದುರ್ದೈವಿಗಳಾದ ಜ್ಯೋತಿ ಹಾಗೂ ನಂಜುಂಡ ರವರ ಮೃತ ದೇಹವು ಪತ್ತೆಯಾಗಿದ್ದು, ಈ ಮೃತ ದೇಹಗಳನ್ನು ಕೆ ಆರ್ ಎಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಕೆ ಆರ್ ಎಸ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸತತ ಎರಡು ಗಂಟೆಗಳ ಕಾಲ ಶೋಧ ಕಾರ್ಯ ಮುಂದುವರೆಯುತ್ತಿದೆ. ಹಾಗೂ ಮತ್ತೊಬ್ಬ ಸಿಬ್ಬಂದಿ ಹರೀಶ್ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

Leave A Reply

Your email address will not be published.