Bangalore: ಅಯ್ಯೋ, ಬೆಂಕಿ ಹೆಚ್ಚಾಯ್ತು! ಅಗ್ನಿಶಾಮಕ ದಳ ಬರಲೇ ಇಲ್ಲ ! ಏನಿದು ಘಟನೆ?

Firefighters negligent in extinguishing fire in Bangalore building

ಬೆಂಗಳೂರು: ಕಟ್ಟಡದ ಮೂರನೇ ಮಹಡಿಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವು, ಅಗ್ನಿಶಾಮಕ ದಳದ ನಿರ್ಲಕ್ಷ್ಯತೆಯಿಂದಾಗಿ ಕಟ್ಟಡದ ಆರನೇ ಮಹಡಿಯವರೆಗೂ ಹಬ್ಬಿದ ಘಟನೆಯೊಂದು ಬೆಂಗಳೂರಿನ ಕುಂಬಾರಪೇಟೆಯಲ್ಲಿ ನಡೆದಿದೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಅಗ್ನಿ ಶಾಮಕ ದಳದ ಬೇಜವಾಬ್ದಾರಿಯಿಂದಾಗಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರಿನ ಕುಂಬಾರ ಪೇಟೆಯಲ್ಲಿನ ಕಟ್ಟದವೊಂದರ ಮೂರನೇ ಮಹಡಿಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಅಂಗಡಿ, ವಸ್ತು ಮಾರಾಟ ಮಳಿಗೆ ಹಾಗೂ ಟಾಯ್ಸ್ ಅಂಗಡಿಯಲ್ಲಿ ಧಗ ಧಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಕಂಡು ಸ್ಥಳೀಯರು ತಕ್ಷಣ ಅಗ್ನಿಶಾಮಕದಳ ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅಗ್ನಿಶಾಕದಳ ಆಗಮಿಸಿದಾಗ ಆಗಲೇ ಕರೆಮಾಡಿ ಒಂದು ಗಂಟೆಯ ಕಳೆದಿತ್ತು. ಭಾರೀ ಪ್ರಮಾಣದಲ್ಲಿ ಉರಿಯುತ್ತಿದ್ದ ಬೆಂಕಿಯ ಕಾರಣದಿಂದಾಗಿ ಅಪಾರ ನಷ್ಟ ಎದುರಾಗಿದ್ದು, ಅಗ್ನಿ ಆರನೇ ಮಹಡಿಗೂ ಹಬ್ಬಿದೆ.

ಕುಂಬಾರಪೇಟೆಯಲ್ಲಿದ್ದ ಕಟ್ಟಡವೊಂದರಲ್ಲಿ ಭಾನುವಾರ ಸಂಜೆ 3ರ ಹೊತ್ತಿಗೆ ಪ್ಲಾಸ್ಟಿಕ್ ಗೋದಾಮಿನ ಮೂರು ಮತ್ತು ನಾಲ್ಕನೇ ಫ್ಲೋರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಕರೆಮಾಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುವಾಗ ಸುಮಾರು ಒಂದು ಗಂಟೆ ಕಳೆದಿತ್ತು. ತಡವಾಗಿ ಬಂದಂತಹ ಐದು ವಾಹನಗಳಲ್ಲಿ 30 ಜನ ಸಿಬ್ಬಂದಿಗಳು ಬಂದಿದ್ದರು. ಆದರೆ ಆಗಲೇ ಬೆಂಕಿ ಮೂರರಿಂದ ಆರನೇ ಮಹಡಿಯವರೆಗೂ ಹರಡಿತ್ತು. ದೊಡ್ಡ ಮಟ್ಟದ ಬೆಂಕಿಯನ್ನು ಆರಿಸುವ ವೇಳೆ ನೀರು ಕೂಡ ಖಾಲಿಯಾಗಿದ ಕಾರಣ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ.

ಇನ್ನು, ತಡವಾಗಿ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಮೊದಲು 3 ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ 6 ನೇ ಮಹಡಿಗೆ ತಲುಪಿ ಅನಾಹುತ ಹೆಚ್ಚಾಗಿದೆ. ಮಾಹಿತಿ ನೀಡಿದ ತಕ್ಷಣ ಸಿಬ್ಬಂದಿಗಳು ಬರದ ಕಾರಣದಿಂದಲೇ ಭಾರೀ ಪ್ರಮಾಣದಲ್ಲಿ ನಷ್ಟ ಎದುರಾಗಿದೆ ಎಂದು ಸ್ಥಳೀಯ ವ್ಯಕ್ತಿ ಸುಂದರ ಎಂಬವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಅಗ್ನಿ ಅವಘಡದಿಂದ ಕವಿತಾ ಎನ್ನುವ ಮಹಿಳೆ ಅದೃಷ್ಟವಶಾತ್ ಪಾರಾಗಿದ್ದಾರೆ. ಇಂದು ಬೆಳಗ್ಗೆ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಇವರು ” ಆದಿಲ್ ಎಂಬವರಿಗೆ ಸೇರಿದ ಪ್ಲಾಸ್ಟಿಕ್ ಆಟಿಕೆ ಗೋಡನ್ ಇದಾಗಿದ್ದು, ಅಲ್ಲಿ ನನ್ನ ಪತಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಮನೆ ಅಲ್ಲೇ 5ನೇ ಫ್ಲೋರ್ ನಲ್ಲಿದೆ. ಬೆಂಕಿ ಹೊತ್ತಿಕೊಂಡ ವೇಳೆ ನಾನು ಅಲ್ಲಿಯೇ ಇದ್ದೆ. ಸುಟ್ಟ ವಾಸನೆ ಬಂದ ಕಾರಣ ಏನೆಂದು ಮನೆಯಿಂದ ಹೊರಗೆ ಬಂದು ನೋಡಿದಾಗ ಸುತ್ತಲೂ ಹೊಗೆಯ ಕತ್ತಲು ಆವರಿಸಿತ್ತು. ಕಣ್ಣಿಗೇನು ಕಾಣ್ತಿರಲಿಲ್ಲ. ಸ್ಥಳೀಯರ ಸಹಾಯದಿಂದ ಕಾರಿಡಾರ್ ನಿಂದ ಏಣಿಯ ಮೂಲಕ ಕೆಳಗೆ ಇಳಿದೆ. ” ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ರಾತ್ರಿ ಪೂರ್ತಿ ಹೊತ್ತಿ ಉರಿಯುತ್ತಲೇ ಇದ್ದ ಕಟ್ಟಡದಲ್ಲಿ ಇನ್ನೂ ಕೂಡ ಐದನೇ ಮಹಡಿ ಉರಿಯುತ್ತಲೇ ಇದ್ದು, 70 ಸಿಬ್ಬಂದಿಗಳಿರುವ ಅಗ್ನಿಶಾಮಕ ದಳ ಇನ್ನೂ ಕೂಡ ಕೆನ್ನಾಲಿಗೆ ಚಾಚಿರುವ ಬೆಂಕಿಯನ್ನು ನಿಲ್ಲಿಸಲು ಪ್ರಯತ್ನ ಪಡುತ್ತಲೇ ಇದ್ದಾರೆ. ಇನ್ನೇನು ಬೆಂಕಿ ಆರಿತು ಅನ್ಕೊಂಡು ಕೆಳಗೆ ಬರುವಾಗ ಮೇಲೆ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. 4, 5 ಮತ್ತು 6ನೇ ಮಹಡಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಲಕ್ಷ ಲಕ್ಷ ರೂಪಾಯಿ ನಷ್ಟಕ್ಕೆ ಕಾರಣವಾದ ಬೆಂಕಿಯನ್ನು ಆರಿಸುವ ಕಾರ್ಯ ಮುಂದುವರಿದಿದೆ‌

Leave A Reply

Your email address will not be published.