Shocking News: ಪ್ರೀತಿಸಿದಾಕೆ ಮದುವೆಯಾಗಲ್ಲ ಅಂದ್ರೆ ಹೀಗೆ ಮಾಡೋದಾ! ಈ ವಿಚಿತ್ರ ನಡೆದಿದ್ದಾದ್ರು ಎಲ್ಲಿ ?

Shocking News Can a young man do this when the woman he loves is not married

ಇಲ್ಲೊಬ್ಬ ಯುವಕ ಒಂದು ಹುಡುಗಿಯನ್ನು ಪ್ರೀತಿಸ್ತಾ ಇದ್ದ, ಆಕೆ ಜೊತೆ ಫೋನ್​ನಲ್ಲಿ ಗಂಟೆಗಟ್ಟ್ಲೆ ಮಾತಾಡ್ತಾ ಇದ್ದ. ಆತ ಆಕೆಯನ್ನು ವಿವಾಹವಾಗಬೇಕೆಂದು ಬಯಸಿದ್ದ. ಆದರೆ ಆಕೆ ಈ ಮದುವೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆ ಯುವಕ ಏನು ಮಾಡಿದ್ದಾನೆ ಗೊತ್ತಾ? ಆತ ಮಾಡಿರೋತನ ಕೇಳಿದ್ರೆ ನೀವು ಕೂಡ ಬೆಚ್ಚಿ ಬೀಳ್ತಿರಾ !

ಈ ಘಟನೆ ನಡೆದಿದ್ದು ಬಿಹಾರದ ಲಖಿಸರಾಯ್ ಜಿಲ್ಲೆಯ ಕಬಯ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಾಬಿ ಪ್ರದೇಶದ ಮೊಹಲ್ಲಾದಲ್ಲಿ. ಸೋಮವಾರ ಬೆಳಿಗ್ಗೆ ಒಂದೇ ಕುಟುಂಬದ ಇಬ್ಬರು ಸದಸ್ಯರು ಗುಂಡಿಕ್ಕಿ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಸಂತ್ರಸ್ತರು ಛತ್ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.

“ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಇದಾಗಿದ್ದು, ಸಂತ್ರಸ್ತ ಯುವತಿ ತನ್ನ ಜೊತೆ ಮದುವೆಗೆ ಒಪ್ಪಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದಾಳಿ ನಡೆದಿದೆ. ಆರೋಪಿಯನ್ನು ಆಶಿಶ್​ ಚೌಧರಿ ಎಂದು ಗುರುತಿಸಲಾಗಿದೆ.” ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಗಾಯಗೊಂಡ ಮೂವರನ್ನು ಮೊದಲು ಬೇಗುಸರಾಯ್ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದ ಕಾರಣ ಪಾಟ್ನಾದ ಒಂದು ಆಸ್ಪತ್ರೆಗೆ ಕಳುಹಿಸಲಾಯಿತು.

ಮೃತರನ್ನು ಚಂದನ್ ಕುಮಾರ್ ಮತ್ತು ರಾಜನಂದನ್ ಕುಮಾರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರಲ್ಲಿ ಲವ್ಲಿ ಕುಮಾರಿ, ಪ್ರೀತಿ ಕುಮಾರಿ, ದುರ್ಗಾ ಕುಮಾರಿ ಮತ್ತು ಶಶಿಭೂಷಣ್ ಕುಮಾರ್ ಸೇರಿದ್ದಾರೆ. ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದೆ.

ಘಟನೆಯ ಮಾಹಿತಿ ಪಡೆದುಕೊಂಡ ಲಖಿಸರಾಯ್’ನ ಎಸ್‌ಪಿ ಪಂಕಜ್ ಕುಮಾರ್ ನೇತೃತ್ವದ ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.