Bengaluru: ಎಳನೀರು ಕಳ್ಳನಿದ್ದಾನೆ ಎಚ್ಚರಿಕೆ ! ಈ ಕಳ್ಳ ಸಿಕ್ಕಿಬಿದ್ದಿದ್ದಾದ್ರೂ ಹೇಗೆ?

Bengaluru crime News girinagar police arrested coconut theft

Bengaluru: ಕಳ್ಳರು ಬೆಳೆ ಬಾಳುವ ವಸ್ತುಗಳನ್ನು ಕದ್ದ ಬಗ್ಗೆ ಕೇಳಿರ್ತೀರ ಆದರೆ ಇಲ್ಲೊಬ್ಬ ಕಳ್ಳ ಎಳನೀರನ್ನು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಹೇಗೆ ಬಯಲಾಯಿತು ಅನ್ನೋದರ ಬಗ್ಗೆ ಒಂದು ಇಂಟರೆಸ್ಟ್ ಸ್ಟೋರಿಯೇ ಇದೆ.

ಬೆಂಗಳೂರಿನ (Bengaluru) ಗಿರಿನಗರದಲ್ಲಿ ರಾತ್ರಿ ಬೆಳಗಾಗುವುದರ ಒಳಗೆ ಸಿಯಾಳ ಅಂಗಡಿಯಲ್ಲಿದ್ದ ಕೆಲವು ಸಿಯಾಳಗಳು ಕಾಣೆ ಆಗ್ತಾ ಇತ್ತು. ಅರೆ, ಎಳನೀರು ಕಡಿಮೆ ಇದೆ ಅಲ್ವಾ ಅಂತ ಯೋಚನೆ ಮಾಡ್ತಾ ಇದ್ದ ವ್ಯಾಪಾರಿಗಳು ತಮ್ಮಷ್ಟಕ್ಕೇ ಇದ್ರೆ ಹೊರತು ಯಾರು ಕೂಡ ಕಂಪ್ಲೇಂಟ್ ಮಾಡ್ತಿರಲಿಲ್ಲ. ಇದೇ ಅವಕಾಶವನ್ನು ಚೆನ್ನಾಗಿ ಯೂಸ್ ಮಾಡಿಕೊಂಡಿದ್ದಾನೆ ಈ ಹೈಫೈ ಕಳ್ಳ. ಸುಮಾರು ಮೂರು ತಿಂಗಳಿಂದ ಕಳ್ಳತನ ಮಾಡುತ್ತಿದ್ದ ಈತ ರಾತ್ರಿ ಕದ್ದ ಸಿಯಾಳಗಳನ್ನು ಬೆಳಿಗ್ಗೆ ಅದೇ ಏರಿಯಾದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡ್ತಾ ಇದ್ದ. ಹೀಗೆ ಕಳ್ಳತನ ಮಾಡಿ ಹೈ ಫೈ ಜೀವನ ನಡೆಸುತ್ತಾ ಇದ್ದ ಕಳ್ಳ ಸಿಕ್ಕಿ ಬಿದ್ದಿದ್ದಾದ್ರು ಹೇಗೆ ಗೊತ್ತಾ !

ಬೆಂಗಳೂರಿನ ಇದೇ ಏರಿಯಾದಲ್ಲಿ ಎಳನೀರು ಮಾರಾಟ ಮಾಡ್ತಾ ಇದ್ದ ರಾಜಣ್ಣ ಎಂಬವರು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡಲು 12,000 ಎಲ್ಲ ನೀರನ್ನು ತಂದಿದ್ದರು. ರಾತ್ರಿ ಇಟ್ಟಿದ್ದ ಸಿಯಾಳಗಳು, ಬೆಳಿಗ್ಗೆ ಅಂಗಡಿ ಓಪನ್ ಮಾಡಿ ನೋಡಿದಾಗ ಕಾಣೆಯಾಗಿದ್ವು. ಈ ಹಿನ್ನೆಲೆ ರಾಜಣ್ಣ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕಳ್ಳ ನನ್ನ ಹಿಡಿದೇ ಬಿಡ್ತಾರೆ. ತನಿಖೆ ವೇಳೆ ಬಾಯಿ ಬಿಟ್ಟಂತಹ ಕಳ್ಳ ತಾನು ಯಾಕೆ ಕಳ್ಳತನ ಮಾಡ್ತಿದ್ದೆ ಅಂತ ತನ್ನ ಹಿಸ್ಟರಿ ಬಿಚ್ಚಿಟ್ಟಿದ್ದಾನೆ‌.

ಆರೋಪಿಯು ಮೋಹನ್ ಎಂಬವನಾಗಿದ್ದು, ಈತ ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ. ಬಿಡುವಿನ ಹೊತ್ತಲ್ಲಿ ರಮ್ಮಿ ಆಟ ಆಡ್ತಿದ್ದ ಈತ ತನ್ನ ಎಲ್ಲಾ ಹಣ ಕಳೆದುಕೊಂಡು ಲಕ್ಷ ಲಕ್ಷ ಸಾಲ ಮಾಡಿದ್ದ. ಸಾಲದ ಹೊರೆ ಹೊರಲಾಗದೆ ಕಾರು ಬಾಡಿಗೆಗೆ ಪಡೆದು ಟ್ಯಾಕ್ಸಿ ಡ್ರೈವಿಂಗ್ ಮಾಡಿ ಹಣ ಸಂಪಾದಿಸುತ್ತಿದ್ದ. ಹೀಗಿದ್ದ ಮೋಹನ್’ಗೆ ಹೊಳೆದಿದ್ದೆ ಒಂದು ಹೊಸ ಪ್ಲ್ಯಾನ್. ತನ್ನ ಪ್ಲಾನ್’ನಂತೆ ರಾತ್ರಿ ಹೊತ್ತು ಅಂಗಡಿಗೆ ಹೋಗಿ‌ ಸಿಯಾಳಗಳನ್ನು ಕಳ್ಳತನ ಮಾಡ್ತಾ‌ ಇದ್ದ. ಅದೇ ಸೀಯಾಳಗಳನ್ನು ಬೆಳಿಗ್ಗೆ ಹೊತ್ತು ಅದೇ ಏರಿಯಾದಲ್ಲಿ ಮಾರಾಟ ಮಾಡ್ತಿದ್ದ. ಪ್ರತಿದಿನ ಹೀಗೆ ಮಾಡ್ತಿದ್ದ ಇವನು ರಾಜಣ್ಣ ನೀಡಿದ್ದ ದೂರಿನ ಮೂಲಕ ಸಿಕ್ಕಿಬಿದ್ದಿದ್ದಾನೆ.

ಬಂಧಿತನಿಂದ ಪೊಲೀಸರು ಒಂದು ಎನ್ ಫೀಲ್ಡ್ ಬೈಕ್, ಕಳ್ಳತನಕ್ಕೆ ಬಳಸಿದ್ದ ವ್ಯಾಗನರ್ ಕಾರು, 90 ಎಳನೀರು ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹಾಗೂ 8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾದಿದ್ದಾರೆ.

ಇದನ್ನೂ ಓದಿ: Mangaluru News: ಗೆಳೆಯನ ಸಾವನ್ನು ಅರಗಿಸಿಕೊಳ್ಳಲಾಗದೆ ಪ್ರಾಣ ಬಿಟ್ಟ ಸ್ನೇಹಿತ!

Leave A Reply

Your email address will not be published.