Davanagere News: ನಾಯಿ ಅಡ್ಡ ಬಂದು ಬೈಕ್‌ ಸವಾರ ಸ್ಥಳದಲ್ಲೇ ಸಾವು; ಮನೆಗೆ ಬಂದ ಅದೇ ಶ್ವಾನ, ಮಾಡಿದ್ದೇನು ಗೊತ್ತೇ?

davanagere news bike accident and man dies dog came to house

ದಾವಣಗೆರೆಯಲ್ಲೊಂದು ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ನಾಯಿ ಮನುಷ್ಯನ ನಿಯತ್ತಿನ ಪ್ರಾಣಿ ಎಂದು ಹೇಳುತ್ತಾರೆ. ಅದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಹೌದು, ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಈ ವಿಚಿತ್ರ ಘಟನೆಯೊಂದು ನಡೆದಿದೆ. ಇತ್ತೋಚೆಗೆ ಬೈಕ್‌ಗೆ ನಾಯಿಯೊಂದು ಅಡ್ಡ ಬಂದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದೀಗ ಬೈಕಿಗೆ ಅಡ್ಡ ಬಂದ ನಾಯಿ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ನೀಡಿದೆ.

ತಿಪ್ಪೇಶ್‌ (21) ಎಂಬಾತನೇ ಸಾವನ್ನಪ್ಪಿದ್ದ ಯುವಕ. ಕಳೆದ ಗುರುವಾರ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದು, ವಾಪಸ್ಸು ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್‌ಗೆ ನಾಯಿ ಅಡ್ಡ ಬಂದು ಅಪಘಾತ ನಡೆದು, ತಿಪ್ಪೇಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಯುವಕ ಸಾವನ್ನಪ್ಪಿದ್ದ ಮೂರನೇ ದಿನಕ್ಕೆ ಆತನ ಮನೆಗೆ ಅದೇ ನಾಯಿ ಬಂದಿದೆ. ಮನೆಗೆ ಬಂದು ತಿಪ್ಪೇಶ್‌ ಕೊಠಡಿ, ಅಡುಗೆ ಮನೆಯನ್ನು ಸುತ್ತಾಡಿದೆ. ಅಳುತ್ತಿದ್ದ ತಿಪ್ಪೇಶ್‌ ತಾಯಿಯನ್ನು ಸಮಾಧಾನ ಮಾಡುವಂತೆ ಮಾಡಿದೆ. ಅಷ್ಟು ಮಾತ್ರವಲ್ಲದೇ ಮನೆಯ ಸುತ್ತ ನಾಯಿ ಸುತ್ತಾಡುತ್ತಿದ್ದು, ಅಲ್ಲಿನ ಗ್ರಾಮಸ್ಥರು ನಿಜಕ್ಕೂ ಆಶ್ಚರ್ಯ ಪಟ್ಟಿದ್ದಾರೆ.

ಇದರ ಸತ್ಯಾಸತ್ಯತೆ ಬಗ್ಗೆ ತಿಳಿದಿಲ್ಲ, ವೀಡಿಯೋದಲ್ಲಿ ಈ ಕುರಿತು ಉಲ್ಲೇಖ ಮಾಡಲಾಗಿದೆ.

Leave A Reply

Your email address will not be published.