Kantara 2 ಸಿನಿಮಾ ಶೂಟಿಂಗ್​ಗೆ ಡೇಟ್​ ಫಿಕ್ಸ್​! ಶೆಟ್ರು ಕೊಟ್ರು ಬಿಗ್​ ಅಪ್ಡೇಟ್​

Entertainment sandalwood news actor Rishabh Shetty's Kantara 2 cinema shooting date fix

Kantara 2 cinema shooting: ಹೊಂಬಾಳೆ ಫಿಲ್ಮ್​ ಪ್ರೊಡಕ್ಷನ್​ ಅಡಿಯಲ್ಲಿ ಬಂದ ಕಾಂತಾರ ಎಷ್ಟೆ ಮಟ್ಟಿಗೆ ಸಂಚಲನ ಮೂಡಿಸಿತ್ತು ಅಂತ ಇಡೀ ವಿಶ್ವಕ್ಕೇ ಗೊತ್ತು. ಕೇವಲ ಕರ್ನಾಟಕ, ಭಾರತ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ನಾನಾ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್​ ಆಗಿ ಸಂಚಲನ ಕ್ರಿಯೇಟ್​ ಮಾಡಿತ್ತು. ಇದೀಗ ಡೈರಕ್ಟರ್​ ರಿಷಬ್​ ಮತ್ತು ಇಡೀ ತಂಡ ಮತ್ತೊಂದು ಗುಡ್​ ನ್ಯೂಸ್​ ಕೊಡ್ತಾ ಇದೆ. ಅದುವೇ ಕಾಂತಾರ 2 ಸಿನಿಮ. ಹೌದು , ಕಾಂತಾರ 2 ಸಿನಿಮ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಇದರ ಬಗ್ಗೆ ಬಿಗ್​ ಅಪ್ಡೇಟ್ ಇಲ್ಲಿದೆ ನೋಡಿ.

Kantara 2 cinema shooting

ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಂತಾರ 2 ಮುಹೂರ್ತ( Kantara 2 cinema shooting) ಫಿಕ್ಸ್ ಆಗಿದೆ. ನವೆಂಬರ್​ 27 ಕ್ಕೆ ಅದ್ದೂರಿಯಾಗಿ ಸೆಟ್ಟೇರಲಿದೆ ಶೆಟ್ಟರ ಕಾಂತಾರ ಪ್ರೀಕ್ವೆಲ್. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ ಆಗಿದ್ದು, ಮೊದಲ ಕಾಂತರದ ಮುಹೂರ್ತ ಕೂಡ ರಿಷಬ್ ಆನೆಗುಡ್ಡೆ ದೇವಸ್ಥಾನ ದಲ್ಲಿ ನೇರವೇರಿಸಿದ್ದರು.

ಈಗ ಕಾಂತಾರ 2 ಮುಹೂರ್ತ ಅದೇ ಜಾಗದಲ್ಲಿ ನಡೆಯಲಿದೆ ಎಂದು ಚಿತ್ರದ ತಂಡ ತಿಳಿಸಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಶೂಟಿಂಗ್ ಪ್ಲಾನ್ ಮಾಡಿದ್ದಾರೆ ರಿಷಬ್. ಈಗಾಗಲೇ ಶ್ರೀಲಂಕಾ, ಕರಾವಳಿ ಸುತ್ತಮುತ್ತ ಲೊಕೇಶನ್ ನೋಡಿದ್ದಾರೆ ರಿಷಬ್. ಶ್ರೀಲಂಕಾದಲ್ಲಿ ಚಿತ್ರದ ಬಹುತೇಕ ಶೂಟಿಂಗ್ ಮಾಡಲು ರಿಷಬ್ ಸಿದ್ದತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗಲಿದೆ! ಎಲ್ಲೆಲ್ಲಿ, ಯಾವಾಗ ಎಂದು ತಿಳಿಯಿರಿ

Leave A Reply

Your email address will not be published.