Honey Trap: ಬಸ್‌ನಲ್ಲಿ ಮಹಿಳೆಯ ಪರಿಚಯ; ಫೋನ್‌ ನಂಬರ್‌ ಎಕ್ಸ್‌ಚೇಂಜ್‌!! ಅನಂತರ ನಡೆದದ್ದೇ ಭೀಕರ ಘಟನೆ, ನೊಂದ ಯುವಕ ಮಾಡಿದ್ದೇನು?

Karnataka crime news Mysuru woman among five of honeytrap gang arrested by Bhadravathi police

Honey Trap: ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನೀಡಿದ ದೂರಿನ ಆಧಾರದ ಮೇಲೆ ಐವರನ್ನು ಭದ್ರಾವತಿ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ಪೆಟ್ರೋಲ್‌ ಬಂಕ್‌ನಲ್ಲಿ ಶರತ್‌ ಎಂಬ ಯುವಕ ಕೆಲಸ ಮಾಡುತ್ತಿದ್ದು, ಬಸ್‌ನಲ್ಲಿ ಪ್ರಯಾಣ ಮಾಡುವ ಸಂದರ್ಭ ಮಹಿಳೆಯೋರ್ವರ ಪರಿಚಯವಾಗಿದೆ. ಅನಂತರ ನಂಬರ್‌ ಎಕ್ಸ್‌ಚೇಂಜ್‌ ಆಗಿದೆ. ಆದರೆ ಮೊಬೈಲ್‌ ನಂಬರ್‌ ಪಡೆದು ವಾಟ್ಸಪ್‌ನಲ್ಲಿ ಬೆತ್ತಲೆ ವೀಡಿಯೋ ಕಾಲ್‌ ಮಾಡಿದ ಮಹಿಳೆ, ನಂತರ ರೆಕಾರ್ಡ್‌ ಮಾಡಿ ಬೆದರಿಕೆ ಹಾಕಿದ್ದಾಳೆ.

ಈ ಹನಿಟ್ರ್ಯಾಪ್‌( Honey Trap) ತಂಡದ ಸದಸ್ಯರು ವೀಡಿಯೋ ಬಹಿರಂಗ ಮಾಡುವುದಾಗಿ ಹೇಳಿ ಒಂದು ಲಕ್ಷ ರೂ. ಪೀಕಿಸಿದ್ದು, ನಂತರ 20ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಬಲವಂತವಾಗಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ, 25 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿರುವಾಗಿ ಬರೆಸಿಕೊಂಡಿದ್ದಾರೆ.

ಅಲ್ಲಿಂದ ತಪ್ಪಿಸಿಕೊಂಡು ಬಂದ ಶರತ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಹನಿಟ್ರ್ಯಾಪ್‌ ನಡೆಸುತ್ತಿದ್ದ ಮೈಸೂರು ಮೂಲದ ಐವರನ್ನು ಭದ್ರಾವತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶರತ್‌ ಅವರು ನೀಡಿದ ದೂರಿನನ್ವಯ ಪೊಲೀಸರು ಮೈಸೂರಿನ ವಿನಾಯಕ, ಮಹೇಶ, ಅರುಣ್‌ ಕುಮಾರ್‌, ಹೇಮಂತ್‌ ಹಾಗೂ ಮಹಿಳೆಯನ್ನು ಬಂಧಿಸಿದ್ದಾರೆ. ಹಾಗೂ ಬಂಧಿತರಿಂದ ಒಂದು ಕಾರು, ಏಳು ಮೊಬೈಲ್‌ ಫೋನ್‌ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಒಂದೂವರೆ ತಿಂಗಳ ಪುಟ್ಟ ಕಂದಮ್ಮನಿಗೆ 40 ಕಡೆ ಬಿಸಿ ಕಬ್ಬಿಣದ ರಾಡ್‌ನಿಂದ ಬರೆ ಎಳೆದ ವ್ಯಕ್ತಿ! ಯಾಕೆ ಗೊತ್ತೇ?

Leave A Reply

Your email address will not be published.