Madhya Pradesh: ಒಂದೂವರೆ ತಿಂಗಳ ಪುಟ್ಟ ಕಂದಮ್ಮನಿಗೆ 40 ಕಡೆ ಬಿಸಿ ಕಬ್ಬಿಣದ ರಾಡ್‌ನಿಂದ ಬರೆ ಎಳೆದ ವ್ಯಕ್ತಿ! ಯಾಕೆ ಗೊತ್ತೇ?

Madhya Pradesh news Infant branded 40 times with hot Iron rod as cure for illness

Madhya Pradesh: ಒಂದೂವರೆ ತಿಂಗಳ ಪುಟ್ಟ ಕಂದಮ್ಮವೊಂದು ನ್ಯೂಮೋನಿಯದಿಂದ ಬಳಲುತ್ತಿದ್ದು, ಮಗುವಿಗೆ ಬಿಸಿ ಕಬ್ಬಿಣದ ರಾಡ್‌ನಿಂದ 40 ಕಡೆ ಬರೆ ಹಾಕಿರುವ ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ(Madhya Pradesh) ಹಳ್ಳಿಯೊಂದರಲ್ಲಿ ನಡೆದಿದೆ.

ಮಗುವಿನ ಸ್ಥಿತಿ ತೀವ್ರ ಹದಗೆಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ತಂದೆ ಬೂಟಿ ಬೈಗಾ ಮಗುವಿನ ತಾಯಿ ಬೆಟ್ಲವಾಟಿ ಬೈಗಾ ಮತ್ತು ಅಜ್ಜ ರಜನಿ ಬೈಗಾ ಎಂದು ಹೇಳಲಾಗಿದೆ. ನ.4 ರಂದು ನ್ಯುಮೋನಿಯಾ ಚಿಕಿತ್ಸೆಗಾಗಿ ಡಾಯಿ ಬಳಿ ಹೋಗಿದ್ದಾಗ ಮಗುವಿಗೆ 40 ಬಾರಿ ಬರೆ ಎಳೆಯಲಾಗಿದೆ ಎಂದು ಆರೋಪಿಸಿದ್ದಾರೆ. ಮಗುವಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯಕೀಯ ಕಾಲೇಜಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.

ಮಗುವಿನ ಪರಿಸ್ಥಿತಿಯು ಇದೀಗ ಸ್ಥಿರವಾಗಿದ್ದು, ಈ ಕುರಿತು ತನಿಖೆ ನಡೆಸುವಂತ ಆರೋಗ್ಯಾಧಿಕಾರಿಗಳ ತಂಡ ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇದೇ ಕಾರಣಕ್ಕೆ ಬೆಕ್ಕುಗಳು ಮಿಯಾವ್ ಮಿಯಾವ್ ಅನ್ನೋದು! ವಾವ್, ಇಷ್ಟೆಲ್ಲಾ ಸೀಕ್ರೇಟ್ಸ್ಗಳಿದ್ಯಾ ಕ್ಯಾಟ್ಲ್ಲಿ?

Leave A Reply

Your email address will not be published.