Engagement Ring : ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮದುಮಗನಿಂದ ದುಡುಕಿನ ನಿರ್ಧಾರ! ಏನು ಮಾಡಿದ ಗೊತ್ತೇ?

tumkuru news engagement ring missing groom consumed poison and death

Engagement Ring: ಆ ಮನೆ ತುಂಬಾ ಮದುವೆ ಸಂಭ್ರಮವಿತ್ತು. ಆ ಯುವಕ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿತ್ತು. ಆತನ ಒಂದು ದುಡುಕಿನ ನಿರ್ಧಾರ ಆತನನ್ನು ಸಾವಿನ ಕದ ತಟ್ಟುವಾಗೇ ಮಾಡಿದೆ. ಸ್ನಾನ ಮಾಡುವಾಗ ನಿಶ್ಚಿತಾರ್ಥದ ಉಂಗುರ (Engagement Ring) ಕಳೆದು ಹೋಗಿದೆ. ಇದರಿಂದ ಮನನೊಂದು ವಿಷ ಸೇವಿಸಿ (Consume Poison) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತುಮಕೂರು ನಗರದ ದೇವರಾಯಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕಮಲೇಶ್ (36) ಮೃತ ದುರ್ದೈವಿ. ಕಮಲೇಶ್‌ಗೆ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಕಳೆದ ನ.17ರಂದು ಸ್ನಾನ ಮಾಡಿ ಹೊರ ಬಂದಾಗ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿತ್ತು.

ಮೃತ ಯುವಕನನ್ನು ಕಮಲೇಶ್‌ (36) ಎಂದು ಗುರುತಿಸಲಾಗಿದೆ. ತುಮಕೂರು ನಗರದ ದೇವರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಬೆಂಗಳೂರು ಮೂಲದ ಯುವತಿಯೊಂದಿಗೆ ಈತನ ವಿವಾಹ ನಿಶ್ಚಯವಾಗಿತ್ತು. ನ.17 ರಂದು ಸ್ನಾನ ಮಾಡಿ ಹೊರ ಬರುವಾಗ ನಿಶ್ಚಿತಾರ್ಥದ ಉಂಗುರ ಮಿಸ್ಸ್‌ ಆಗಿತ್ತು. ಇಡೀ ಮನೆ ಹುಡುಕಿದರೂ ಅದು ಸಿಕ್ಕಿಲ್ಲ. ಇದರಿಂದ ಗಾಬರಿಗೊಂಡ ಕಮಲೇಶ್‌ ಈ ವಿಷಯ ಮನೆಯವರಿಗೆ ಹೇಳಲು ಹೆದರಿದ್ದು, ಸಾವಿನ ನಿರ್ಧಾರ ತಗೊಂಡಿದ್ದಾನೆ. ವಿಷ ತಗೊಂಡಿದ್ದ ಕಮಲೇಶ್‌ ತೀವ್ರ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಕುರಿತು ಕ್ಯಾತಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.