Child Death: ಉಡುಪಿಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದ ಗೇಟ್‌; 3 ವರ್ಷದ ಪುಟ್ಟ ಕಂದನ ದಾರುಣ ಸಾವು!

Udupi death news guest house gate collapse 3 year old child death

Udupi child death News: ಮಗುವೊಂದು ಗೇಟ್‌ ಬಳಿ ಆಟ ಆಡುತ್ತಿದ್ದಾಗ, ಗೇಟ್‌ ಕಳಚಿಬಿದ್ದು ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಉಡುಪಿ (Udupi News) ಕೋಟತಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆಯಲ್ಲಿ ನಡೆದಿದೆ.

ಸುಧೀರ್‌ ಮೊಗವೀರ ಎಂಬುವವರ ಪುತ್ರ ಸುಶಾಂತ್‌ (3) ಮೃತಪಟ್ಟ ಮಗು(Udupi child death ).

ಸುಶಾಂತ್‌ ಪ್ರತಿನಿತ್ಯ ಮನೆಯ ಪಕ್ಕದ ಗೆಸ್ಟ್‌ ಹೌಸ್‌ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್‌ ಆಗಿ ಗೆಸ್ಟ್‌ ಹೌಸ್‌ನ ಗೇಟ್‌ ಕಳಚಿ ಬಿದ್ದಿದ್ದು, ಪಕ್ಕದಲ್ಲೇ ಆಟವಾಡುತ್ತಿದ್‌ ಮಗುವಿನ ಮೇಲೆ ಬಿದ್ದಿದೆ. ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಮೃತ ಹೊಂದಿದೆ.

ಸ್ಥಳೀಯರು ಈ ಘಟನೆಯಿಂದ ಆಕ್ರೋಶಗೊಂಡಿದ್ದು, ಗೆಸ್ಟ್‌ಹೌಸ್‌ನವರ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಕೋಟ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ED ಯ ದೊಡ್ಡ ಕ್ರಮ; 750 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ವಶ!!!

Leave A Reply

Your email address will not be published.