India rain update: ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗಲಿದೆ! ಎಲ್ಲೆಲ್ಲಿ, ಯಾವಾಗ ಎಂದು ತಿಳಿಯಿರಿ

Weather forecast 2023 India rain update heavy rain in these places here is complete details

India rain update: ಈ ಹವಮಾನ ಯಾವಾಗ ಹೇಗೇಗೆ ಇರುತ್ತೆ ಅಂತ ಹೇಳೋಕೆ ಆಗಲ್ಲ. ಈ ಚುಮು ಚುಮು ಚಳಿಯಲ್ಲೂ ಕೂಡ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಅದು ಎಲ್ಲೆಲ್ಲೆ ಯಾವಾಗ ಎಂದು ತಿಳಿಯೋಣ. ಹಾಗಾದ್ರೆ ಈ ತಿಂಗಳಲ್ಲೇ ಎಲ್ಲೆಲ್ಲಿ ಮಳೆ ಆಗುತ್ತೆ ( India rain update) ಅಂತ ನೋಡೋಣ ಬನ್ನಿ.

ತಾಪಮಾನದಲ್ಲಿ ಒಂದು ಡಿಗ್ರಿಯ ಏರಿಕೆ ಅಥವಾ ಕುಸಿತವನ್ನು ಕಾಣಬಹುದು. ನವೆಂಬರ್ 24 ರ ಸುಮಾರಿಗೆ ಪಶ್ಚಿಮ ಹಿಮಾಲಯ ಪ್ರದೇಶದ ಮೇಲ್ಭಾಗದಲ್ಲಿ ಲಘು ಹಿಮಪಾತವು ಉಂಟಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ನವೆಂಬರ್ 24-25 ರ ಸುಮಾರಿಗೆ ವಾಯುವ್ಯ ಭಾರತದ ಪ್ರದೇಶಗಳಲ್ಲಿ ಹವಾಮಾನವು ಬದಲಾಗುವುದನ್ನು ನಾವು ನಿರೀಕ್ಷಿಸಬಹುದು ಎಂದು ಐಎಂಡಿ ವಿಜ್ಞಾನಿ ಡಾ. ಸೋಮ ಸೇನ್ ತಿಳಿಸಿದ್ದಾರೆ. ಈ ಮಧ್ಯೆ ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಲಘು ಹಿಮಪಾತವಾಗುವ ಸಾಧ್ಯತೆಯಿದೆ.

ವಿಶೇಷವಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 24 ರಿಂದ 27 ರವರೆಗೆ ಮೋಡಗಳ ಚಲನೆಯನ್ನು ಕಾಣಬಹುದು.ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊದೆಡೆ ಎರಡು ದಿನ ಸುಮಾರು 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಇಂದು ಸಮುದ್ರ ತೀರದ ವ್ಯಾಪ್ತಿಯ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ಒಡಿಶಾದ ದಕ್ಷಿಣ ಕರಾವಳಿ, ದಕ್ಷಿಣ ಛತ್ತೀಸ್‌ಗಢ ಮತ್ತು ಈಶಾನ್ಯ ಭಾರತದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 23 ರಂದು ಪಶ್ಚಿಮ ಹಿಮಾಲಯ ಬೆಟ್ಟಗಳ ಮೇಲ್ಭಾಗದಲ್ಲಿ ಲಘು ಮಳೆ ಮತ್ತು ಹಿಮಪಾತ ಉಂಟಾಗಲಿದೆ.

ಹವಮಾನ ಬದಲಾಗುತ್ತಿರುವ ಕಾರಣದಿಂದ ಆರೋಗ್ಯದ ಮೇಕೆಯೂ ಕಾಳಜಿ ವಹಿಸೋದು ಮುಖ್ಯವಾಗಿರುತ್ತದೆ. ಹೀಗಾಗಿ ಮಳೆ, ಚಳಿಯಲ್ಲಿ ನಾವು ಸರಿಯಾದ ಆಹಾರ, ಜೀವನ ಶೈಲಿಯನ್ನು ಫಾಲೋ ಮಾಡಬೇಕು.

ಇದನ್ನೂ ಓದಿ: ವಾರದ ಮಧ್ಯದಲ್ಲೇ ಮನೆಯಿಂದ ಹೊರಗೆ ಹೋದ ಸಂಗೀತ!ಬಿಗ್ ಬಾಸ್ ನ ಬಿಗ್ ಅಪ್ಡೇಟ್ ಇಲ್ಲಿದೆ

Leave A Reply

Your email address will not be published.