School Holiday: ಭಾರೀ ಮಳೆ; ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ!!!

Rain alert 2023 heavy rain school Holiday announcement for this district

School Holiday: ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಇಂದು ಗುರುವಾರ ಕೂಡಾ ಭಾರೀ ಮಳೆಯ ಸಂಭವವಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಎರಡು ರಾಜ್ಯಗಳಿಗೆ ಎಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರ ಕೇರಳ ಮತ್ತು ಮಾಹೆಯ ವಿವಿಧ ಭಾಗಗಳಲ್ಲಿ ಗುರುವಾರದವರೆಗೆ ಬಿರುಸಿನ ಮಳೆಯಾಗಿರುವ ಕಾರಣ ಕಟ್ಟೆಚ್ಚರವನ್ನು ಕೈಗೊಂಡಿದೆ.

ತಮಿಳುನಾಡಿನಾದ್ಯಂತ ಕೂಡಾ ಭಾರೀ ಮಳೆಯಾಗಲಿದೆ. ಚೆನ್ನೈನ ಮೂಲಂಬಾಕಂ ಎಂಬಲ್ಲಿ ನೀರು ನುಗ್ಗಿರುವ ಘಟನೆ ಕೂಡಾ ನಡೆದಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಕಾರೈಕಲ್‌ ಮತ್ತಿತರ ಹಲವು ಸ್ಥಳಗಳಲ್ಲಿ ಮಳೆಯಾಗಿದ್ದು, ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ (School Holiday)ನೀಡಲು ಸರಕಾರ ತೀರ್ಮಾನ ಕೈಗೊಂಡಿದೆ.

ಇದನ್ನೂ ಓದಿ: ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ ಮಾಡಿದ ಶಿಕ್ಷಕ; ಅನಂತರ ಆದದ್ದೇನು?

Leave A Reply

Your email address will not be published.