Shivamogga: ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ ಮಾಡಿದ ಶಿಕ್ಷಕ; ಅನಂತರ ಆದದ್ದೇನು?

Shivamogga news A teacher who forced a Brahmin student to eat an egg What happened then

Shivamogga: ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಶಿಕ್ಷಕರೋರ್ವರು (Teacher) ಒತ್ತಾಯದಿಂದ ಮೊಟ್ಟೆ (Egg) ತಿನ್ನಿಸಿರುವ ಆರೋಪವೊಂದು ಕೇಳಿಬಂದಿದೆ. ಈ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಶಾಲೆಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಅಮೃತ ಗ್ರಾಮದ ಶಾಲೆಯ ಶಿಕ್ಷಕರು ಬ್ರಾಹ್ಮಣ ವಿದ್ಯಾರ್ಥಿನಿಗೆ ಒತ್ತಾಯದಿಂದ ತಿನ್ನಿಸಿರುವುದಾಗಿ, ವಿದ್ಯಾರ್ಥಿನಿಯ ತಂದೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಶಾಲೆಯಲ್ಲಿ ವಾರದಲ್ಲಿ ಎರಡು ಬಾರಿ ಮೊಟ್ಟೆ, ಬಾಳೆಹಣ್ಣು ನೀಡುವ ಯೋಜನೆಯೊಂದು ಆಗಸ್ಟ್‌ 18 ರಿಂದ ಪ್ರಾರಂಭವಾಗಿದೆ. ಈ ಕುರಿತು ಈಗೂ ಪರ-ವಿರೋಧ ಚರ್ಚೆ ನಡೆದಿದೆ. ಕೆಲವರು ಮೊಟ್ಟೆ ಬದಲು ಬಾಳೆಹಣ್ಣು ನೀಡಲು ಒತ್ತಾಯಿಸಿದರೆ, ಇನ್ನು ಕೆಲವರು ಪೌಷ್ಠಿಕಾಂಶದ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಆಗ್ರಹ ಮಾಡಿದ್ದಾರೆ. ಈ ಕಾರಣದಿಂದ ಸರಕಾರ ಮೊಟ್ಟೆ ಹಾಗೂ ಬಾಳೆಹಣ್ಣು ಎರಡೂ ವಿತರಿಸಲು ಆದೇಶಿಸಿದ್ದು, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡಲು ಸೂಚಿಸಿತ್ತು.

ಆದರೆ ಶಿಕ್ಷಕರೋರ್ವರು ಶಿವಮೊಗ್ಗದಲ್ಲಿ ಒತ್ತಾಯದಿಂದ ಮೊಟ್ಟೆ ತಿನ್ನಿಸಿದ್ದು ಭಾರೀ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: Karnataka Bank ನಿಂದ 10 ಲಕ್ಷ ರೂ ಡ್ರಾ ಮಾಡಿದ ರೈತ! ಹೊರಗೆ ಬಂದು ನೋಡಿದಾಗ ಕಾದಿತ್ತು ಬಿಗ್‌ ಶಾಕ್‌!!!

Leave A Reply

Your email address will not be published.