Udupi Crime News: ಹಂತಕ ಪ್ರವೀಣ್‌ ಚೌಗಲೆಗೆ ಪ್ರತ್ಯೇಕ ಸೆಲ್‌ ವ್ಯವಸ್ಥೆ!!

Udupi: ನ.12 ರಂದು ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಕುರಿತಂತೆ ಉಡುಪಿ ಎಸ್‌ಪಿ ಡಾ. ಅರುಣ್‌ ಕೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಇದೊಂದು ಗಂಭೀರ ಪ್ರಕರಣ ಆಗಿರುವುದರಿಂದ ಆರೋಪಿ ಪ್ರವೀಣ್‌ ಚೌಗುಲೆಗೆ ಪ್ರತ್ಯೇಕ ಸೆಲ್‌ ಜೊತೆ ಬಿಗಿ ಬಂದೋಬಸ್ತ್‌ ಮಾಡಿದ್ದೇವೆ ಎಂದು ಎಸ್‌ಪಿ ಹೇಳಿದ್ದಾರೆ. ಈ ಕೇಸ್‌ ಸಲುವಾಗಿ ಮೂರು ಕೇಸ್‌ ದಾಖಲಾಗಿದೆ. ಒಂದು ನೇಜಾರಿನಲ್ಲಿ ಆರೋಪಿಯನ್ನು ಕರೆದುಕೊಂಡು ಬರುವಾಗ ಆದ ಲಾಠಿ ಚಾರ್ಜ್‌ ಪ್ರಕರಣ. ಉಳಿದದ್ದು ಸೋಷಿಯಲ್‌ ಮೀಡಿಯಾ ಕೇಸ್‌ ಆಗಿದೆ. ಹಾಗೆನೇ ಸಿಸಿಟಿವಿ ಎಲ್ಲಾ ಕಡೆ ಹಾಕೋ ವ್ಯವಸ್ಥೆಯ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.

ಪ್ರಕರಣದ ತನಿಖೆಗೆ 11 ತಂಡ ರಚನೆ ಮಾಡಿದ್ದೇವು. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ತಂಡವಾಗಿ ನಾವು ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ಕೊಡುವ ಕುರಿತು ಶಿಫಾರಸ್ಸು ಮಾಡಿದ್ದೇನೆ ಎಂದು ಉಡುಪಿ ಎಸ್‌ಪಿ ಹೇಳಿದ್ದಾರೆ.

Leave A Reply

Your email address will not be published.