Udupi: ನಾಲ್ವರ ಆ ಭೀಕರ ಹತ್ಯೆಗೆ ಕಾರಣವಾಯಿತೇ ಆ ಗೆಳೆತನ? – ಎಸ್‌ಪಿ ಹೇಳಿದ್ದೇನು? ಸ್ಫೋಟಕ ಮಾಹಿತಿ ಬಹಿರಂಗ

Udupi SP Arun Kumar big update about nejaru 4 members in same family murder case

Udupi: ನ.12 ರಂದು ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಕುರಿತಂತೆ ಉಡುಪಿ(Udupi) ಎಸ್‌ಪಿ ಡಾ. ಅರುಣ್‌ ಕೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಆರೋಪಿ ಮತ್ತು ಅಯ್ನಾಜ್‌ ಇವರಿಬ್ಬರು ಒಂದೇ ಎಂಟು ತಿಂಗಳಿನಿಂದ ಒಂದೇ ಕಡೆ ಕೆಲಸ ಮಾಡಿ ಪರಿಚಯ. ಎಂಟರಿಂದ ಹತ್ತು ಬಾರಿ ಒಂದೇ ಕ್ರೂ ನಲ್ಲಿ ಇಂಟರ್‌ನ್ಯಾಷನಲ್‌ ಫ್ಲೈಟ್ಸ್‌ನಲ್ಲಿ ಹೋಗಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಸ್ವಲ್ಪ ಗೆಳೆತನ ಇತ್ತು. ಈ ಸಂದರ್ಭದಲ್ಲಿ ಅಯ್ನಾಜ್‌ ಉಳಿದುಕೊಳ್ಳಲು, ಟ್ರಾವೆಲ್‌ ಮಾಡಲು ತನ್ನದೇ ಟೂ ವೀಲರ್‌ ಕೂಡ ಬಳಸೋದಕ್ಕೆ ಕೊಟ್ಟಿದ್ದಾನೆ. ಈ ತರಹ ಗೆಳೆತನ ಬೆಳೆಯುತ್ತಾ ಬಂತು.

ಒಂದು ತಿಂಗಳ ಹಿಂದೆ ಅಯ್ನಾಜ್‌ ಆರೋಪಿ ಪ್ರವೀಣ್‌ ಚೌಗುಲೆ ಯ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಇದೇ ವಿಚಾರದಲ್ಲಿ ಆರೋಪಿಗೆ ಅವಳ ಮೇಲೆ ಜಾಸ್ತಿ ಪೊಸೆಸಿವ್‌ನೆಸ್‌ ಇದ್ದುದರಿಂದ ಅವಳನ್ನು ಕೊಲೆ ಮಾಡಬೇಕು ಎಂದು ಪೂರ್ವ ಸಿದ್ಧತೆ ಮಾಡಿಕೊಂಡು, ಅವನು ಘಟನೆ ನಡೆದ ದಿನ ಬೆಳಗ್ಗೆ ಮನೆಯಿಂದ ಬೇಗೆ ಹೊರಟಿದ್ದು, ಟೋಲ್‌ ಗೇಟ್‌ನಲ್ಲಿ ಸಿಸಿಟಿವಿ ಫೂಟೇಜ್‌ ಸಿಗಬಾರದೆಂದು ಟೋಲ್‌ಗೇಟ್‌ ಹಿಂದೆನೇ ಗಾಡಿ ನಿಲ್ಲಿಸಿ, ಬೇರೆ ಬೇರೆ ಬಸ್ಸು, ಗಾಡಿಗಳಿಂದ ಬಂದು, ಮನೆಯೊಳಗೆ ಹೋದಾಗ, ಮೊದಲು ಅಯ್ನಾಜ್‌ ಳನ್ನು ಮನೆಯಿಂದ ತಂದಿರುವ ಚಾಕುವಿನಿಂದ ಆರೋಪಿ ಪ್ರವೀಣ್‌ ಚೌಗುಲೆ ಅಟ್ಯಾಕ್‌ ಮಾಡುತ್ತಾನೆ ಅನಂತರ ಅಯ್ನಾಜ್‌ಳ ಬೊಬ್ಬೆ ಕೇಳಿ ತಾಯಿ ಬರುತ್ತಾರೆ, ತಾಯಿಗೆ ಅಟ್ಯಾಕ್‌ ಮಾಡುವಾಗ ರೂಂ ನಲ್ಲಿ ಅಕ್ಕ ಬರುತ್ತಾಳೆ, ಅವಳಿಗೆ ಕೂಡಾ ಚಾಕು ಹಾಕುತ್ತಾನೆ. ಅನಂತರ ಹೊರಗಡೆ ಆಟವಾಡುತ್ತಿದ್ದ ತಮ್ಮ ಬರುತ್ತಾನೆ. ಹೀಗೆ ಒಬ್ಬರಾದ ಮೇಲೆ ಒಬ್ಬರು ಸ್ವಲ್ಪ ಸ್ವಲ್ಪ ಅಂತರದಲ್ಲಿ ಎಲ್ಲರೂ ಬಂದಿರುವುದರಿಂದ ಬೇಗನೇ ಎಲ್ಲರ ಕೊಲೆಗೆ ಮಾಡಿ ಮನೆಯಿಂದ ಹೊರಗೆ ಹೋಗುತ್ತಾನೆ ಎಂದು ಎಸ್‌ಪಿ ಹೇಳಿದ್ದಾರೆ.

ಅನಂತರ ಅವನು ಮನೆಯಿಂದ ಹೊರಗೆ ಬಂದು ಮೊದಲಿನ ಹಾಗೆ ಬೇರೆ ಬೇರೆ ರೂಟ್‌ನಲ್ಲಿ ಹೋಗಿ, ಕೊಲೆಗೆ ಬಳಸಿದ ಬಟ್ಟೆಗಳನ್ನು ಅಲ್ಲಲ್ಲಿ ಸುಟ್ಟು ಹಾಕಿದ್ದಾನೆ. ಅನಂತರ ಹಾಸ್ಪಿಟಲ್‌ ಹೋಗಿ ಟ್ರೀಟ್‌ಮೆಂಟ್‌ ತಗೋತಾನೆ. ಕೆಲವೊಂದು ವಸ್ತುಗಳನ್ನು ಡಿಸ್ಪೋಸಬಲ್‌ ಮಾಡಿ, ಅನಂತರ ಕೊಲೆಗೆ ಬಳಸಿದ ಚಾಕುವನ್ನು ಮನೆಯಲ್ಲಿ ಯಾರಿಗೂ ಸಂಶಯ ಬರಬಾರದೆಂದು ಮನೆಯಲ್ಲಿ ಇಟ್ಟಿದ್ದಾನೆ. ಅನಂತರ ಅವನು ರೆಗ್ಯುಲರ್‌ ಆಗಿ ಹೆಂಡ್ತಿ ಜೊತೆ ಊರಿಗೆ ಹೊರಟಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mangaluru: ಲಾಡ್ಜ್‌ವೊಂದರ ರೂಂನಲ್ಲಿ ಬೆಂಕಿ ತಗುಲಿ ವ್ಯಕ್ತಿ ಸಜೀವ ದಹನ!

Leave A Reply

Your email address will not be published.