ಹಸುಗೂಸನ್ನೇ ಮಾರಾಟ ಮಾಡ್ತಿದ್ದ ಆರೋಪಿಗಳು, ಮುಂದಾಗಿದ್ದೇ ಬಿಗ್ ​ಟ್ವಿಸ್ಟ್​!

ಇತ್ತೀಚಿನ ಕಾಲದಲ್ಲಿ ಕಳ್ಳತನ, ಕಿಡ್ನಾಪ್ ಮುಂತಾದ ಅಪರಾಧಗಳು ಹೆಚ್ಚುತ್ತಿವೆ. ಮಕ್ಕಳನ್ನು ಕಿಡ್ನಾಪ್ ಮಾಡಿ, ಮಾರಾಟ ಮಾಡಿ ಅಡ್ಡ ದಾರಿಯಲ್ಲಿ ಹಣಗಳಿಸುವಂತಹ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇಂಥದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಸಿಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಹಾಡು ಹಗಲೇ ಕೇವಲ 20 ದಿನಗಳ ಹಸುಗೂಸನ್ನು ಮಾರಾಟ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ಮಕ್ಕಳಿಲ್ಲದ ದಂಪತಿಗಳಿಗೆ ತಾವು ಕದ್ದಂತಹ ಹಸುಗೂಸನ್ನು ಲಕ್ಷ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡ ಈ ಐವರು ಆರೋಪಿಗಳು, ಕಾರ್ ನಲ್ಲಿ ಬಂದು ಮಗು ಮಾರಾಟಕ್ಕೆ ಯತ್ನಿಸಿದಾಗ ಸಿಸಿಬಿ ಪೊಲೀಸರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳನ್ನು ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಹಾಗೂ ಶರಣ್ಯ ಎಂದು ಗುರುತಿಸಲಾಗಿದೆ. ಮಾರಾಟ ದಂಧೆಗೆ ಒಳಪಟ್ಟ 20 ದಿನದ ಗಂಡು ಮಗುವನ್ನು ಸಿಸಿಬಿ ಪೊಲೀಸರು ರಕ್ಷಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಆ ಮಗು ಎಲ್ಲಿಂದ ಕಳ್ಳತನ ಮಾಡಿದ್ದು, ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಳಿಗಾಗಿ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.

Leave A Reply

Your email address will not be published.