ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಸೇವೆ ಪ್ರಾರಂಭ, ಬಸ್ ದರ ಮತ್ತು ಸಮಯ ನಿಗದಿ !

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯು ಶಬರಿಮಲೆ (KSRTC bus to Shabarimala Temple) ಭಕ್ತರಿಗಾಗಿ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಹೊಸ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದೆ. ಬರುವ ಡಿಸೆಂಬರ್ 1 ರಿಂದ ಈ ಸೇವೆ ಜಾರಿಗೆ ಬರಲಿದೆ.

ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಹೋಗಲು ಟಿಕೆಟ್ ದರ ಪ್ರತಿ ಪ್ರಯಾಣಿಕರಿಗೆ 1,600 ರೂಪಾಯಿ ಎಂದು ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಪ್ರತಿದಿನ ಮಧ್ಯಾಹ್ನ 1.50ಕ್ಕೆ ಹೊರಟು ಮರುದಿನ ಬೆಳಗ್ಗೆ 6.45ರ ಸುಮಾರಿಗೆ ನಿಲಕ್ಕಲ್ ತಲುಪಲಿದೆ. ನಂತರ ಸಂಜೆ 6 ಗಂಟೆಗೆ ನಿಲಕ್ಕಲ್‌ನಿಂದ ಹೊರಡಲಿದೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.