Fast Food: ಹೆಚ್ಚಾಗಿ ಎಣ್ಣೆಯುಕ್ತ ಆಹಾರ ಸೇವಿಸ್ತೀರಾ? ಇದ್ರಿಂದಾಗೋ ಸಮಸ್ಯೆಗಳಿಂದ ಹೀಗೆ ಬಚಾವಾಗಿ…

ರಸ್ತೆ ಬದಿಯಲ್ಲಿ ಅಥವಾ ಹೊಟೇಲ್ ಗಳಲ್ಲಿ ಮಾರಾಟ ಮಾಡುವಂತಹ ಫಾಸ್ಟ್ ಫುಡ್ ಹಾಗೂ ಎಣ್ಣೆಯುಕ್ತ ಪದಾರ್ಥಗಳನ್ನು ತಿನ್ನುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಇಂತಹ ತಿಂಡಿಗಳನ್ನು ಹೆಚ್ಚು ಹೆಚ್ಚು ತಿನ್ನಬೇಕೆನಿಸುತ್ತದೆ. ನಾಲಿಗೆಯು ಇಂಥದ್ದೇ ರುಚಿಯನ್ನು ಬಯಸುತ್ತಿರುತ್ತವೆ. ಹಾಗೆಂದು ಇಂತಹ ಎಣ್ಣೆಯ ಅಂಶವಿರುವ ಭಕ್ಷ್ಯಗಳನ್ನು ತಿಂದರೆ ಹೊಟ್ಟೆ ಭಾರ ಅನಿಸುವುದು, ಹೊಟ್ಟೆ ಹಾಗೂ ಗಂಟಲಲ್ಲಿ ಉರಿ ಬಿಸಿ ಅನುಭವ ಮತ್ತು ಅಜೀರ್ಣ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

ಎಣ್ಣೆ ಆಹಾರಗಳನ್ನು ಸೇವಿಸಿದ ನಂತರ ಉಂಟಾಗುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲೇಬೇಕಾಗುತ್ತದೆ. ಇಲ್ಲವಾದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ಎಣ್ಣೆ ಅಂಶ ಇರುವ ಆಹಾರಗಳನ್ನು ಸೇವಿಸಿದ ನಂತರ ಏನು ಮಾಡಬೇಕು? ಯಾವ ರೀತಿಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು? ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಎಣ್ಣೆಯಂಶವಿರುವ ಭಕ್ಷ್ಯಗಳನ್ನು ಸೇವಿಸಿದ ತಕ್ಷಣ ನಾವು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳು ಈ ಕೆಳಗಿನಂತಿವೆ:

1.ಪ್ರೊಬಯಾಟಿಕ್ ಆಹಾರ ಸೇವನೆ:

ಚೆನ್ನಾಗಿ ಹುರಿದ ಜೀರಿಗೆಯನ್ನು ಹೆಸರಿನೊಂದಿಗೆ ಸೇರಿಸಬೇಕು. ಆಯುರ್ವೇದ ವೈದ್ಯಶಾಸ್ತ್ರದ ಪ್ರಕಾರ, ಇದರಲ್ಲಿರುವ ಪ್ರೋಬಯಾಟಿಕ್ ಲ್ಯಾಕ್ಟೋಬಾಸಿಲಸ್ ಎಂಬ ಬ್ಯಾಕ್ಟೀರಿಯಾವು ಕರುಳಿನಲ್ಲಿ ಸರಿಯಾದ ಚಲನೆಯನ್ನು ಹೆಚ್ಚಿಸಲು ಹಾಗೂ ಆಸಿಡಿಟಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

2. ಬಿಸಿ ನೀರನ್ನು ಕುಡಿಯಬೇಕು :

ಎಣ್ಣೆಯುಕ್ತ ಆಹಾರ ಸೇವಿಸಿದ ತಕ್ಷಣ ಬಿಸಿನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಜಿಡ್ಡಿನ ಆಹಾರವನ್ನು ಮೃದು ಹಾಗೂ ಸಣ್ಣ ರೂಪಗಳಾಗಿ ವಿಭಜಿಸಲು ಹಾಗೂ ಹೊಟ್ಟೆಯ ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಸುಲಭವಾಗುವಂತೆ ಮಾಡುತ್ತದೆ. ಒಂದು ವೇಳೆ ಎಣ್ಣೆಯುಕ್ತ ಆಹಾರ ಸೇವನೆಯ ನಂತರ ಬೆಚ್ಚಗಿನ ನೀರನ್ನು ಕುಡಿಯದೇ ಇದ್ದರೆ ನಮ್ಮ ಕರುಳು ಆಹಾರದಿಂದ ನೀರನ್ನು ಹೀರಿಕೊಳ್ಳುತ್ತದೆ ಹಾಗೂ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮ ದೇಹದ ಉಷ್ಣಾಂಶಕ್ಕೆ ತಕ್ಕ ಹಾಗೆ ಬಿಸಿಯುಳ್ಳ ನೀರನ್ನು ತೆಗೆದುಕೊಳ್ಳಬೇಕಾಗುತ್ತದೆ.

3. ನಾರಿನಾಂಶದ ಆಹಾರ ಸೇವನೆ:

ಎನ್ಎಂಸಿ ಇರುವ ಆಹಾರ ಸೇವನೆ ನಂತರ ನಾರಿನ ಅಂಶ ಇರುವ ಆಹಾರಗಳನ್ನು ಸೇವಿಸುವುದರಿಂದ ಇದು ಕರುಳಿಗೆ ಉಂಟಾಗುವ ತಕ್ಕಮಟ್ಟಿಗೆ ಕಡಿಮೆಗೊಳಿಸುತ್ತದೆ ಹಾಗೂ ಇದರಲ್ಲಿರುವ ಫೈಬರ್ ನಿಧಾನ ಶಕ್ತಿ ಬಿಡುಗಡೆಯ ಕಾರಣ ನಮ್ಮ ದೇಹವನ್ನು ಸಕ್ರಿಯವಾಗಿ ಇಡುತ್ತದೆ. ಹಾಗೂ ನಾರಿನಂಶ ಕರುಳನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

4.ಗ್ರೀನ್ ಟೀ ಸೇವನೆ:

ಫ್ಲೇವನಾಯ್ಡ್ ಅಂಶವನ್ನು ಹೊಂದಿರುವ ಗ್ರೀನ್ ಟೀ ಉತ್ಕರ್ಷಣ ನಿರೋಧಕ ಕೂಡ ಆಗಿದ್ದು, ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೂ ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಿದ ನಂತರ ಗ್ರೀನ್ ಟೀ ಕುಡಿಯುವುದರಿಂದ ಇದರ ಬಿಸಿಯು ನಮ್ಮ ದೇಹದ ಉಷ್ಣಾಂಶತೆಗೆ ಹೊಂದಿಕೊಂಡು ಜೀರ್ಣ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.

5.ಕೋಲ್ಡ್ ಆಹಾರ ಸೇವಿಸಬಾರದು :

ನಮ್ಮ ದೇಹವು ತನ್ನ ಉಷ್ಣಾಂಶಕ್ಕೆ ಸರಿಹೊಂದುವಂತಹ ಆಹಾರವನ್ನು ಬಯಸುತ್ತದೆ. ಆದ್ದರಿಂದ ಜಿಡ್ಡಿನ ಆಹಾರವನ್ನು ಸೇವಿಸಿದ ಕೂಡಲೇ ಐಸ್ ಕ್ರೀಮ್ ಅಥವಾ ಇನ್ಯಾವುದೇ ತಣ್ಣನೆ ಆಹಾರವನ್ನು ಸೇವಿಸುವುದು ಜೀರ್ಣಾಂಗಕ್ಕೆ ಅತಿ ಅಪಾಯಕಾರಿ. ಕೋಲ್ಡ್ ಆಹಾರವು ಹೊಟ್ಟೆ ಯಕೃತ್ ಹಾಗೂ ಕರುಳಿನಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೂ ನಾವು ತಿಂದ ಆಹಾರವು ಗಟ್ಟಿಯಾಗುತ್ತದೆ. ಇದರ ಕಾರಣದಿಂದಾಗಿ ಮಲಬದ್ಧತೆ ಉಂಟಾಗುತ್ತದೆ.

6.ವಾಕಿಂಗ್ ಮಾಡಬೇಕು :

ಊಟದ ನಂತರ ಸ್ವಲ್ಪ ದೂರ ನಡೆಯುವುದು ಆರೋಗ್ಯಕರ. ಪ್ರತಿಸಲ ಆಹಾರ ಸೇವನೆಯ ನಂತರ ಸಾವಿರ ಹೆಜ್ಜೆ ನಡೆಯುವುದು ಉತ್ತಮ. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ ಹಾಗೂ ಚಯಾಪಚಾಯ ಶಕ್ತಿಯನ್ನು ಹೆಚ್ಚಿಸುತ್ತದೆ. ಜಿಡ್ಡಿನ ಆಹಾರ ಸೇವನೆಯ ನಂತರ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುವ ಕಾರಣ ಸ್ವಲ್ಪ ಹೊತ್ತು ವಾಕಿಂಗ್ ಮಾಡಿದರೆ ಜೀರ್ಣಕ್ರಿಯೆಗೂ ಒಳ್ಳೆಯದು ಹಾಗೂ ದೇಹಕ್ಕೂ ಉಲ್ಲಾಸಕರ.

7.ಓಂಕಾಳು ನೀರು :

ಅಜವಾನ ಅಥವಾ ಅಜ್ವೈನ್ ಎಂದು ಕರೆಯಲ್ಪಡುವ ಓಂ ಕಾಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎಣ್ಣೆಯುಕ್ತ ಭಕ್ಷ್ಯ ಸೇವಿಸಿದ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಟೀಸ್ಪೂನ್ ಅಜ್ವೈನ್ ಹಾಕಿ, ಸೇವಿಸುವುದರಿಂದ ಜೀರ್ಣಕ್ರಿಯೆಯು ವೇಗವಾಗುತ್ತದೆ. ಹಾಗೂ ಇದರಿಂದಾಗಿ ಅಜೀರ್ಣ, ಹೊಟ್ಟೆಯುಬ್ಬರ, ಎಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ.‌

8.ಸೀಡ್ಸ್ ಹಾಗೂ ನಡ್ಸ್ ಸೇವಿಸಬೇಕು :

ಎಣ್ಣೆ ಅಂಶವಿರುವ ಆಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯಗಳನ್ನು ನಿಧಾನಗೊಳಿಸಿ, ನಮ್ಮ ದೇಹದಲ್ಲಿ ಜಡತ್ವವನ್ನು ಉಂಟುಮಾಡುತ್ತದೆ. ಹಾಗಾಗಿ ಫೈಬರ್ ಅಂಶವನ್ನು ಹೊಂದಿರುವ ಬೀಜಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯು ಸುಗಮವಾಗುತ್ತದೆ ಹಾಗೂ ದೇಹದಲ್ಲಿ ನವ ಚೈತನ್ಯ ಉಂಟಾಗುತ್ತದೆ

Leave A Reply

Your email address will not be published.