ಮೊಣಕಾಲಿನಿಂದ ಕಾರು ಚಾಲನೆ: ಯೂ ಟ್ಯೂಬ್ ವಿಡಿಯೋ ನೋಡಿ ವಾಹನ ಜಪ್ತಿ, ಲೈಸೆನ್ಸ್ ರದ್ದಿಗೆ ಶಿಫಾರಸ್ಸು!

ಮಡಿಕೇರಿ: ಯೂಟ್ಯೂಬ್ ನೋಡಿ ಆರೋಪಿಯ ಮೇಲೆ ಘಟನೆ ಪ್ರಕರಣ ದಾಖಲಿಸಿದ ಘಟನೆ ಮಡಿಕೇರಿಯಿಂದ ವರದಿಯಾಗಿದೆ. ಮೊಣಕಾಲಿನಿಂದ ಕಾರನ್ನು ಚಾಲನೆ ಮಾಡಿದ ಆರೋಪದ ಮೇಲೆ ಕೊಡಗು ಜಿಲ್ಲೆಯ ಬೆಟ್ಟಗೇರಿ ನಿವಾಸಿ ಚೋವಂಡ ಲೋಕೇಶ್ ಅಪ್ಪಣ್ಣ ಎಂಬುವವರ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ಚೋವಂಡ ಲೋಕೇಶ್ ಅಪ್ಪಣ್ಣ ಎಂಬವರು ‘ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರು. ಅವರು ಮೊಣಕಾಲಿನಿಂದ ಚಾಲನೆ ಮಾಡಿದ ವಿಡಿಯೊಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು. ಅದನ್ನು ಜಿಲ್ಲಾ ಪೊಲೀಸರ ಸಾಮಾಜಿಕ ಮಾಧ್ಯಮ ನಿಗಾ ಘಟಕದ ಸಿಬ್ಬಂದಿ ಗಮನಿಸಿ ಠಾಣೆಗೆ ಮಾಹಿತಿ ನೀಡಿದ್ದರು. ಈ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಆರೋಪಿಯ ಕಾರನ್ನು ಜಪ್ತಿ ಮಾಡಲಾಗಿದೆ ಮತ್ತು ಅವರ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.