ಬೆಳ್ತಂಗಡಿ: ಭರ್ತಿ ಜನ ತುಂಬಿದ್ದ ಕಾರಿನ ಮೇಲೆ ಕಾಡಾನೆ ದಾಳಿ, ಹಲವರಿಗೆ ಗಾಯ, ವಾಹನಕ್ಕೆ ತೀವ್ರ ಹಾನಿ !

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಚಲಾಯಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ವರದಿಯಾಗಿದ್ದು, ಘಟನೆಯಲ್ಲಿ ಆಲ್ಟೋ ಕಾರಿಗೆ ತೀವ್ರ ಹಾನಿ ಸಂಭವಿಸಿದೆ ಎನ್ನಲಾಗಿದೆ.

 

ಬೆಳ್ತಂಗಡಿ ತಾಲೂಕಿನ ನೆರಿಯ ಸಮೀಪದ ಕಕ್ಕಿಂಜೆಯ ಬಯಲುಬಸ್ತಿಯಲ್ಲಿ ಸೋಮವಾರ ಕತ್ತಲೆ ಆವರಿಸುತ್ತಿದ್ದಂತೆ ಕಾಡಾನೆಯ ಆಗಮನವಾಗಿದೆ. ಆನೆ ಬರುವುದನ್ನು ಕಂಡು ಚಾಲಕರು ಕಾರನ್ನು ಬದಿಗೆ ನಿಲ್ಲಿಸಿದ್ದಾರೆ. ಆದರೆ ನೇರವಾಗಿ ಕಾರಿನತ್ತ ಆಗಮಿಸಿದ ಕಾಡಾನೆ ಕಾರಿನ ಮುಂಭಾಗವನ್ನು ಮೇಲಕ್ಕೆತ್ತಿ ಕೆಳಗೆ ಬಿಟ್ಟಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆನೆ ಬಳಿಕ ಜಾಗ ಖಾಲಿ ಮಾಡಿ ಕಾಡಿನತ್ತ ತೆರಳಿದೆ. ಈ ಘಟನೆಯಿಂದಾಗಿ ಸ್ಥಳಿಯರು ಭಯಭೀತರಾಗಿದ್ದಾರೆ.

 

ಇತ್ತೀಚಿಗೆ ಕಡಬ ಸಮೀಪದ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಹಿಂದೆ ಸುಳ್ಯ ಸಮೀಪದ ಮಂಡೆಕೋಲು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಉಪ್ಪಟಲ ತೀವ್ರವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಲವು ಪ್ರದೇಶಗಳು ಈಗಾಗಲೇ ಕಾಡಾನೆ ಹಾವಳಿಗೆ ತುತ್ತಾಗಿದೆ. ಇಲ್ಲಿ ಸಲಗ ದಾಳಿಗೆ ಮೂವರು ಸಾವನ್ನಪ್ಪಿದ್ದಾರೆ.

Leave A Reply

Your email address will not be published.