Big Boss 10: ಮನೆಯ ಸ್ಪರ್ಧಿಗಳಿಗೆ ಥೂ ಎಂದು ತುಕಾಲಿ ಸಂತೋಷ್ ಉಗಿದಿದ್ದಾದ್ರೂ ಯಾಕೆ? ಮತ್ತೆ ಮನೆಯಲ್ಲಿ ಹೆಚ್ಚಾಯ್ತ ಜಗಳದ ಕಾವು?

ಬಿಗ್ ಬಾಸ್ ಮನೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಹೋಗಿ ತುಕಾಲಿ ಸಂತೋಷ್ಗೆ ಏನಾಯ್ತು ಗೊತ್ತಾ? ಈ ಎಪಿಸೋಡ್ ಅಂತು ಸಕ್ಕತ್ ಮಜವಾಗಿದೆ. ವರ್ತುರ್ ಸಂತೋಷ್ ಅವರು ಜೈಲಿಗೆ ಹೋದಾಗ ಹಿಸ್ಟರಿ ಕ್ರಿಯೇಟ್ ಮಾಡಬೇಕು ಎಂದು ಮಧ್ಯರಾತ್ರಿ ಜೈಲಿಂದ ಹೊರಗೆ ಬಂದಿದ್ದರು. ಇದನ್ನು ಕಿಚ್ಚನ ಪಂಚಾಯಿತಿಯಲ್ಲಿ ವಿಡಿಯೋ ತೋರಿಸಲಾಗಿತ್ತು. ಹಾಗೆಯೇ ಮನೆಯವರಿಗೆ ಶಿಕ್ಷ ಕೊಡಲು ಅನುಮತಿಯನ್ನು ಕೂಡ ಕೊಟ್ಟಿದ್ದರು.

ಇದೀಗ ತುಕಾಲಿ ಸಂತೋಷ್ ಮತ್ತು ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದಾರೆ. ಯಾಕೆಂದರೆ ತುಕಾಲಿ ಸಂತೋಷ ಅವರನ್ನು ಮನೆಯವರೆಲ್ಲರ ಒಮ್ಮತದ ನಿರ್ಧಾರದ ಮೇಲೆ ಜೈಲಿಗೆ ಹಾಕಿದ್ದಾರೆ. ತುಕಾಲಿ ಮತ್ತು ವರ್ತೂರ್ ಮಾತನಾಡಬಾರದು ಎಂಬ ಶಿಕ್ಷೆಯನ್ನ ಮನೆಯವರು ಕೊಟ್ಟಿದ್ದಾರೆ.

ಈ ನಡುವೆ ತುಕಾಲಿ ಅವರನ್ನ ಜೈಲಿಗೆ ಹಾಕುವಾಗ ಎಲ್ಲರೂ ಅಂದರೆ ಸಿರಿ, ವರ್ತೂರ್, ಮೈಕಲ್, ತನಿಷಾ ಎಲ್ಲರೂ ತುಕಾರಿಗೆ ಥೂ ಎಂದು ಉಗುಳಿದ್ದಾರೆ. ನಾನು ಕೂಡ ನಿಮಗೆ ದೂ ಅಂತಾನೆ ಹೇಳ್ತೀನಿ ಎಂದು ತುಕಾಲಿ ಅವರು ತಮಾಷೆಗೆ ಎಲ್ಲರಿಗೂ ಥೂ ಎಂದು ಹೇಳುತ್ತಲೇ ಜೈಲಿನೊಳಗೆ ಎಡಗಾಲನ ಇಟ್ಟು ಪ್ರವೇಶಿಸಿದ್ದಾರೆ.

ಈ ಥೂ ಥೂ ಎನೋದು ಹಾಸ್ಯಾಸ್ಪದವಾಗಿದೆ ಹೊರತು ಗಂಭೀರವಾಗಿ ಅಲ್ಲ. ಈಗಾಗಲೇ ಮನೆಗೆ 2 ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ಮುಂದಿನ ದಿನದಲ್ಲಿ ಏನೆಲ್ಲಾ ಆಗುತ್ತದೆ ಎಂದು ಗಾದೆ ನೋಡಬೇಕಾಗಿದೆ ಅಷ್ಟೇ.

Leave A Reply

Your email address will not be published.