Shakti scheme effect: ಶಕ್ತಿಯೋಜನೆಯಿಂದಾಗಿ ಇನ್ನೊಂದು ಅವಾಂತರ! ಬಸ್ ಟಯರ್’ಗೆ ಸಿಲುಕಿ ಪರದಾಡಿದ ವೃಧ್ಧ !

Karnataka news Congress guarantee Shakti scheme effect old man seriously injured after being stuck under bus wheel

Shakti scheme effect : ಶಕ್ತಿ ಯೋಜನೆ ಜಾರಿಯಾದ ನಂತರ ಕರ್ನಾಟಕದೆಲ್ಲೆಡೆ ಬಸ್ಸುಗಳಲ್ಲಿ ಸೀಟ್ ತುಂಬಿ ತುಳುಕುತ್ತಿದೆ. ಇದರಿಂದಾಗಿ ಸೀಟು ಪಡೆಯಲು ಮುಗಿಬೀಳುವ ಪ್ರಯಾಣಿಕರಿಂದ ಅನಾಹುತಗಳು( Shakti scheme effect ) ನಡೆಯುತ್ತಿದೆ. ಇಂಥದ್ದೇ ಒಂದು ಘಟನೆ ವಿಜಯನಗರದ ಕೊಟ್ಟೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಆಯತಪ್ಪಿ ಬಸ್ಸಿನ ಚಕ್ರದಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.‌

ವಿಜಯನಗರದ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬಸ್ಸಿನಲ್ಲಿ ಸೀಟು ಫುಲ್ ಆಗುತ್ತದೆ ಎಂಬ ಕಾರಣದಿಂದಾಗಿ ವೃದ್ಧ ಬಸವರಾಜಪ್ಪ ಎಂಬವರು ಬಸ್ ಬರುತ್ತಿದ್ದಂತೆ ಸೀಟು ಹಿಡಿಯಲು ದುಂಬಾಲು ಬಿದ್ದಿದ್ದಾರೆ. ಈ ಗಡಿಬಿಡಿಯಲ್ಲಿ ಬಸ್ಸು ನಿಲ್ಲುವ ಮೊದಲೇ ಹತ್ತಲು ಹೋಗಿ ಆಯತಪ್ಪಿದ ವೃಧ್ಧ ಬಸವರಾಜಪ್ಪ ಕೆಳಗೆ ಬಿದ್ದಿದ್ದು, ಬಸ್ಸಿನ ಚಕ್ರ ವೃದ್ಧನ ಕಾಲಿನ ಮೇಲೆ ಹತ್ತಿದೆ.

ಬಳ್ಳಾರಿ – ಸಂಡೂರು ಹರಪ್ಪನಹಳ್ಳಿ ಮಾರ್ಗದಿಂದ ಸಂಚರಿಸುವ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಸಂಡೂರು ಘಟಕಕ್ಕೆ ಸೇರಿದ KA 35 F 353 ಸಂಖ್ಯೆಯ ಬಸ್ಸು ಇದಾಗಿತ್ತು. ಬಸ್ಸಿನ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವೃದ್ಧನನ್ನು, ಅಕ್ಕ ಪಕ್ಕದಲ್ಲಿದ್ದವರು ರಕ್ಷಣೆ ಮಾಡಿದ್ದು, ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಎಷ್ಟೇ ಕಾದರೂ ಆಂಬುಲೆನ್ಸ್ ಬರದೇ ಇದ್ದ ಕಾರಣ ಗಾಯಾಳು ವೃಧ್ಧನನ್ನು ಬಸ್ಸಿನಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಗಾಯಾಳು ವ್ಯಕ್ತಿಯು ನಡುಮಾವಿನಹಳ್ಳಿ ಗ್ರಾಮದಿಂದ ಕೆಲಸದ ನಿಮಿತ್ತ ಕೊಟ್ಟೂರು ಪಟ್ಟಣಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಅವಘಡ ನಡೆದಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ಸಿನಲ್ಲಿ ಪ್ರಯಾಣಿಕರು ಸೀಟಿಗಾಗಿ ಪರದಾಡುವಂತಾಗಿದೆ. ಇದರಿಂದಾಗಿ ಜಗಳ, ಅನಾಹುತಗಳು ಹೆಚ್ಚುತ್ತಿದ್ದು, ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರಿಗೆ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗಿ ಆರು ತಿಂಗಳಲ್ಲೇ ಗೃಹಿಣಿ ನೇಣಿಗೆ ಶರಣು ! ಡೆತ್ ನೋಟ್’ನಲ್ಲಿ ಏನಿತ್ತು ಗೊತ್ತಾ ?

Leave A Reply

Your email address will not be published.