ಅಬ್ಬಾ ! ಈರುಳ್ಳಿಯಿಂದ ಇಷ್ಟೊಂದು ಯೂಸಸ್ ಇದ್ಯಾ ? ಇದ್ರಲ್ಲಿರೋ ಎಷ್ಟೋ ಮನೆಮದ್ದು ನಿಮ್ಗೆ ಗೊತ್ತೇ ಇರಲ್ಲ ನೋಡಿ !

ಭಾರತದೆಲ್ಲೆಡೆ ಇತರ ಪ್ರಮುಖ ಬೆಳೆಗಳಂತೆ ಈರುಳ್ಳಿಯನ್ನು ಕೂಡ ಬೆಳೆಯುತ್ತಾರೆ. ಜನಸಾಮಾನ್ಯರ ಆಹಾರ ಪದಾರ್ಥವೆನಿಸಿರುವ ಇದು, 1 ರಿಂದ‌ 2 % ಪ್ರೋಟೀನ್, 11.6% ಕ್ಯಾಲ್ಸಿಯಂ, ಲೋಹ ಹಾಗೂ ಎ,ಬಿ,ಸಿ ಜೀವಸತ್ವಗಳನ್ನು ಹೊಂದಿದೆ. ಇಂತಹ ಸತ್ವಗಳನ್ನು ಹೊಂದಿರುವ ಈರುಳ್ಳಿ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇತ್ತೀಚಿನ ಸಂಶೋಧನೆಗಳಿಂದ ಈರುಳ್ಳಿ (Onion) ಯಲ್ಲಿ ಐವತ್ತಕ್ಕೂ ಹೆಚ್ಚು ರಾಸಾಯನಿಕಗಳಿದ್ದು, ಇದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ತಿಳಿದುಬಂದಿದೆ.

ಈರುಳ್ಳಿಯಲ್ಲಿ ಕೆಂಪು ಹಾಗೂ ಬಿಳಿ ಎಂಬ ಎರಡು ವಿಧಗಳಿದ್ದು, ಔಷಧಕ್ಕಾಗಿ ಬಿಳಿಯ ಈರುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಹಾಗಾದರೆ ಉಳ್ಳಾಗಡ್ಡಿ, ಪಲಾಂಡು ಎಂದು ಕರೆಯಲ್ಪಡುವ ಈರುಳ್ಳಿಯನ್ನು ಯಾವ ರೀತಿಯ ರೋಗಗಳಿಗೆ ಮನೆಮದ್ದಾಗಿ (Home remedy) ಬಳಸಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

1. ಕೊಲೆಸ್ಟ್ರಾಲ್ :

ಬೆನ್ನೆ ತುಪ್ಪ ಕೆನೆ ಮೊದಲಾದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವಂತಹ ಹಾಗೂ ಇತರ ಎಣ್ಣೆಯಂಶ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ರಕ್ತನಾಳಗಳ ಬಿಳಿ ಮೈಯಲ್ಲಿ ಗಾರೆಯ ಲೇಪ ಬಳಿದಂತಾಗಿ ನಾಳಗಳು ಸಂಕುಚಿತಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾದಾಗ ಸಹಜವಾಗಿ ರಕ್ತ ಸಂಚಾರಕ್ಕೆ ತಡೆ ಉಂಟಾಗಿ ಹೃದಯಘಾತ ಸಂಭವಿಸಬಹುದು. ಇದಲ್ಲದೆ ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿಯೂ ಈ ರೀತಿ ರಕ್ತಸಂಚನನಕ್ಕೆ ತಡೆ ಉಂಟಾದರೆ ಪಾರ್ಶ್ವಾವಾಯು ಎದುರಾಗುವ ಸಂಭವವಿರುತ್ತದೆ. ಹಾಗಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಅಪಾಯವಿಲ್ಲದ, ಸುಲಭ ಬೆಲೆಯಲ್ಲಿ ಸಿಗುವಂತಹ ಈ ಈರುಳ್ಳಿಯು ಹಸಿಯಾಗಿ ಸೇವಿಸಿದರೆ ರಕ್ತದಲ್ಲಿ ಈ ತರಹದ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಗಟ್ಟುತ್ತದೆ.

 

2. ಕೆಮ್ಮು :

ಅತಿಯಾದ ಕೆಮ್ಮು ಗುಣಮುಖವಾಗಲು ಉತ್ತಮ ಮನೆಮದ್ದು ಎಂದರೆ ಅದು ಈರುಳ್ಳಿ. ಮುದುಕರಿಗೆ ದಿನನಿತ್ಯ ಉಳ್ಳಾಗಡ್ಡಿಯನ್ನು ಬೇಯಿಸಿ ತಿನ್ನಲು ಕೊಟ್ಟರೆ ಅವರ ಕೆಮ್ಮನ್ನು ಬೇಗನೆ ಉಪಶಮನಗೊಳಿಸುತ್ತದೆ. ಚಿಕ್ಕಮಕ್ಕಳ ಕೆಮ್ಮಿಗಾಗಿ ಈರುಳ್ಳಿಯ ರಸ ಮತ್ತು ಜೇನನ್ನು ಬೆರೆಸಿಕೊಟ್ಟರೆ ಉತ್ತಮ ಫಲಿತಾಂಶ ಕಂಡುಬರುತ್ತದೆ.

3. ಮೂಲವ್ಯಾಧಿ:

ಮೂಲವ್ಯಾಧಿಗೆ ಈರುಳ್ಳಿಯು ಉತ್ತಮ ಮನೆಮದ್ದಾಗಿದ್ದು, ಕೆನೆ ಮೊಸರಿನೊಂದಿಗೆ ಈರುಳ್ಳಿಯನ್ನು ದಿನನಿತ್ಯ ಸೇವಿಸುತ್ತಿದ್ದರೆ ಮಲಪ್ರವೃತ್ತಿ ಸರಿಯಾಗಿ ಮೂಲವ್ಯಾಧಿಯಯ ವಿಕಾರ ಕಡಿಮೆಯಾಗುತ್ತದೆ. ನರನಾಡಿಗಳಲ್ಲಿ ನೋವು, ಸಂಧಿವಾತ ಮುಂತಾದ ರೋಗಗಳಿಗೂ ಈರುಳ್ಳಿ ಸೇವನೆ ಉತ್ತಮ ಪರಿಣಾಮಕಾರಿಯಾಗಿದೆ.

4. ಕಾಲಾರಾ :

ಇರುಳಿಯಲ್ಲಿ ಇರುವ ರೋಗ ನಿರೋಧಕ ಶಕ್ತಿಯು ಪ್ರಭಾವದಿಂದಾಗಿ ಇದರಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಕಾಲಾರಾ ರೋಗವನ್ನು ಗುಣಪಡಿಸುವಲ್ಲಿ ಈರುಳ್ಳಿ ಪ್ರಮುಖ ಪಾತ್ರವನ್ನು ಹೊಂದಿದೆ.

5. ಮೂಗಿನ ಸಮಸ್ಯೆ :

ಮೂಗಿನಲ್ಲಿ ಉಸಿರು ಕಟ್ಟುತ್ತಿದ್ದರೆ ಅರ್ಧ ಚಮಚ ನೀರುಳ್ಳಿರಸಕ್ಕೆ ಅರ್ಧ ಚಮಚ ಸೇರಿಸಿ ಒಂದು ತಿಂಗಳವರೆಗೆ ಸೇವಿಸಿದರೆ ಈ ಸಮಸ್ಯೆ ದೂರವಾಗುತ್ತದೆ. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಈರುಳ್ಳಿಯ ರಸವನ್ನು ಹಿಂಡಿದರೆ ರಕ್ತವು ಬೇಗನೆ ಹೆಪ್ಪುಗಟ್ಟುವ ಮೂಲಕ ರಕ್ತಸ್ರಾವವು ನಿಲ್ಲುತ್ತದೆ.

6.ಕೂದಲು ಉದುರುವಿಕೆ :

ಚರ್ಮ ಶಾಸ್ತ್ರಜ್ಞರ ಪ್ರಕಾರ ಒಬ್ಬ ವ್ಯಕ್ತಿಯು ಪ್ರತಿ ದಿನಕ್ಕೆ 50 ರಿಂದ 100 ಕೂದಲುಗಳನ್ನು ಕಳೆದುಕೊಳ್ಳುತ್ತಾನೆ. ಈ ರೀತಿ ಕೂದಲುಗಳನ್ನು ಕಳೆದುಕೊಳ್ಳಲು ಆತನಿಗೆ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಹಾರ್ಮೋನ್ ಬದಲಾವಣೆ ಮುಂತಾದ ಹಲವು ಕಾರಣಗಳಿರುತ್ತದೆ. ಹೀಗೆ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಈರುಳ್ಳಿ ಪರಿಣಾಮಕಾರಿಯಾಗಿದೆ. ಈರುಳ್ಳಿಯ ಸಿಪ್ಪೆ ತೆಗೆದು ಅದರ ರಸವನ್ನು ಕೂದಲಿಗೆ ಹಚ್ಚುವುದರಿಂದ, ಈರುಳ್ಳಿಯಲ್ಲಿರುವ ಸಲ್ಫರ್ ಅಂಶವು ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಈ ರೀತಿ ನಮ್ಮ ಮನೆಯಲ್ಲಿಯೇ ಇರುವ ಈರುಳ್ಳಿಯು ಇನ್ನೂ ಅನೇಕ ರೋಗಗಳಿಗೆ ಮನೆಮದ್ದಾಗಿದೆ.

Leave A Reply

Your email address will not be published.