ಕಾಟೇರ ಚಿತ್ರತಂಡದಿಂದ ಬಿಗ್ ಅಪ್ಡೇಟ್ ! ಇಲ್ಲಿದೆ ನೋಡಿ ಚಾಲೆಂಜಿಂಗ್ ಸ್ಟಾರ್ ಸಿನಿಮಾದ ರಿಲೀಸ್ ಡೇಟ್!

ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರತಂಡ ಆಂದು ನ್ಯೂ ಅಪ್ಡೇಟ್ ಬಿಡುಗಡೆಗೊಳಿಸಿದೆ. ಇದು ದಾಸನ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಕಾಟೇರ ಚಿತ್ರ ತಂಡವು ಚಿತ್ರದ ಕೆಲವು ಅಂಶಗಳನ್ನು ಬಿಟ್ಟುಕೊಟ್ಟಿದೆ. ಅದರ ಜೊತೆಗೆ ರಿಲೀಸ್ ಡೇಟ್ ಅನ್ನು ಕೂಡ ಅನೌನ್ಸ್ ಮಾಡಿದೆ. ಹೀಗಾಗಿ ಕಾಟೇರಾ ಅಭಿಮಾನಿಗಳು ಕಾತುರದಿಂದ ಈ ದಿನಕ್ಕಾಗಿ ಕಾಯುವಂತಾಗಿದೆ.

ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋದ ಪ್ರೋಮೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಇದೀಗ ಪ್ರೊಮೋ ಸಕ್ಕತ್ ಸುದ್ದಿಯಲ್ಲಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದು, ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ.

1970ರ ದಶಕದಲ್ಲಿ ನಡೆದಿರುವಂತಹ ನೈಜ ಘಟನೆಯಿಂದ ಸ್ಪೂರ್ತಿ ಪಡೆದಿರುವ ಚಿತ್ರ ಎನ್ನಲಾಗಿರುವ ಕಾಟೇರದಲ್ಲಿ ಹೆಚ್ಚಾಗಿ ಹಳೆಯ ಕಾಲದ ಹಳ್ಳಿ ವಾತಾವರಣವೇ ಕಂಡುಬರುತ್ತದೆ. ಈ ಮೇಕಿಂಗ್ ಪ್ರೋಮೋದಲ್ಲಿ ತೋರಿಸಿರುವಂತೆ, ಕೈಯಲ್ಲಿ ‘ಅವ್ವಾ’ ಎಂದು ಟ್ಯಾಟು ಹಾಕಿರುವ ದರ್ಶನ್ ರವರು ಬೆಂಕಿಯಲ್ಲಿ ಕಾದ ಬಿಸಿ ಬಿಸಿ ಮಚ್ಚನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾ ಎಂಟ್ರಿ ಕೊಡುತ್ತಾರೆ. ಈ ಚಿತ್ರದಲ್ಲಿ ಹಿಂದಿನ ಕಾಲದ ಹಳ್ಳಿಯ ಪರಿಸರದಲ್ಲಿ ದರ್ಶನ್ ರವರು ವಿಶೇಷ ಲುಕ್ ನೊಂದಿಗೆ ಕಾಣಿಸಿಕೊಳ್ಳುತ್ತಾರೆ. ತನ್ನದೇ ಆದ ಸ್ಟೈಲ್ ನಲ್ಲಿ ಬೀಡಿ ಸೇದುವ ಮೂಲಕ ಅಭಿಮಾನಿಗಳಲ್ಲಿ ಒಂದು ಹೊಸದಾದ ಕ್ರೇಜನ್ನು ಸೃಷ್ಟಿಸಿದ್ದಾರೆ.

ಇನ್ನು ಕಾಟೇರಾ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅವರ ಅಭಿನಯ ಹೇಗಿದೆಯೆಂದು ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ ಸಿನಿಪ್ರಿಯರು. ಇನ್ನು ಈ ಚಿತ್ರದಲ್ಲಿ ಅನೇಕ ಉತ್ತಮ ನಟರಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ . ಸುಧಾಕರ ಎಸ್ ರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮೇಕಿಂಗ್ ವಿಡಿಯೋ ಪ್ರೊಮೊದ ಕೊನೆಯಲ್ಲಿ ಚಿತ್ರತಂಡವು ಭರ್ಜರಿಯಾಗಿ ಕಾಟೇರಾ ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಡಿಸೆಂಬರ್ 29ರಂದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಸಿನಿ ಪ್ರೇಕ್ಷಕರು ಕಾಟೇರ ಚಲನಚಿತ್ರಕ್ಕಾಗಿ ಹೊಸ ಹುರುಪಿನಿಂದ ಕಾಯುತ್ತಿದ್ದಾರೆ.

Leave A Reply

Your email address will not be published.