ತಾನೇ ಸ್ಟಾರ್ಟ್ ಮಾಡಿದ ಗಾಡಿಯಡಿಗೆ ಬಿದ್ದ ರೈತ ! ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ !

ಸಾವು ಹತ್ತಿರ ಬಂದಾಗ ಅದನ್ನು ತಡೆಯಲು ದೇವರಿಂದಲೂ ಆಗದು. ಸಾವು ಯಾರನ್ನು ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ದಾವಣಗೆರೆಯಲ್ಲಿ ರೈತನೊಬ್ಬ ತನಗರಿವಿಲ್ಲದೆಯೇ ತನ್ನ ಸಾವನ್ನು ಆಹ್ವಾನಿಸಿ, ಭೀಕರವಾಗಿ ಸಾವನ್ನಪ್ಪಿದ್ದಾನೆ.

ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದ ನವೀನ್ ಎಚ್ ಟಿ (41) ಎಂಬ ರೈತನು ಮೃತ ದುರ್ದೈವಿಯಾಗಿದ್ದು, ತಾನು ಸ್ಟಾರ್ಟ್ ಮಾಡಿದ ಟ್ರಾಕ್ಟರ್ ನ ಅಡಿಗೆ ತಾನೇ ಬಿದ್ದು ಮೃತಪಟ್ಟಿದ್ದಾರೆ. ಇಂತಹ ಭೀಕರ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮನಕಲಕುವಂತಿದೆ. ರೈತ ನವೀನ್ ಅಡಿಕೆ ಸಿಪ್ಪೆ ಸುಳಿಯುವ ಯಂತ್ರಕ್ಕೆ ಹಾಕಲು ಅಡಿಕೆಯನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿದ್ದನು. ಅದನ್ನು ಯಂತ್ರದ ಬಳಿ ತೆಗೆದುಕೊಂಡು ಹೋಗಬೇಕಿದ್ರೆ ಟ್ರ್ಯಾಕ್ಟರ್ ನ್ನು ಎದುರಿನಿಂದ ಸ್ಟಾರ್ಟ್ ಮಾಡಬೇಕಾಗಿತ್ತು. ಆದ್ದರಿಂದ ಟ್ರಾಕ್ಟರ್ ನ ಮುಂಭಾಗದಲ್ಲಿಯೇ ನಿಂತು ಸ್ಟಾರ್ಟ್ ಮಾಡಿದ್ದಾರೆ.

ಆದರೆ ಟ್ರಾಕ್ಟರ್ ಗೇರ್ ನಲ್ಲಿಯೇ ಇದ್ದುದ್ದನ್ನು ರೈತ ಗಮನಿಸಿರಲಿಲ್ಲ. ಹಾಗಾಗಿ ಸ್ಟಾರ್ಟ್ ಆಗುತ್ತಿದ್ದಂತೆ ಮುಂದಕ್ಕೆ ಚಲಿಸಿದ ಟ್ರಾಕ್ಟರ್ ಒಂದು ಸುತ್ತು ಬಂದು ರೈತನ ಮೈಮೇಲೆಯೇ ಹಾದು ಹೋಗಿದೆ. ಆಕಸ್ಮಿಕ ಘಟನೆಯಿಂದಾಗಿ ರೈತನ ಪ್ರಾಣ ಹೋಗಿದೆ. ಈ ಘಟನೆಯು ಮನೆಯ ಎದುರಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯವನ್ನು ನೋಡಬಹುದಾಗಿದೆ. ರೈತನ ಅಗಲುವಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Leave A Reply

Your email address will not be published.