Washing tips: ಬೆಡ್ ಶೀಟ್ ಒಣಗಿಸೋಕೆ ಕಷ್ಟ ಆಗ್ತಿದ್ಯಾ? ಹಾಗಾದ್ರೆ ಈ ರೀತಿ ಮಾಡಿ, ಬಟ್ಟೆ ಫುಲ್ ಡ್ರೈ !

Lifestyle Washing tips wash bedsheet blankets in rainy and winter season

Washing tips: ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾಗಿರುವುದರಿಂದ ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ವಾಶ್ ಮಾಡಿದ ಬಟ್ಟೆಗಳನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಅಂತದ್ರಲ್ಲಿ ಬೆಡ್ ಶೀಟ್ , ಬ್ಲಾಂಕೆಟ್ ಗಳಂತೂ ಒಣಗುವುದೇ ಇಲ್ಲ ಎಂದು ಹಠ ಹಿಡಿದಂತೆ ಅನಿಸುತ್ತದೆ. ದಪ್ಪ ವಸ್ತ್ರಗಳನ್ನು ಒಗೆಯಲೇಬೇಕಿದ್ದರೂ ಕೂಡ ಒಣಗಿಸುವುದು ಹೇಗೆ ಎಂಬ ಯೋಚನೆ ತಲೆಕೆಡಿಸಿ ಬಿಡುತ್ತದೆ.

ಬ್ಲಾಂಕೆಟ್ ಹಾಗೂ ಬೆಡ್ ಶೀಟ್ ಮುಂತಾದ ಬಟ್ಟೆಗಳು ಸರಿಯಾಗಿ ಒಣಗಲು ಕನಿಷ್ಠ ಎರಡು ಮೂರು ದಿವಸ ಹಿಡಿಯುತ್ತದೆ. ಹಾಗಾಗಿ ಕೆಲವರು ಬಟ್ಟೆಗಳನ್ನು ಡ್ರೈ ವಾಷಿಂಗ್ ಗೆ ನೀಡುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲದಿರುವುದರಿಂದ ಕೆಲವೊಂದು ಸುಲಭ ಮಾರ್ಗಗಳನ್ನು ಕಂಡುಕೊಳ್ಳಬೇಕಾಗುತ್ತದೆ(Washing tips). ಹಾಗೆಯೇ ಡ್ರೈಯರ್ ಮಿಷನ್ ಎಲ್ಲರಿಗೂ ಮನೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ಕೆಳಗಿನ ಸಿಂಪಲ್ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಡ್ ಶೀಟ್, ಬ್ಲ್ಯಾಂಕೆಟ್ ಗಳು ಸುಲಭವಾಗಿ ಒಣಗುತ್ತದೆ.

ಎಲ್ಲಾ ಕಂಬಳಿಗಳನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆಯಲು ಸಾಧ್ಯವಿಲ್ಲ. ಕೆಲವೊಂದು ಕಂಬಳಿಗಳನ್ನು ‘ಕೇರ್ ಲೇಬಲ್ ಮಿಷನ್ ವಾಷಬಲ್’ನಲ್ಲಿ ಮಾತ್ರ ತೊಳೆಯಬಹುದಾಗಿದೆ. ಇಲ್ಲವಾದಲ್ಲಿ ಕೈಯಲ್ಲಿ ಬಟ್ಟೆ ಒಗೆಯಬೇಕಾಗುತ್ತದೆ. ವಾಷಿಂಗ್ ಮಿಷನ್ ನಲ್ಲಿ ತೊಳೆಯಬಹುದಾದಂತಹ ಕೆಲವೊಂದು ಬೆಡ್ ಶೀಟ್ ಗಳನ್ನು ಒಣಗಿಸಬೇಕು ಎಂಬ ಗೊಂದಲ ನಿಮ್ಮಲ್ಲಿದ್ದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

1. ನೀವು ಉಪಯೋಗಿಸುತ್ತಿರುವಂತಹ ವಾಷಿಂಗ್ ಮಿಷನ್ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಮೊದಲು ತಿಳಿದುಕೊಂಡಿರಬೇಕಾಗುತ್ತದೆ. ಈ ಸಾಮರ್ಥ್ಯದ ಮೇಲೆ ನೀವು ಬೆಡ್ ಶೀಟ್ ಗಳನ್ನು ವಾಷಿಂಗ್ ಮಷೀನ್ ನಲ್ಲಿ ತೊಳೆಯಬಹುದು. ಉದಾಹರಣೆಗೆ ನಿಮ್ಮ ವಾಷಿಂಗ್ ಮಿಷನ್ ಸಾಮರ್ಥ್ಯ 7 ಕೆಜಿ ಆಗಿದ್ದರೆ ನೀವು 7 ಕೆಜಿ ಅಥವಾ ಅದಕ್ಕಿಂತ ಕಡಿಮೆ ಇರುವ ಬೆಡ್ ಶೀಟ್ ಗಳನ್ನು ವಾಷಿಂಗ್ ಮಿಷನ್ ನಲ್ಲಿ ಹಾಕಬಹುದು. ನಂತರ ಜಂಟಲ್ ಆಯ್ಕೆಯಲ್ಲಿಟ್ಟು, ಡೆಲಿಕೇಟ್ಸ್ ಬಟನ್ ಪ್ರೆಸ್ ಮಾಡಿ ಬಟ್ಟೆ ಒಗೆಯುವುದನ್ನು ಮುಂದುವರಿಸಬಹುದು.

2. ಬೆಡ್ ಶೀಟನ್ನು ವಾಷಿಂಗ್ ಮಿಷನ್ ನಲ್ಲಿ ಹಾಕಿದ ಬೆಡ್ ಶೀಟ್ ಒಂದೇ ಜಾಗದಲ್ಲಿ ಇದ್ದರೆ ಅದು ಸರಿಯಾಗಿ ಕ್ಲೀನ್ ಆಗಿರುವುದಿಲ್ಲ. ಹಾಗಾಗಿ ಬೆಡ್ ಶೀಟನ್ನು ಒಂದೆರಡು ಬಾರಿ ಮೇಲಕ್ಕೆ ಕೆಳಗೆ ತಿರುಗಿಸಿ. ಇದರಿಂದಾಗಿ ಬೆಡ್ ಶೀಟ್ ಸಂಪೂರ್ಣವಾಗಿ ಕ್ಲೀನ್ ಆಗಲು ಸುಲಭವಾಗುತ್ತದೆ.

3. ಬಟ್ಟೆ ಒಗೆಯುವ ಯಂತ್ರದಲ್ಲಿ ಪೂರ್ತಿ ವಾಷ್ ಮಾಡಿದ ನಂತರ, ನೀವು ಮಿಷಿನ್ ಅನ್ನು ಡ್ರೈಯರ್ ಮತ್ತು ಸ್ಪಿನ್ನರ್ ಆಯ್ಕೆಯಲ್ಲಿ ಇಡಬೇಕಾಗುತ್ತದೆ. ಇದು ಉಳಿದ ನೀರನ್ನು ಚೆನ್ನಾಗಿ ಹೀರಿಕೊಂಡ ಕಾರಣ ತಕ್ಕಮಟ್ಟಿಗೆ ಒಣಗಿಯೇ ಇರುತ್ತದೆ‌. ನಂತರ ನೀವು ಬೆಡ್ ಶೀಟನ್ನು ಗಾಳಿಗೆ ಒಣಗಲು ಹಾಕಿದರೆ, ಒಂದೇ ದಿನದಲ್ಲಿ ಬೆಡ್ ಶೀಟ್ ಪೂರ್ತಿ ಒಣಗುತ್ತದೆ.

4. ವಾಷಿಂಗ್ ಮಿಷನಿನಲ್ಲಿ ಕಂಬಳಿಯನ್ನು ಒಗೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಡಿಟರ್ಜೆಂಟ್, ಬ್ಲೀಚಿಂಗ್ ಅಥವಾ ವಿನೇಗರ್ ಬಳಸಲೇಬಾರದು. ಏಕೆಂದರೆ ಸೋಡಿಯಂ ಹೈಪೋಕ್ಲೋರೈಟ್ ಅನ್ನು ಒಳಗೊಂಡಿರುವ ಕ್ಲೋರಿನ್ ಬ್ಲೀಚ್ ಅನ್ನು ವಿನೆಗರ್ ನಂತಹ ಯಾವುದೇ ರೀತಿಯ ಆಮ್ಲದೊಂದಿಗೆ ಬೆರೆಸುವುದು ಕ್ಲೋರಿನ್ ಅನಿಲವನ್ನು ಸೃಷ್ಟಿಸುತ್ತದೆ, ಇದು ಹೆಚ್ಚಿನ ಪ್ರಮಾಣದಲ್ಲಿ ಮಾರಕವಾಗಿರುವ ಅಪಾಯಕಾರಿ ರಾಸಾಯನಿಕವಾಗಿದೆ.

5. ಹಾಗೆಯೇ ಬಟ್ಟೆಯನ್ನು ಒಗೆಯುವಾಗ ವಾಷಿಂಗ್ ಮೆಷಿನ್ ನಲ್ಲಿ ಅತೀ ಬಿಸಿನೀರನ್ನು ಉಪಯೋಗಿಸಲೇಬಾರದು. ಇದು ಯಂತ್ರ ಹಾಗೂ ಕಂಬಳಿಯ ಹೊದಿಕೆಯ ಮೇಲ್ಭಾಗವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ವಾಶ್ ಮಾಡಲು ಉಗುರು ಬೆಚ್ಚನೆಯ ಅಥವಾ ತನ್ನನ್ನು ನೀರನ್ನು ಬಳಸುವುದು ಸೂಕ್ತ.

ಇದನ್ನೂ ಓದಿ: ಈ ಪ್ರಾಣಿ ಆಹಾರ ತಿನ್ನುವಾಗ ಅಳುತ್ತೆ ಅಂತೆ! ಅಯ್ಯೋ ಯಾಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮ್ಯಾಟರ್

Leave A Reply

Your email address will not be published.