Nimhans hospital: ಪುಟ್ಟ ಮಗುವಿನ ಸಾವಿಗೆ ಕಾರಣವಾಯಿತೇ ನಿಮ್ಹಾನ್ಸ್ ! ಆಸ್ಪತ್ರೆ ಸಿಬ್ಬಂದಿಗಳು ಕೇರ್ ಲೆಸ್ !

Karnataka news Nimhans hospital staff accused of child victims negligence family members protest

Nimhans hospital staff negligence: ನಿಮ್ಹಾನ್ಸ್ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ವಹಿಸಿದ ಕಾರಣ ಒಂದು ವರ್ಷದ ಪುಟ್ಟ ಮಗು ಸಾವನ್ನಪ್ಪಿದೆ‌. ಆಸ್ಪತ್ರೆಯು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಕಾರಣ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನಿರ್ಲಕ್ಷ್ಯ( Nimhans hospital staff negligence) ಆರೋಪದ ಹಿನ್ನೆಲೆ ಪೋಷಕರು ಮತ್ತು ಆಂಬುಲೆನ್ಸ್ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಒಂದು ವರ್ಷದ ಮಗು ತನ್ನ ತಾಯಿಯ ಕೈಯಿಂದ ಹತ್ತು ಅಡಿ ಎತ್ತರದಿಂದ ಜಾರಿ ಬಿದ್ದ ಪರಿಣಾಮವಾಗಿ ತಲೆಗೆ ಗಂಭೀರ ಗಾಯವಾಗಿ, ಅಸ್ವಸ್ಥಗೊಂಡಿತ್ತು. ಈ ಹಿನ್ನೆಲೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವಂತೆ ಸೂಚಿಸಲಾಗಿತ್ತು. ಈ ನಿಟ್ಟಿನಲ್ಲಿ ಮಗುವನ್ನು ಝೀರೋ ಟ್ರಾಫಿಕ್ ನ ಮೂಲಕ ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ವರ್ಗಾಯಿಸುವುದಾಗಿ ನಿರ್ಧಾರಿಸಲಾಗಿತ್ತು.

ಈ ವಿಷಯವನ್ನು ಮೊದಲೇ ನಿಮ್ಹಾನ್ಸ್ ಆಸ್ಪತ್ರೆಗೆ ಮುಟ್ಟಿಸಿದ್ದ ಹಾಸನ ಆಸ್ಪತ್ರೆಯ ವೈದ್ಯರು ಕರೆಯ ಮೂಲಕ ಜೀರೋ ಟ್ರಾಫಿಕ್ ನಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತರಲಾಗುತ್ತಿದ್ದು, ಎಮರ್ಜೆನ್ಸಿ ಬೆಡ್ ಕಾಯ್ದಿರಿಸುವಂತೆ ನಿಮ್ಹಾನ್ಸ್ ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದ್ದರು. ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಜೀರೋ ಟ್ರಾಫಿಕ್ ನ ಮೂಲಕ ಹಾಸನದಿಂದ ನಿಮ್ಹಾನ್ಸ್ ಆಸ್ಪತ್ರೆಗೆ 1 ಗಂಟೆ 40 ನಿಮಿಷದಲ್ಲಿ ತಲುಪಿದೆ.

ಆದರೆ ಆಸ್ಪತ್ರೆ ತಲುಪಿದ ನಂತರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಕಂದಮ್ಮನಿಗೆ ಬೆಡ್ ಖಾಲಿ ಇಲ್ಲ ಎಂದು ಹೇಳಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ಮಗುವಿಗೆ ತಕ್ಷಣ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ. ಈ ಹಿನ್ನೆಲೆ ಪೋಷಕರು ಹಾಗೂ ಆಂಬುಲೆನ್ಸ್ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಡ್ ಶೀಟ್ ಒಣಗಿಸೋಕೆ ಕಷ್ಟ ಆಗ್ತಿದ್ಯಾ? ಹಾಗಾದ್ರೆ ಈ ರೀತಿ ಮಾಡಿ, ಬಟ್ಟೆ ಫುಲ್ ಡ್ರೈ !

Leave A Reply

Your email address will not be published.