KYC Scam: ಬ್ಯಾಂಕ್ ನಲ್ಲಿರೋ ನಿಮ್ಮ ಹಣ ನಿಜವಾಗ್ಲೂ ಸೇಫ್ ಆಗಿಲ್ಲ ! ಸೋ ನಿಮ್ಮ ದುಡ್ಡನ್ನು ಹೀಗೆ ಉಳಿಸಿಕೊಳ್ಳಿ

ಈಗ ಕಾಲ ಬದಲಾಗಿದೆ. ಮೊದಲೆಲ್ಲ ಹಣ ನಮ್ಮ ಕೈಯಲ್ಲಿ ಇರುತ್ತಿತ್ತು. ಆದರೆ ಈಗ ಹಾಗಲ್ಲ. ನಮ್ಮ ದುಡ್ಡನ್ನು ಬ್ಯಾಂಕಿನಲ್ಲಿ ಇಟ್ಟು ಅದೀಗ ತುಂಬಾನೇ ಸೇಫ್ ಆಗಿದೆ ಅಂತ ಅಂದುಕೊಳ್ಳುತ್ತೇವೆ. ಆದರೆ ನಿಜವಾಗ್ಲೂ ಸೇಫ್ ಆಗಿರುತ್ತ ? ನಮ್ಮ ಬ್ಯಾಂಕ್ ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಾವು ಬ್ಯಾಂಕಿನಲ್ಲಿ ಕೂಡಿಟ್ಟಿದ್ದ ಹಣ ಅಷ್ಟೊಂದು ಸೇಫ್ ಆಗಿರುತ್ತೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ಡಿಜಿಟಲ್ ಯುಗ ಅಷ್ಟೊಂದು ಮುಂದುವರಿದೆ. ಸೈಬರ್ ಕ್ರೈಂಗಳು ಹೆಚ್ಚುತ್ತಲೇ ಇವೆ. ನಾವು ಬ್ಯಾಂಕ್ ನಲ್ಲಿ ತುಂಬಾ ಸೇಫ್ ಆಗಿ ಇಟ್ಟಿದ್ದೀವಿ ಅಂತ ಅಂದ್ಕೊಂಡಿದ್ದ ಹಣವನ್ನು ಕೂಡ ಕೆವೈಸಿ ವಂಚನೆ ಮೂಲಕ ಕಸಿದುಕೊಳ್ಳುವ ಸಾಧ್ಯತೆ ಇರುತ್ತದೆ. ನಮ್ಮ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಉಪಯೋಗಿಸಿಕೊಂಡು ನಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುವುದನ್ನು ಕೆವೈಸಿ ವಂಚನೆ ಎಂದು ಹೇಳಲಾಗುತ್ತದೆ.

ಇಂತಹ ಹಣಕಾಸು ವಂಚನೆಗಳಿಂದ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಲದು. ನಮ್ಮ ಹೆಸರು, ವಿಳಾಸ, ಬ್ಯಾಂಕ್ ಮಾಹಿತಿ ಅಥವಾ ಸರ್ಕಾರಿ ಐಡಿಗಳನ್ನು ಬಳಸಿಕೊಂಡು ನಮ್ಮ ಹೆಸರಿನಲ್ಲಿ ಸಿಮ್ ತೆರೆದು ಅದರ ಮೂಲಕ ಕರೆ ಮಾಡಿ, ಹಣದ ವಂಚನೆ ಮಾಡುವಂತಹ ಜಾಲಗಳಿಂದ ನಾವು ಆದಷ್ಟು ಎಚ್ಚರದಿಂದ ಇರಬೇಕಾಗುತ್ತದೆ. ಹೀಗಾಗಿ ಯಾರೇ ಕರೆ ಮಾಡಿ ನಿಮ್ಮ ಕೆವೈಸಿ ಮಾಹಿತಿಗಳನ್ನು ಕೇಳಿದರೆ ಕೊಡಲೇಬೇಡಿ. ಇಂತಹ ಕೆವೈಸಿ ವಂಚನೆಗಳಿಂದ ಯಾವ ರೀತಿಯ ಕ್ರಮಗಳನ್ನು ವಹಿಸಿಕೊಳ್ಳಬೇಕು ಎಂಬ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.

1) ವೈಯುಕ್ತಿಕ ಮಾಹಿತಿ : ನಮ್ಮ ವೈಯುಕ್ತಿಕ ಮಾಹಿತಿಗಳು ಸಿಕ್ಕರೆ ನಾವು ವಂಚಕರ ಜಾಲದಲ್ಲಿ ಸುಲಭವಾಗಿ ಸಿಕ್ಕಿ ಬೀಳುತ್ತೇವೆ. ಹಾಗಾಗಿ ಅತಿ ಮುಖ್ಯವಾಗಿರುವ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಎಸ್ಎಂಎಸ್, ಮೊಬೈಲ್ ಕರೆ ಅಥವಾ ಆನ್ಲೈನ್ ಮೂಲಕ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಹಾಗೆ ಓಟಿಪಿ ಮತ್ತು ಪಾಸ್ವರ್ಡ್ ಗಳನ್ನು ಯಾರೊಂದಿಗೂ ಶೇರ್ ಮಾಡಬಾರದು. ಯಾವುದೇ ಬ್ಯಾಂಕ್ ಗಳಾಗಲಿ ಅಥವಾ ಹಣಕಾಸು ಸಂಸ್ಥೆಗಳಾಗಲಿ ನಿಮ್ಮ ಓಟಿಪಿ ಪಾಸ್ವರ್ಡ್ ಗಳನ್ನು ಎಂದಿಗೂ ಕೇಳುವುದಿಲ್ಲ. ಹಾಗಾಗಿ ಇದರ ಬಗ್ಗೆ ಎಚ್ಚರವಹಿಸಿ.

2) ಕರೆಯ ಬಗ್ಗೆ ಎಚ್ಚರ : ಸಾಮಾನ್ಯವಾಗಿ ವಂಚನೆ ಮಾಡುವವರು ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡುತ್ತಾರೆ. ಓಟಿಪಿ ಪಾಸ್ವರ್ಡ್ ಗಳನ್ನು ಕೇಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಮಾಹಿತಿಗಳನ್ನು ನೀಡಬಾರದು. ಕೆವೈಸಿ ಗಾಗಿ ಯಾವುದೇ ಲಿಂಕ್ ಅನ್ನು ಅಥವಾ ಅಪ್ಲಿಕೇಶನ್ ಅನ್ನು ಉಪಯೋಗಿಸಬಾರದು. ಯಾವುದೇ ರೀತಿಯ ಡೌಟ್ ಇದ್ದಲ್ಲಿ ನೇರವಾಗಿ ಬ್ಯಾಂಕನ್ನು ಭೇಟಿಯಾಗುವುದು ಒಳ್ಳೆಯದು.

3) ನೈಜ್ಯತೆಯ ಪರಿಶೀಲನೆ: ಯಾವುದೇ ರೀತಿಯ ಕರೆಗಳು ಬಂದಲ್ಲಿ ಬ್ಯಾಂಕ್ ಅಥವಾ ಇನ್ನಿತರ ವಹಿವಾಟುಗಳ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮುನ್ನ ಆ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಕರೆ ಬಂದಿರುವ ವ್ಯಕ್ತಿಯ ಬಗ್ಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸರಿಯಾಗಿ ವಿಚಾರಿಸಿ.

4) ಸ್ಟೇಟ್ಮೆಂಟ್ ಪರಿಶೀಲನೆ: ನಿಮ್ಮ ಬ್ಯಾಂಕಿನ ಖಾತೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಇನ್ನಿತರ ಹಣಕಾಸಿನ ವ್ಯವಹಾರದ ಮೇಲೆ ಗಮನವಿರಿಸಿ. ಆಗಾಗ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಚೆಕ್ ಮಾಡುತ್ತಿರಿ. ಯಾವುದೇ ಅನುಮಾನಾಸ್ಪದ ಬದಲಾವಣೆ ಕಂಡುಬಂದಲ್ಲಿ ಕೂಡಲೇ ಬ್ಯಾಂಕನ್ನು ಸಂಪರ್ಕಿಸಿ.

5) ಮಾಹಿತಿ ಪಡೆಯಿರಿ: ಇತ್ತೀಚೆಗೆ ನಡೆಯುವ ವಂಚನೆಗಳ ಬಗ್ಗೆ ಮಾಹಿತಿ‌ಗಳು ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಲೇ ಇರುತ್ತದೆ. ಇವುಗಳ ಬಗ್ಗೆ ತಿಳಿದುಕೊಳ್ಳಿ. ವಂಚಕರು‌ ಬಳಸುತ್ತಿರುವ ಹೊಸತಂತ್ರಗಳ ಬಗ್ಗೆ ತಿಳಿದುಕೊಂಡು ಎಚ್ಚರವಾಗಿರಿ.

Leave A Reply

Your email address will not be published.