Hassan love cheating case: ಸೋಶಿಯಲ್ ಮೀಡಿಯಾದ ಯುವತಿಯರೇ ಈತನ ಟಾರ್ಗೆಟ್! ಪ್ರೀತಿಗಾಗಿ ಹಲ್ಲೆ ಮಾಡಿದ ಖತರ್ನಾಕ್ ಪ್ರೇಮಿ ಅರೆಸ್ಟ್

Hassan crime news Social media fraud case accused arrested for love cheating case

Hassan love cheating case : ತನ್ನ ಪ್ರೀತಿಯ ನಂಬಿಕೆಯನ್ನು ಗಳಿಸುವ ಸಲುವಾಗಿ ಯುವತಿಯ ಮೇಲೆ ಹಲ್ಲೆ ಮಾಡಿದ ವಿಕೃತ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಾಮಾಜಿಕ ಜಾಲತಾಣಗಳಲ್ಲಿನ ಯುವತಿಯರನ್ನು ಟಾರ್ಗೆಟ್ ಮಾಡಿ, ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ( Hassan love cheating case )ಎಂದು ತಿಳಿದುಬಂದಿದೆ.

ಈ ಘಟನೆಯು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗರ್ಜೆ ಗ್ರಾಮದಲ್ಲಿ ನಡೆದಿದ್ದು, ಪ್ರೀತಿಯ ನಾಟಕವಾಡಿ ತನ್ನ ಮನೆಗೆ ಕರೆದುಕೊಂಡು ಹೋಗಿ ಹಿಂಸೆ ನೀಡಿದ ಖತರ್ನಾಕ್ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಶರತ್ ಸಾಲಿಯಾನ್ ಎಂಬುವನಾಗಿದ್ದು, ಯುವತಿಯರು ನೀಡಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿರಿಗೆ ಪರಿಚಯ ಮಾಡಿಕೊಳ್ತಾ ಇದ್ದ ಈತ ನಂತರ ಪ್ರೀತಿಯ ಹೆಸರಿನಲ್ಲಿ ಹಣ, ಒಡವೆ ದೋಚುತ್ತಿದ್ದ. ಲೈಂಗಿಕ ದೌರ್ಜನ್ಯ ಎಸಗಿ ನಡು ನೀರಲ್ಲೇ ಕೈ ಕೊಡ್ತಿದ್ದ.

ಇದೇ ರೀತಿ ಶರತ್ ನ ಮೋಸದ ಪ್ರೀತಿಯ ಬಲೆಗೆ ಬಿದ್ದಿದ್ದ ಯುವತಿಯೊರ್ವಳು ಈತನ ಮೋಸದ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದ್ದಕ್ಕಾಗಿ, ತನ್ನ ಮಾಜಿ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮುಂದಾಗಿದ್ದಾನೆ. ತನ್ನದೇ ಮನೆಯಲ್ಲಿ ಯುವತಿಯ ಕುತ್ತಿಗೆಗೆ ಹಗ್ಗ ಬಿಗಿದಿದ್ದಾನೆ. ಈ ರೀತಿ ಹಲ್ಲೆ ನಡೆಸುವಾಗ ತನ್ನ ಮೇಲೆ ಅನುಮಾನಗೊಂಡಿದ್ದ ತನ್ನ ಪ್ರೇಯಸಿಗೆ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ವಿಡಿಯೋ ಕಾಲ್ ಮಾಡಿ ತಾನು ಎಸುಗುತ್ತಿರುವ ಕೃತ್ಯವನ್ನು ಆಕೆಗೆ ತೋರಿಸಿದ್ದಾನೆ.

ಇದೀಗ ಯುವತಿಯರಿಬ್ಬರು ಆತನು ಹಲ್ಲೆ ಮಾಡಿದ ವಿಡಿಯೋ ಹಿಡಿದುಕೊಂಡು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಆತನ ವಿರುದ್ಧ ಪ್ರತ್ಯೇಕ ಕೇಸುಗಳನ್ನು ನೀಡಿ, ಖತರ್ನಾಕ್ ಪ್ರೇಮಿಯ ಮೋಸದಾಟವನ್ನು ನಿಲ್ಲಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಸಕಲೇಶಪುರದ ಗ್ರಾಮಾಂತರ ಪೊಲೀಸರು ಶರತ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪಂಚಾಯ್ತಿ ಒಳಗೇ ದನವನ್ನು ಕಟ್ಟಿ ಹಾಕಿದ ರೈತ! ಯಾಕೆಂದು ಪ್ರಶ್ನಿಸಿದರೆ ಹೀಗೆ ಆನ್ಸರ್ ಮಾಡೋದಾ?

Leave A Reply

Your email address will not be published.