Pro Kabaddi PKL 10: ಕಬಡ್ಡಿ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್, ಈ ತಂಡದ ಪ್ರಮುಖ ಸ್ಟಾರ್ ಆಟಗಾರರು ಆಟಕ್ಕೆ ಮೊದಲೇ ಔಟ್ !

Sports news Pro Kabaddi league 10 Vinay redhu has been ruled out of PKL due to knee injury

Pro Kabaddi PKL 10: ನಾಳೆ ಡಿಸೆಂಬರ್ 2 ವಿಶ್ವದಾದ್ಯಂತ ಎಲ್ಲಾ ಕಬ್ಬಡಿ ಪ್ರೇಮಿಗಳಿಗೆ ಹಬ್ಬದ ವಾತಾವರಣ. PKL 10, 2 ಡಿಸೆಂಬರ್ 2023 ಅಹಮದಾಬಾದ್‌ನ ಟ್ರಾನ್ಸ್‌ಸ್ಟಾಡಿಯಾ ಸ್ಟೇಡಿಯಂನ ಅರೆನಾದಲ್ಲಿ, ಜಗಮಗಿಸುವ ಅಂಕಣದಲ್ಲಿ ಶುರುವಾಗಲಿದ್ದು, ಮೊದಲ ಪಂದ್ಯದ ಆರಂಭಿಕ ಘರ್ಷಣೆಗಾಗಿ ಕ್ಷಣಗಣನೆ ಶುರುವಾಗಿದೆ. ಮೊದಲ ಮ್ಯಾಚ್ ನಲ್ಲಿ ಗುಜರಾತ್ ಸೂಪರ್ ಜೈಂಟ್ಸ್ ಮತ್ತು ತೆಲುಗು ಟೈಟನ್ಸ್ ತಂಡಗಳು ಪರಸ್ಪರ ಕೋಡು ಮಸೆಯಲಿದೆ.

PKL ಹತ್ತರಲ್ಲಿ (Pro Kabaddi PKL 10)ಬಲಿಷ್ಠ 12 ತಂಡಗಳ ಸೆಣಸಾಟ ನಡೆಯಲಿದ್ದು, ಅದರೆ ಪ್ರಾರಂಭದಲ್ಲೇ ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಫ್ಯಾನ್ಸಳಿಗೆ ಬೇಸರದ ಸಂಗತಿ ಒಂದು ಬಂದಿದೆ. ತೆಲುಗು ಟೈಟನ್ಸ್ ಮೊದಲ ಪಂದ್ಯ ಗುಜರಾತ್ ಗೈಂಟ್ಸ್ ಜೊತೆ ಆಡಲಿದ್ದು ತಂಡದ ಪ್ರಮುಖ ರೈಡರ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಹಿನ್ನೆಲೆ ತಂಡದ ಮ್ಯಾನೇಜೆಂಟ್ ಗೆ ತೀವ್ರ ಒತ್ತಡ ಉಂಟಾಗಿದೆ.
ಟೈಟಾನ್ಸ್ ನ ಪ್ರಮುಖ ರೈಡರ್ ವಿನಯ್ ರೆಧು ಮೊಣಕಾಲಿನ ಗಾಯದಿಂದ ಹೊರಗುಳಿದಿದ್ದಾರೆ. ತಂಡದ ಸುಗಮ ರೈಡಿಂಗ್ ಗಾಗಿ ಇನ್ನೋರ್ವ ರೈಡರ್ ಸಂದೀಪ್ ಧುಲ್ ಅಂಕಣ ಪ್ರವೇಶಿಸಲಿದ್ದಾರೆ. ಈಗ ಟೈಟಾನ್ಸ್ ಅಭಿಮಾನಿಗಳು ತಮ್ಮ ಪ್ರೀತಿಯ ಆಟಗಾರನ ಬಗ್ಗೆ ದುಃಖ ವ್ಯಕ್ತಪಡಿಸುತ್ತಿದ್ದು, ಈ ಗಾಯಾಳುವಿನ ಸಮಸ್ಯೆ ಟೈಟನ್ ತಂಡಕ್ಕೆ ದೊಡ್ಡ ಚಾಲೆಂಜ್ ಆಗಿರಲಿದೆ.

ಹಾಗೆಯೇ 2019ರ ಮಾಜಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡದ ಸ್ಟಾರ್ ಆಟಗಾರನ ಗಾಯದ ಕಾರಣದಿಂದ ತಂಡದ ಸ್ಥಿರತೆಯಲ್ಲಿ ಕುಸಿತ ಉಂಟಾಗಿದೆ.
ಬೆಂಗಾಲ ವಾರಿಯರ್ಸ್ ನ ಅಕ್ಷಯ್ ಬೋಡಕೆ ಎಡ ಮೊಣಕಾಲಿನ ಗಾಯದಿಂದ ಆಟಕ್ಕೆ ಮೊದಲೇ ಔಟ್ ಆಗಿ ಅಂಕಣದಿಂದ ಹೊರಗೆ ಕುಳಿತುಕೊಳ್ಳಲಿದ್ದಾರೆ. ದರ್ಪಣ್ ಚೌಹಾಣ್ ರಕ್ಷಣಾತ್ಮಕ ಮತ್ತು ಸ್ಥಿರತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಮ್ಮ ನೆಚ್ಚಿನ ಮಟ್ ಮೇಲೆ ಇಲ್ಲದಿರುವುದಕ್ಕೆ ಅಭಿಮಾನಿಗಳು ದುಃಖಿತರಾಗಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಬಾಂಬ್ ಇಟ್ಟಿದ್ದೇವೆ ಎಚ್ಚರ! ಮಾಹಿತಿ ಕೇಳಿ ಬೆಚ್ಚಿಬಿದ್ದ ಪೋಷಕರು!

Leave A Reply

Your email address will not be published.