ಗರ್ಭದಿಂದ ಹೊರಬಂದ ಮಗುವಿನ ದೇಹಪೂರ್ತಿ ಜಿರಳೆಗಳು! ಆಸ್ಪತ್ರೆ ಸಿಬ್ಬಂದಿಗಳು ಡೋಂಟ್ ಕೇರ್?

ಆರೋಗ್ಯ ಸಿಬ್ಬಂದಿಗಳು ನಿರ್ಲಕ್ಷ ತೋರಿದ ಕಾರಣ ತಾಯಿಯ ಗರ್ಭದಿಂದ ಹೊರಬಂದ ಪುಟ್ಟ ಕಂದಮ್ಮವೊಂದು ನರಕಯಾತನೆ ಅನುಭವಿಸುವಂತಾಗಿದೆ. ಲೋಕದ ಅರಿವೇ ಇಲ್ಲದ ಪುಟ್ಟ ಮಗುವಿನ ದೇಹಕ್ಕೆ ಜಿರಳೆ ಕಚ್ಚಿದ್ದು, ನರಳಾಡುವಂತಹ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಸ್ವಚ್ಛತೆಯ ಕಡೆಗೆ ಗಮನಹರಿಸದ ಕಾರಣ ತಾನು ಹುಟ್ಟಿದ ಎರಡೇ ದಿನಕ್ಕೆ ಹಸುಗೂಸೊಂದು ನರಕ ನೋಡುವಂತಾಗಿದೆ. ಈ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದಷ್ಟೇ ದಾಖಲಾಗಿದ್ದ ನಾಗರಬಾವಿಯ ಆಶಾರಾಣಿ ಕಳೆದ ಗುರುವಾರದಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇವರನ್ನು ಬಾಣಂತಿ ವಾರ್ಡಿಗೆ ಶಿಫ್ಟ್ ಮಾಡಿದ ನಂತರ ಎರಡು ದಿನಗಳ ಪುಟ್ಟ ಮಗುವಿನ ಪೂರ್ತಿ ದೇಹಕ್ಕೆ ಅಲ್ಲಿ ರಾಜರೋಷವಾಗಿ ಓಡಾಡ್ತಾ ಇದ್ದ ಜಿರಳೆಗಳು ಕಚ್ಚಿದ್ದು, ತಾಯಿ ಕಣ್ಣೀರಿಡುವಂತಾಗಿದೆ. ಬಾಣಂತಿ ವಾರ್ಡನ್ನು ಕ್ಲೀನ್ ಮಾಡದೇ ಇರುವ ಕಾರಣ ಈ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ದೂರು ಕೊಟ್ಟರೂ ಆಸ್ಪತ್ರೆ ಸಿಬ್ಬಂದಿಗಳಾಗಲಿ, ವೈದ್ಯರಾಗಲಿ ಕೇರ್ ಮಾಡ್ತಾ ಇಲ್ಲ ಎಂದು ತಾಯಿ ಆಶಾರಾಣಿ ಆರೋಪಿಸಿದ್ದಾರೆ.

Leave A Reply

Your email address will not be published.