D.V. Sadananda Gowda: ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ದೂರವಿಟ್ಟು, ಪಕ್ಷದಲ್ಲಿ ಗುಂಪುಗಾರಿಕೆ ಕೊನೆಗೊಳಿಸಿ: ರಾಜ್ಯ ಬಿಜೆಪಿಗೆ ಡಿವಿಎಸ್‌ ಹೊಸ ಟಾಂಗ್

Karnataka politics news former CM DV Sadananda Gowda says stop having group politics latest news

D.V. Sadananda Gowda: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadananda Gowda) ಅವರು, ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಪಕ್ಷದ ಸಂಘಟನೆಯಿಂದ ದೂರವಿಟ್ಟರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಉದ್ದಾರವಾಗಲಿದೆ ಎಂದು ಸ್ಪಷ್ಟ ಹೆಸರೇಳದೆ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ರಾಜ್ಯದಲ್ಲಿ ಗುಂಪುಗಾರಿಕೆ ರಾಜಕಾರಣ ನಿಲ್ಲಬೇಕಿದೆ, ನಮ್ಮ ಗುಂಪುಗಾರಿಕೆಯಿಂದಲೇ ನಾವು ಚುನಾವಣೆ ಸೋತಿರುವುದು. ಹೀಗಾಗಿ ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಸಂಘಟನೆಯಿಂದ ದೂರವಿಡಿ, ಆಗ ರಾಜ್ಯದಲ್ಲಿ ಪಕ್ಷ ಉದ್ಧಾರ ಆಗುತ್ತದೆ. ಈ ಬಗ್ಗೆ ನಾನು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.

ಮೊದಲು ಅಸಮಾಧಾನ ಇರುವವರನ್ನು ಮನವೊಲಿಸಿ, ಸೋಮಣ್ಣ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ಭೇಟಿ ಮಾಡಿದ ಬಳಿಕ ಮಠ, ಮಂದಿರಕ್ಕೆ ಹೋಗಿ ಎಂದು ಸಲಹೆ ಮಾಡಿದರು.

ನನಗೆ ರಾಜ್ಯಾಧ್ಯಕ್ಷರಾಗಿರುವವರ ಕಷ್ಟ ಏನೆಂಬುದು ಗೊತ್ತಿದೆ. ನನ್ನ ಅವಧಿಯಲ್ಲಿಯೂ ಅನಂತ ಕುಮಾರ್, ಯಡಿಯೂರಪ್ಪ ಅವರ ಗುಂಪುಗಳಿದ್ದವು. ನಾನು ಪ್ರತಿ ದಿನ ಎಲ್ಲರ ಮನೆಗೆ ಹೋಗಿ ಬೆಣ್ಣೆ ಹಿಡಿದು ನೈಸ್ ಮಾಡಿದ್ದೆ, ಅದೇ ರೀತಿ ಎಲ್ಲರ ಮನವೊಲಿಸಿ. ನಿಮ್ಮ ತಂದೆಯ ಜತೆಗೆ ಉಳಿದ ಹಿರಿಯರ ಸಲಹೆ ಪಡೆಯಿರಿ ಎಂದ ಅವರು, ಮುಂದಿನ ಲೋಕಸಭೆಯಲ್ಲಿ ಯುವಕರಿಗೆ ಅವಕಾಶ ನೀಡುವ ಮೂಲಕ ಹೊಸ ರಾಜತಂತ್ರ ಜಾರಿಗೆ ತನ್ನಿ ಎಂದು ಹೇಳಿದರು.

ಇನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸದಾನಂದ ಗೌಡ, “ನನ್ನ ರಾಜಕೀಯ ಜೀವನದಲ್ಲಿ ಇಂತಹ ಸರಕಾರ ನೋಡಿಲ್ಲ. ನಾನು ಎಲ್ಲಾ ರೀತಿಯ ಅಧಿಕಾರ ಅನುಭವಿಸಿದ್ದೇನೆ , ಆದರೆ ಈ ರೀತಿಯ ಸರಕಾರ ನೋಡಿಲ್ಲ. ಇದು ಕರ್ನಾಟಕದ ಜನರ ತಪ್ಪಿನ ಪಾಪಕ್ಕೆ ಬಂದ ಸರಕಾರವಾಗಿದ್ದು, ಆದ್ದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಡಿ. ಕೆ ಶಿವಕುಮಾ‌ರ್ ಅವರ ಮೇಲಿನ ಸಿಬಿಐ ತನಿಖೆಯನ್ನು ಹಿಂಪಡೆದ ನಿರ್ಧಾರದ ಬಗ್ಗೆ ಮಾತನಾಡಿ ಎಂದಿದ್ದಾರೆ.

ಇದನ್ನೂ ಓದಿ: ಕಾಳಿಂಗ ಸರ್ಪದ ಹೆಡೆಯನ್ನು ನೆಕ್ಕಿ ಮುದ್ದಾಡಿದ ಹಸು !! ವೈರಲ್ ಆಯ್ತು ಅಚ್ಚರಿ ವಿಡಿಯೋ

Leave A Reply

Your email address will not be published.