Rajasthan : ರಾಜಸ್ಥಾನಕ್ಕೂ ಮುಖ್ಯಮಂತ್ರಿ ಆಗಲಿದ್ದಾರೆ ಹಿಂದೂ ಹುಲಿ ‘ಯೋಗಿ ಜೀ’ !!

Rajasthan election result 2023 BJP Mahant balaknath won latest news

Rajasthan election result 2023: ಇಡೀ ದೇಶವೇ ಪಂಚರಾಜ್ಯ ಚುನಾವಣೆಗಳ ಫಲಿತಾಂಶದತ್ತ ದೃಷ್ಟಿ ನೆಟ್ಟಿದೆ. ಇಂದು 4 ರಾಜ್ಯಗಳ ಮತ ಎಣಿಕೆ ನಡೆದಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಡ ಮೂರು ರಾಜ್ಯಗಳಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿದರೆ, ತೆಲಂಗಾಣ ಒಂದರಲ್ಲೇ ಗೆದ್ದು ಕಾಂಗ್ರೆಸ್ ಕೂಡ ದಾಖಲೆ ನಿರ್ಮಿಸಿದೆ. ಅಂದಹಾಗೆ ಇದೀಗ ಗೆಲುವೇನೋ ದೊರಕಿತು. ಮುಂದೆ ಸರ್ಕಾರ ರಚನೆಯ ಕಸರತ್ತು ನಡೆಯಬೇಕಿದೆ. ಈ ನಡುವೆ ಮುಖ್ಯಮಂತ್ರಿ ಪಟ್ಟಕ್ಕೂ ಕೆಲವರ ಹೆಸರು ಕೇಳಿಬರುತ್ತಿದ್ದು, ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನಕ್ಕೆ(Rajasthan) ಯೋಗಿಜಿ ಹೊಸ ಮುಖ್ಯಮಂತ್ರಿ ಎಂಬ ಸುದ್ದಿಯೊಂದು ಸದ್ದುಮಾಡುತ್ತಿದೆ(Rajasthan election result 2023).

ಹೌದು, ಉತ್ತರ ಪ್ರದೇಶದಲ್ಲಿ ಎರಡು ಅವಧಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಹಿಂದೂ ಹುಲಿ, ಹಿಂದೂ ಸಂತ ಯೋಗಿ ಆದಿತ್ಯನಾಥ್(Yogi Adithyanath) ಅವರನ್ನು ಮುಖ್ಯಮಂತ್ರಿ ಮಾಡಿತು. ಅಂತೆಯೇ ಯೋಗಿಯವರು ಯುಪಿಯಲ್ಲಿ ಯಾರೂ ನೋಡರಿಯದ ಆಡಳಿತವನ್ನು ನೀಡಿ ತಮ್ಮ ರಾಜ್ಯವನ್ನು ಇಡೀ ದೇಶಕ್ಕೆ ಮಾದರಿಯಾಗಿಸಿದರು. ಅಲ್ಲದೆ ಸೋಲಿಲ್ಲದ ನಾಯಕನಾಗಿ ಗುರುತಿಸಿಕೊಂಡರು. ಅಂತೆಯೇ ಇದೀಗ ರಾಜಸ್ಥಾನದಲ್ಲೂ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದೆ ಬಿಜೆಪಿ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗಿ ಬಾಲಕನಾಥ್(Yogi Balakanath) ಅವರು ಸಿಎಂ ಯೋಗಿ ಆದಿತ್ಯನಾಸಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂದಹಾಗೆ ಬಾಲಕನಾಥ್ ಅವರ ಗೆಲುವು ಖಚಿತ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಮಹಂತ್ ಬಾಲಕ ನಾಥ್ ಯೋಗಿ ಅವರಯ ತಿಜಾರಾದಲ್ಲಿ ಇಮ್ರಾನ್ ಖಾನ್ ವಿರುದ್ಧದ ಸ್ಪರ್ಧೆಯನ್ನು ತನ್ನ ಬಲವಾದ ಹೇಳಿಕೆಗಳಿಂದಲೇ ಮತದಾರರನ್ನು ಸೆಳೆದಿದ್ದಾರೆ. ತಮ್ಮ ಹಾಗೂ ಇಮ್ರಾನ್ ಖಾನ್ ನಡುವಿನ ಸ್ಪರ್ಧೆಯನ್ನು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದು ಬಣ್ಣಿಸಿದ್ದರು. ಇಷ್ಟೇ ಅಲ್ಲದೆ ಅಲ್ಲಿನ ಸ್ಥಳೀಯರ ಅಭಿಲಾಷೆ ಕೂಡ ಬಾಲಕನಾಥ್ ಅವರು ಮುಖ್ಯಮಂತ್ರಿ ಆಗಬೇಕು ಎಂಬುದಾಗಿದೆ.

ಇನ್ನು ಬಾಲಕನಾಥ್ ನಾಮಪತ್ರ ಸಲ್ಲಿಕೆ ವೇಳೆಯೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾಥ್‌ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿಯೂ ಕೂಡ ಸ್ಟಾರ್ ಪ್ರಚಾರಕರಾಗಿ ಯೋಗಿ ಆದಿತ್ಯನಾಥ್ ಅವರು ಬಾಲಕನಾಥ್ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಯೋಗಿ ಆದಿತ್ಯನಾಥ್ ಅವರಂತೆಯೇ 39 ವರ್ಷದ ಬಾಲಕ ನಾಥ್ ಹಿಂದೂ ಮಹಂತ್‌ನ ಕೇಸರಿ ನಿಲುವಂಗಿಯನ್ನು ಧರಿಸುತ್ತಾರೆ. ಅವರು ಯೋಗಿ ಆದಿತ್ಯನಾಥ್ ಅವರ ನಾಥ ಪಂಥದವರಾಗಿದ್ದಾರೆ. ಜೊತೆಗೆ ಬಾಲಕನಾಥ್ ಅವರು ರಾಜಸ್ಥಾನದ ಆದಿತ್ಯನಾಥ್ ಎಂದು ಬಿಂಬಿಸಿಕೊಂಡಿದ್ದಾರೆ. ಯುಪಿ ಮಾದರಿಯಲ್ಲಿ ಬುಲ್ಡೋಜರ್‌ ಇಲ್ಲಿಯೂ ಸದ್ದು ಮಾಡಲಿದೆ.

ಇದನ್ನೂ ಓದಿ: Urfi javed: ಇನ್ಮುಂದೆ ಉರ್ಫಿ ಜಾವೇದ್ ನ ಅರೆಬೆತ್ತಲೆ ಫೋಟೋ, ವಿಡಿಯೋ ನೋಡಲು ಆಗಲ್ಲ !! ಅಭಿಮಾನಿಗಳಿಗೆ ಶಾಕ್

Leave A Reply

Your email address will not be published.