Telangana Assembly election: ಗೆದ್ದರೂ ತೆಲಂಗಾಣದಲ್ಲಿ ನೆಲಕಚ್ಚಿದ ಕಾಂಗ್ರೆಸ್ – ಬಿಜೆಪಿ ಮುಂದೆ ತಲೆ ಬಾಗಿಬಿಟ್ಟ ಹಾಲಿ, ಭಾವಿ ಸಿಎಂ !!

Telangana assembly election results 2023 BJP K venkataramana wom in Kamareddy constituency election

Kamareddy constituency election result: ತೆಲಂಗಾಣ ರಾಜಕೀಯದ ಫಲಿತಾಂಶ ಇಡೀ ದೇಶದ ಗಮನವನ್ನು ಸೆಳೆದಿದೆ. ಕಾಂಗ್ರೆಸ್ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ ದಕ್ಷಿಣ ಭಾರತದಲ್ಲಿ ಹೊಸ ದಾಖಲೆಯನ್ನು ಬರೆದಿದೆ ಆದರೆ ತೆಲಂಗಾಣದಲ್ಲಿ ತಾನು ಗೆದ್ದರೂ ಕೂಡ ಕಾಂಗ್ರೆಸ್ ನೆಲಕಕಚ್ಚಿದಂತಾಗಿದೆ. ಯಾಕೆಂದರೆ ಫಲಿತಾಂಶದ ಕೊನೆಯ ಕ್ಷಣದಲ್ಲಿ ಹೊಸ ಎಷ್ಟೊಂದು ಸಿಕ್ಕಿದೆ.

ಹೌದು, ತೆಲಂಗಾಣದ ವಿಧಾನಸಭೆಯ ಚುನಾವಣೆಯಲ್ಲಿ(Telangana Assembly election) ಹಾಲಿ ಇರುವ ಸಿಎಂ ಗೂ ಹಾಗೂ ಮುಂದಿನ ಸಿಎಂ ಆಗುವವರಿಗೂ ಬಿಜೆಪಿ ದೊಡ್ಡ ಆಘಾತ ನೀಡಿದೆ. ಅದೇನೆಂದರೆ ಹಾಲಿ ಸಿಎಂ ಕೆಸಿಆರ್(KCR) ಹಾಗೂ ಮುಂದಿನ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಇಬ್ಬರನ್ನು ಬಿಜೆಪಿ ನಾಯಕ ವೆಂಕಟ ರಮಣ(Venkata Ramana) ಸೋಲಿಸಿಬಿಟ್ಟಿದ್ದಾರೆ. ಈ ಮೂಲಕ ಭಾರೀ ಕುತೂಹಲ ಕೆರಳಿಸಿದ್ದ ತೆಲಂಗಾಣ ವಿಧಾನಸಭೆಯ ಫಲಿತಾಂಶ( Kamareddy constituency election result)ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಪಡೆದಿದೆ.

ಅಂದಹಾಗೆ ವೆಂಕಟ ರಮಣ ಬಿರುಗಾಳಿ ಮುಂದೆ ಹಾಲಿ ಸಿಎಂ ಕೆ ಚಂದ್ರಶೇಖರ್ ರಾವ್ ಹಾಗೂ ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ರೆವಂತ್ ರೆಡ್ಡಿ ಇಬ್ಬರೂ ಸೋಲು ಕಂಡಿದ್ದಾರೆ. ಸದ್ಯದ ವರದಿ ಪ್ರಕಾರ ಬಿಜೆಪಿ ನಾಯಕ ಕೆ ವೆಂಕಟ ರಮಣ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಪಾಡಿಕೊಂಡಿದ್ದಾರೆ. ವೆಂಕಟ ರಮಣ 50294 ಮತಗಳನ್ನು ಪಡೆದಿದ್ದರೆ, ಹಾಲಿ ಸಿಎಂ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ 46780 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ ಇನ್ನು ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರೇವಂತ್ ರೆಡ್ಡಿ 45419 ಮತಗಳನ್ನು ಪಡೆದಿದ್ದಾರೆ. ಘಾಟನುಘಟಿ ನಾಯರನ್ನೇ ಸೋಲಿಸಿದ ಬಿಜೆಪಿ ನಾಯಕ ಕೆ ವೆಂಕಟ ರಮಣಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇದನ್ನೂ ಓದಿ: Bigg boss kannada: ಇವರನ್ನು ಉಳಿಸಲು ಈ ವಾರದ ಎಲಿಮಿನೇಷನ್ ಅನ್ನೇ ಕ್ಯಾನ್ಸಲ್ ಮಾಡಿದ ಸುದೀಪ್ ?! ಅರೆ, ಕಿಚ್ಚ ಹೀಗೆ ಮಾಡಿದ್ಯಾಕೆ?!

Leave A Reply

Your email address will not be published.