Reincarnation: ಸತ್ತು ಅಂತ್ಯಸಂಸ್ಕಾರವೂ ಆಯಿತು, ಆದ್ರೆ ನಾಲ್ಕೇ ದಿನಕ್ಕೆ ಮರುಜನ್ಮ ಪಡೆದು ಮನೆಗೆ ಬಂದ !! ಹೆಂಡತಿಯೊಂದಿಗೆ ಹೊಸದಾಗಿ ಮದ್ವೆನೂ ಆದ

Uttarakhand news Dead' Man Found Alive reincarnation And Then 'Remarried'

Reincarnation: ಆತನ ಸಾವಿನ ಬಳಿಕ ಮನೆಯವರೆಲ್ಲಾ ಸೇರಿ ಅಂತ್ಯಸಂಸ್ಕಾರ ಮಾಡಿ ಬಂದರು. ದುಃಖದಲ್ಲೇ 3 ದಿನವನ್ನು ಕಳೆದರು. ಆದರೆ ನಾಲ್ಕನೇ ದಿನಕ್ಕೆ ಆ ವ್ಯಕ್ತಿ ದಿಢೀರ್ ಎಂದು ಪ್ರತ್ಯಕ್ಷವಾಗಿಬಿಟ್ಟಿದ್ದಾನೆ. ಅಷ್ಟೇ ಅಲ್ಲ ಮನೆಗೆ ಬಂದು ತನ್ನ ಹೆಂಡತಿಯನ್ನು ಮತ್ತೆ ಮದುವೆಯಾಗಿದ್ದಾನೆ !! ಅರೆ ಏನಪ್ಪಾ, ಇವರೇನು ಸಿನಿಮಾ ಕಥೆ ಹೇಳ್ತಿದ್ದಾರಾ ಎಂದು ಭಾವಿಸಬೇಡಿ. ಇದು ರಿಯಲ್ ಬದುಕಿನ ರಿಯಲ್ ಕಥೆ ಕಂಡ್ರಿ.

ಹೌದು, ಮೇಲೆ ಪೀಠಿಕೆ ಹಾಕಿದ ಸ್ಟೋರಿ ನೈಜ ಘಟನೆ. ಅದೂ ಕೂಡ ನಮ್ಮ ಭಾರತದಲ್ಲೇ ನಡೆದದ್ದು. ಹೌದು, ಉತ್ತರಖಂಡದ(Uttarkhanda) ಪಿತೋರಘಡದ ಖಾತಿಮಾ ಎಂಬಲ್ಲಿ ಇಂಥ ಒಂದು ವಿಚಿತ್ರ ಘಟನೆ ನಡೆದಿದೆ. ಅದೇನೆಂದರೆ 42 ವರ್ಷದ ನವೀನ್ ಚಂದ್ರ ಭಟ್ ಒಂದು ವರ್ಷದ ಹಿಂದೆಯೇ ಪತ್ನಿ ಜೊತೆ ಮನಸ್ತಾಪದಿಂದ ಮನೆಬಿಟ್ಟಿದ್ದ. ಈ ಕುರಿತು ಕಳೆದ ವರ್ಷವೇ ದೂರು ಕೂಡ ದಾಖಲಾಗಿದೆ. ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿ ಆತ ಎಲ್ಲೂ ಪತ್ತೆಯಾಗದೇ ಇದ್ದಾಗ ಸುಮ್ಮನಾಗಿಬಿಟ್ಟಿದ್ದರು.

ಇದೀಗ ನವೆಂಬರ್ 25ರಂದು ಇದ್ದಕ್ಕಿದ್ದಂತೆ ಪೊಲೀಸರಿಂದ ಕುಟುಂಬಸ್ಥರಿಗೆ ಕರೆ ಬಂದಿದೆ. ನವೀನ್ ಮೃತದೇಹವ ಪತ್ತೆಯಾಗಿದೆ, ಖಚಿತಪಡಿಸಲು ಆಸ್ಪತ್ರೆಗೆ ಬನ್ನಿ ಎಂದಿದ್ದಾರೆ. ಅಂತೆಯೇ ಮನೆಯವರೆಲ್ಲಾ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದಾಗ ಮೃತದೇಹದ ಶರ್ಟ್ ಜೇಬಿನಲ್ಲಿ ನವೀನ್ ಗುರುತಿನ ಚೀಟಿ, ಕೋವಿಡ್ ಸಂದರ್ಭದಲ್ಲಿ ಮಾಡಿದ್ದ ಮೆಡಿಕಲ್ ಚೆಕ್‌ಅಪ್ ದಾಖಲೆಗಳು ಪತ್ತೆಯಾಗಿದೆ. ಕೊನೆಗೆ ಇದು ನಮ್ಮ ನವೀನ್ ಅವರೇ ಎಂದು ಕುಟುಂಬಸ್ಥರು ಮೃತದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಿದ್ದಾರೆ.

ಆದ್ರೆ ವಿಚಿತ್ರ ಎಂಬಂತೆ ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ನವೀನ್ ಕುಟುಂಬಸ್ಥರು ಅಚ್ಚರಿ ಮಾಹಿತಿ ನೀಡಿದ್ದಾರೆ. ಅದೇನೆಂದರೆ ನಾಪತ್ತೆಯಾಗಿರುವ ನವೀನ್ ಸತ್ತಿಲ್ಲ ಎಂದು ತಿಳಿಸಿದ್ದಾರೆ. ಯಾಕೆಂದರೆ ರುದ್ರಾಪುರ್‌ ಹೋಟೆಲ್ ಒಂದರಲ್ಲಿ ನವೀನ್ ಅವರನ್ನು ನೋಡಿ ಅಲ್ಲಿಂದಲೆ ನವೀನ್ ಪತ್ನಿ ಹಾಗೂ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಬಳಿಕ ನವೀನ್ ಕೂಡ ಕುಟುಂಬಸ್ಥರ ಜೊತೆ ಮಾತನಾಡಿದ್ದಾನೆ. ಕೊನೆಗೆ ಕುಟುಂಬಸ್ಥರು ನವೀನ್ ಸತ್ತಿಲ್ಲ ಎಂದು ನಿಟ್ಟುಸಿರುಬಿಟ್ಟಿದ್ದಾರೆ.

ಕೊನೆಗೆ ನವೀನ್ ಸಹೋದರ ಸೇರಿದಂತೆ ಕುಟುಂಬಸ್ಥರು ರುದ್ರಾಪುರ್‌ಗೆ ತೆರಳಿ ನವೀನ್ ಕರೆ ತಂದಿದ್ದಾರೆ. ಬಳಿಕ ಮನೆಗೆ ಮರಳಿದ ನವೀನ್‌ಗೆ ಹೊಸ ಹೆಸರು ಇಡಲಾಗಿದೆ. ಇಷ್ಟೇ ಅಲ್ಲದೆ ಪತ್ನಿ ಜೊತೆ ಮರು ಮದುವೆ ಮಾಡಿಸಲಾಗಿದೆ. ಇದೀಗ ನವೀನ್ ಹೊಸ ಬದುಕು ಆರಂಭಿಸಿದ್ದಾರೆ.

ಇದನ್ನೂ ಓದಿ: D.V. Sadananda Gowda: ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ದೂರವಿಟ್ಟು, ಪಕ್ಷದಲ್ಲಿ ಗುಂಪುಗಾರಿಕೆ ಕೊನೆಗೊಳಿಸಿ: ರಾಜ್ಯ ಬಿಜೆಪಿಗೆ ಡಿವಿಎಸ್‌ ಹೊಸ ಟಾಂಗ್

Leave A Reply

Your email address will not be published.